ಪೂಜೆಗಳಲ್ಲೆ ಗಣೇಶನ ಪೂಜೆ ಅಗ್ರಗಣ್ಯ; ಡಾ.ಕಲಗುರ್ತಿಮಠ ಗುರುಜಿ

0
13

ಕಲಬುರಗಿ: ಗಣೇಶ ಚತುರ್ಥಿ ಹಿಂದು ಧರ್ಮದ ಪ್ರಮುಖ ಹಬ್ಬವಾಗಿದೆ. ಇದು ವಿದೇಶದಲ್ಲಿ ಆಚರಿಸುವುದು ನೋಡಿದರೆ ಭಾರತ ಇಡೀ ವಿಶ್ವದಲ್ಲೇ ಸಂಸ್ಕøತಿ ಹಾಗೂ ಸನಾತನ ಪದ್ದತಿಗೆ ಗುರುವಿನ ಸ್ಥಾನ ಪಡೆಯಲಿದೆ ಎಂದು ವಿದ್ಯಾನಗರದ ಮಲ್ಲಿಕಾರ್ಜುನ ತರುಣ ಸಂಘದ 25ನೇ ವಾರ್ಷಿಕೋತ್ಸವ ಹಾಗೂ ಗಣೇಶೋತ್ಸವ ಕಾರ್ಯಕ್ರಮ ಸಾನಿಧ್ಯ ವಹಿಸಿದ ಅಖಿಲ ಕರ್ನಾಟ ವೀರಶೈವ ಅರ್ಚಕ ಹಾಗೂ ಪುರೋಹಿತರ ಸಂಘದ ಕಾರ್ಯಧ್ಯಕ್ಷರಾದ ಡಾ. ಬಸವರಾಜ ಕಲಗುರ್ತಿಮಠ ಗುರುಜಿ ಆಶೀರ್ವಚನ ನೀಡಿದರು.

ಈ ಹಬ್ಬ ಜನರ ಬುದ್ಧಿವಂತಿಕೆ, ಸಮೃದಿ, ಅದೃಷ್ಠ ಮತ್ತು ಶುಭ ಫಲಕ್ಕಾಗಿ ಆಚರಿಸುತ್ತಾರೆ. ಎಲ್ಲಾ ಪೂಜೆಗಳಲ್ಲಿ ಗಣೇಶನ ಪೂಜೆ ಅಗ್ರಗಣ್ಯ ಸ್ಥಾನ ಪಡೆದಿದೆ. ಎಲ್ಲಾ ಧಾರ್ಮಿಕ ಶುಭ ಕಾರ್ಯಗಳಲ್ಲಿ ಗಣೇಶನ ಪೂಜೆ ನಂತರವೇ ಎಲ್ಲಾ ದೇವತೆಗಳ ಪೂಜೆ ನೆರವೇರುವುದು ಎನ್ನುತ್ತಾ ಅನೇಕ ಆಚರಣೆಗಳ ಪದ್ಧತಿಗಳ ಮಹತ್ವ ಕುರಿತು ವಿವರಿಸಿದರು.

Contact Your\'s Advertisement; 9902492681

ಹಿಂದು ಧರ್ಮ ಸಾವಿರಾರು ವರ್ಷಗಳಿಂದ ಜೀವಂತವಾಗಿರುವ ಧರ್ಮ ಅಂತಹ ಸಂಪ್ರದಾಯವೇ ಭಾರತ ಉಪಖಂಡದಲ್ಲಿ ಹುಟ್ಟಿ ಭಾರತೀಯ ಸಂಸ್ಕøತಿಯನ್ನು ರೂಪಿಸಿದೆ. ಹಿಂದು ಧರ್ಮವು ಕೇವಲ ಧರ್ಮವಲ್ಲ ಅದು ಬಹುಪಾಲು ಭಾರತೀಯರ ಅವಿಭಾಜ್ಯ ಗುರುತಾಗಿದೆ. ಅಂತಹ ಗುರುತು ಉಳಿಸಿ-ಬೆಳೆಸಿಕೊಂಡು ಹೋಗುವುದು ಯುವಕರ ಮೇಲಿದೆ ಹಾಗಾಗಿ ಪಾಲಕರು ನಮ್ಮ ಧರ್ಮದ ಆಚರಣೆ, ಸಂಸ್ಕøತಿ ಪದ್ಧತಿಗಳ ಬಗ್ಗೆ ಮಕ್ಕಳಿಗೆ ತಿಳಿಹೇಳುವುದು ಹಿಂದೆಂದಿಗಿಂತಲು ಅತಿ ಅವಶ್ಯವಾಗಿದೆ ಎಂದು ಕಲ್ಯಾಣ ಕರ್ನಾಟಕ ವಾಣಿಜ್ಯ ಅಧ್ಯಕ್ಷ ಶಶಿಕಾಂತ ಪಾಟೀಲ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ಮಲ್ಲಿಕಾರ್ಜುನ ತರುಣ ಸಂಘದ ಶಿವರಾಜ ಅಂಡಗಿ ವಹಿಸಿದರು. ವೆಲ್‍ಫೇರ ಸೊಸೈಟಿ ಅಧ್ಯಕ್ಷ ಮಲ್ಲಿನಾಥ ದೇಶಮುಖ, ತರುಣ ಸಂಘದ ಉಪಾಧ್ಯಕ್ಷ ವಿರೇಶ ನಾಗಶೆಟ್ಟಿ, ಕಾರ್ಯದರ್ಶಿ ಕರಣ ಆಂದೋಲಾ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಹಿರಿಯರಾದ ಬಸವಂತರಾವ ಜಾಬಶೆಟ್ಟಿ, ವಿಶ್ವನಾಥ ರಟಕಲ್, ಶಾಂತಯ್ಯ ಬೀದಿಮನಿ, ರೇವಣಸಿದ್ದಪ್ಪ ಜೀವಣಗಿ, ಸಂಗಮೇಶ ದಿವಟಗಿ, ಮಲ್ಲಿಕಾರ್ಜುನ ನಾಗಶೆಟ್ಟಿ, ಸಂಘದ ಪದಾಧಿಕಾರಿಗಳಾದ ಶಶಿಧರ ಪ್ಯಾಟಿ, ಸಂಜು ತಂಬಾಕೆ, ಸಂಗಮೇಶ ಹೆಬ್ಬಾಳ, ಶಿವರಾಜ ಕೋಳಕುರ, ವಿಕಾಶ ತೊರವಿ, ಹರ್ಷ ಪಾಟೀಲ, ಅಮಿತ ಸಿಕೇದ, ಲಿಂಗರಾಜ ಕಾಳೆ, ಅನೀಲ ನಾಗೂರ, ವಿಶ್ವನಾಥ ಮಠಪತಿ ಹಾಗೂ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here