ವಿವಿಧ ಬೇಡಿಕೆ ಈಡೇರಿಸಲು ಛಾಯಾಚಿತ್ರಗ್ರಾಹಕರ ಸಂಘ ಶಾಸಕರಿಗೆ ಮನವಿ

0
28

ಸುರಪುರ: ರಾಜ್ಯದಲ್ಲಿನ ಛಾಯಾಚಿತ್ರಗ್ರಾಹಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಬೆಳಗಾವಿ ಅಧಿವೇಶನದಲ್ಲಿ ಸರಕಾರದ ಗಮನಕ್ಕೆ ತರುವಂತೆ ನಗರದಲ್ಲಿ ಸುರಪುರ ತಾಲೂಕು ಛಾಯಾಚಿತ್ರಗ್ರಾಹಕರ ಸಂಘ ದಿಂದ ಶಾಸಕ ರಾಜುಗೌಡ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಛಾಯಾಗ್ರಹಣ ಕ್ಷೇತ್ರಕ್ಕಾಗಿ ಫೋಟೊಗ್ರಫಿ ಅಕಾಡೆಮಿ ಸರಕಾರ ಆರಂಭಿಸಬೇಕು,ವೃತ್ತಿಪರ ಛಾಯಾ ಗ್ರಾಹಕರಿಗೆ ಕಾರ್ಮಿಕರಿಗೆ ನೀಡುವ ಸವಲತ್ತುಗಳನ್ನು ನೀಡಬೇಕು,ಛಾಯಾಗ್ರಾಹಕರಿಗೆ ಮುದ್ರಾ ಯೋಜನೆಯಡಿ ಸಾಲ ನೀಡಬೇಕು,ಛಾಯಾ ಗ್ರಾಹಕರಿಗೆ ಪತ್ರಿಕಾ ಮಾಧ್ಯಮದವರಿಗೆ ನೀಡುವಂತ ಎಲ್ಲಾ ಸೌಲಭ್ಯಗಳನ್ನು ನಮಗೂ ನೀಡಬೇಕು,ಛಾಯಾಚಿತ್ರಗ್ರಾಹಕರ ಕಲ್ಯಾಣ ನಿಧಿ ಟ್ರಸ್ಟ್‍ಗೆ ಸರಕಾರ ಧನ ಸಹಾಯ ಮಾಡಬೇಕು,ಸರ್ಕಾರದ ಕಾರ್ಯಕ್ರಮಗಳ ಚಿತ್ರೀಕರಣ ಮಾಡಲು ವೃತ್ತಿಪರ ಛಾಯಾಗ್ರಾಹಕರಿಗೆ ಅವಕಾಶ ನೀಡಬೇಕು,ಬಾಲ್ಯ ವಿವಾಹ ಪ್ರಕರಣಗಳಲ್ಲಿ ಫೋಕ್ಸ್ ಕಾಯ್ದೆ ಅಡಿಯಲ್ಲಿ ಛಾಯಾಗ್ರಾಹಕರನ್ನು ಬಂಧಿಸುವುದು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ನಾಗರಾಜ ಅಲದರ್ತಿ,ಪ್ರಧಾನ ಕಾರ್ಯದರ್ಶಿ ಅಂಬರೀಶ ಬಿರಾದಾರ,ವಿಜಯ ದೇವಾಪುರ,ಸುಭಾನ ಅನ್ಸಾರಿ,ಲಕ್ಷ್ಮಣ ತೋಟದ,ಶ್ರೀಕಾಂತ ತೋಟದ,ಪ್ರಕಾಶ ಬಡಿಗೇರ,ಅಬುಬಕರ್,ಜಮೀರ ಅಹ್ಮದ್,ಶಿವು ರತ್ತಾಳ,ವಿರೇಶ ರತ್ತಾಳ,ಅವಿನಾಶ ಎಲಿಗಾರ,ಹಣಮಂತ್ರಾಯ ಕರ್ನಾಳ,ಶೇಖ ಖದೀರ್,ಸದ್ದಾಂ,ರಂಗನಾಥ,ಮುರಳಿ ಅಂಬುರೆ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here