ಆಳಂದ ; ಇಂದು ಸಾಕಷ್ಟು ಟ್ರಸ್ಟ್ ಸಂಘ ಸಂಸ್ಥೆಗಳು ಹುಟ್ಟಿಕೊಳ್ಳುತ್ತಿದ್ದು ಆ ಸಂಸ್ಥೆಗಳು ಜನಪರವಾಗಿ ಸಮಾಜ.ಮುಖಿಯಾಗಿ ಕೆಲಸ ಮಾಡವ.ಮೂಲಕ ಉತ್ತಮ ಕಾರ್ಯ ಮಾಡಬೇಕು ಎಂದು ಶಿವಲಿಂಗೇಶ್ವರ ಮಠದ ಪಿಠಾಧೀಪತಿ ಶ್ರೀಅಭಿನ ಶಿವಲಿಂಗ ಸ್ವಾಮೀಜಿ ನುಡಿದರು.
ತಾಲೂಕಿನ ಮಾದನ ಹಿಪ್ಪರಗಾ ಗ್ರಾಮದಲ್ಲಿ ನೂತನವಾಗಿ ಸ್ಥಾಪಿಸಲಾದ ಶಾಲಾ ಮಿತ್ರ ಚಾರಿಟೇಬಲ್ ಟ್ರಸ್ಟ್(ರಿ)ನ ಉದ್ಘಾಟನೆ ಹಾಗೂ ಪದಗ್ರಹಣ ಮತ್ತು ಶಿಕ್ಷಣ ಕೃಷಿ ವಿವಿಧ ಸಾಧಕರಿಗೆ ಸನ್ಮಾನ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು ಪ್ರಸ್ತುತ ಇಂದಿನ ಸನ್ನಿವೇಶದಲ್ಲಿ ಸಾಕಷ್ಟು ಜನ ಯುವಕರು ಉನ್ನತ ಶಿಕ್ಷಣ ಉತ್ತಮ ಹುದ್ದೆ ಪಡೆದು. ಪಟ್ಟಣ ಸೇರಿ ಸುಖ ಜೀವನ ನಡೆಸುತ್ತಿದ್ದಾರೆ.ಇಲ್ಲಿನ ಅನೇಕ ಯುವಕರು ಸೇರಿ ಶಾಲಾ ಮಿತ್ರ ಟ್ರಸ್ಟ್ ಸ್ಥಾಪಿಸಿ ಉತ್ತಮ ಕಾರ್ಯ ಮಾಡುವ ಸಂಕಲ್ಪ ಮಾಡಿದ್ದಾರೆ. ತಮ್ಮ ಟ್ರಸ್ಟ್ ಮೂಲಕ ಸಮಾಜ ಬೆಳವಣಿಗೆಗೆ ಸದಾ. ಕಾಲ ಶ್ರಮಿಸಿ ಬಡವರಿಗೆ ನಿರ್ಗತಿಕರಿಗೆ ಬೆಳಕಾಗಿ ಉತ್ತಮ ಕಾರ್ಯಮಾಡಿ ನಿಮ್ಮ ಸಂಸ್ಥೆಯನ್ನು ಎತ್ತರಕ್ಕೆ ಬೆಳಸಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮ ಉದ್ದೇಶಿಸಿ ಡಾ.ಯಲ್ಲಪ್ಪ ಇಂಗಳೆ ಮಾತನಾಡಿ ಟ್ರಸ್ಟ್‍ನ ಉದ್ದೇಶ ನಮ್ಮ ನಡೆ ಗ್ರಾಮದ ಕಡೆ ಹನಿ ಹನಿ ಸೇರಿದರೆ ಹಳ್ಳ ತನೆ ತೆನೆ ಸೇರಿದರೆ ರಾಶಿ ಎನ್ನುವ ಹಾಗೆ ಎಲ್ಲಾ ಸ್ನೇಹಿತರು ಸೇರಿ ಸಮಾಜ ಮುಖಿಯಾಗಿ ಕೆಲಸ ಮಾಡಲು ಈ.ಟ್ರಸ್ಟ್ ಸ್ಥಾಪನೆ ಮಾಡಲಾಗಿದೆ ಎಂದರು.
ಸಂದರ್ಭದಲ್ಲಿ ಹಿರೇಮಠದ ಶಾಂತವೀರ ಶಿವಾಚಾರ್ಯರು ಗ್ರಾಮ ಪಂಚಾಯತಿ ಅಧ್ಯಕ್ಷೆ ಸುವರ್ಣ ಮೈಂದರ್ಗಿ ಪೆÇಲೀಸ್ ಠಾಣೆ ಪಿ ಎಸ್ ಐ ದಿನೇಶ್ ನಿವೃತ್ತ ಶಿಕ್ಷಕರಾದ ಬಸವಣ್ಣಪ್ಪ ಸಾತಲಗಾಂವ ನಾಗೇಂದ್ರಪ್ಪ ಹಳೆಮನಿ ಶ್ರೀಮತಿ ಶಾಲುಬಾಯಿ ಪತ್ತರ ಟ್ರಸ್ಟ್ ಅಧ್ಯಕ್ಷ ಮಲ್ಲಿನಾಥ್ ಪರೇಣಿ ಯುವಕರಾದ ಬಸವರಾಜ ಅರಳಿಮಾರ ಮೈಬೂಬ್ ಪಣಿಬಂದ ಮಾಂತೇಶ್ ಸಣ್ಣಮನಿ ಗೌರಿಶಂಕರ ರೂಗಿ ಹರಿದಾಸ ಹಜಾರೆ ಶಾಲಾ ಮಿತ್ರ ಚಾರಿಟೇಬಲ್ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಸಂಘದ ಸರ್ವ ಸದಸ್ಯರು ವಿದ್ಯಾರ್ಥಿಗಳು ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ. ಕೃಷಿ ಶಿಕ್ಷಣ ಸಮಾಜ ಸೇವೆ ಮಾಡಿದ ಮಹನೀಯರನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು
ಯುವಕರು ಸಮಾಜ ಸೇವಕರಾಗಿ ಮುಂದೆ ಸದೃಡ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಒತ್ತಡದ ಬದುಕಿನ ನಡುವೆ ಒಂದಿಷ್ಟು ಸಮಾಜ ಮುಖಿ ಕೆಲಸ ಮಾಡಲು ಎಲ್ಲರೂ ಕೈಜೊಡಿಸುವುದು ಇಂದಿನ ಸನ್ನಿವೇಶಕ್ಕೆ ಅವಶ್ಯಕತೆ ಇದೆ. -ಶ್ರೀಶಾಂತವೀರ ಶಿವಾಚಾರ್ಯರು ಶಾಂತೇಶ್ವರ ಹಿರೇಮಠ ಮಾದನಹಿಪ್ಪರಗಾ