ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಪಿ.ಡಿ.ಎ. ಇಂಜಿನಿಯರಿಂಗ್ ಕಾಲೇಜಿಗೆ ನವದೇಹಲಿಯ ಯುವನಿವರ್ಸಿಟಿ ಗ್ರಾಂಟ್ಸ ಕಮಿಷನ್ (ಯು.ಜಿ.ಸಿ.) 10 ವರ್ಷಗಳ ದೀರ್ಘ ಅವಧಿಗೆ ಸ್ವಾಯತ್ತತೆಯನ್ನು ಮುಂದುವರಿಸಿ ಆದೇಶ ಜಾರಿಮಾಡಿದೆ. ಕಾಲೇಜಿನ ಬಹುತೇಕ ವಿಭಾಗಗಳು ರಾಷ್ಟ್ರೀಯ ಮಾನ್ಯತೆ ಮಂಡಳಿ(ಎನ್.ಬಿ.ಎ.) ನವದೇಹಲಿಯಿಂದ ಮಾನ್ಯತೆ ಪಡೆದಿದ್ದುದ್ದರಿಂದ ಯು.ಜಿ.ಸಿ. 10 ವರ್ಷಗಳ ದೀರ್ಘಾವಧಿಗೆ ಸ್ವಾಯತ್ತತೆಯನ್ನು ಮುಂದುವರೆಸಲು ಆದೇಶ ನೀಡಿದೆ ಎಂದು ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಭೀಮಾಶಂಕರ ಸಿ. ಬಿಲಗುಂದಿ ಅವರು ತಿಳಿಸಿದರು.
ಸ್ವಾಯತ್ತತೆಯು ಮುಂದುವರೆದ ಬಗ್ಗೆ ತಮ್ಮ ಹರ್ಷವನ್ನು ವ್ಯಕ್ತಪಡಿಸಿದ ಅವರು ಕಳೆದ ಐದು ವರ್ಷಗಳಲ್ಲಿ ಕಾಲೇಜಿನಲ್ಲಿ ಸಂಶೋಧನೆ ಮತ್ತು ಪೆಟೆಂಟ್‍ಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು ಪ್ರತಿವರುಷ ವಿದ್ಯಾರ್ಥಿಗಳ ಪ್ರವೇಶಾತಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ನಡೆದಿದೆ ಎಂದು ತಿಳಿಸಿದರು.
ಕಾಲೇಜಿನ ಆಡಳಿತ ಮಂಡಳಿ ಸದಸ್ಯರು ಹಾಗೂ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಬಸವರಾಜ ಜೆ. ಖಂಡೆರಾವ, ಸೋಮನಾಥ ಸಿ. ನಿಗ್ಗುಡಗಿ, ಡಾ. ಎಸ್. ಬಿ. ಕಾಮರೆಡ್ಡಿ ಹಾಗೂ ವಿನಯ ಪಾಟೀಲ ಅವರು ತಮ್ಮ ಸಂತಸವನ್ನು ವ್ಯಕ್ತಪಡಿಸಿ ಕಾಲೇಜಿನ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂಧಿಗಳಿಗೆ ಶುಭಕೋರಿದರು.
ಕಾಲೇಜಿನ ಪ್ರಾಚಾರ್ಯರಾದ ಡಾ. ಎಸ್. ಆರ್. ಮೀಸೆ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿ ಕಾಲೇಜಿನ ಬಹುತೇಕ ವಿಭಾಗಗಳು ರಾಷ್ಟ್ರೀಯ ಮಾನ್ಯತಾ ಮಂಡಳಿ, ನವದೇಹಲಿಯಿಂದ ಮಾನ್ಯತೆ ಪಡೆದಿದ್ದು ಬಹಳ ಅನುಕೂಲವಾಗಿದ್ದು ಅದಕ್ಕಾಗಿ ಅವರು ಎಲ್ಲ ವಿಭಾಗಳ ಮುಖ್ಯಸ್ಥರು, ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂಧಿಗಳ ಪರಿಶ್ರಮಕ್ಕೆ ಅವರಿಗೆ ಧನ್ಯವಾದಗಳನ್ನು ಹೇಳಿದ ಅವರು ಕಾಲೇಜಿನ ಶೈಕ್ಷಣಿಕ ವಲಯದ ಉಪಪ್ರಾಚಾರ್ಯ ಡಾ. ಭಾರತಿ ಹರಸೂರ, ಆಡಳಿತ ವಲಯದ ಉಪಪ್ರಾಚಾರ್ಯ ಡಾ. ಕಲ್ಪನಾ ವಾಂಜರಖೇಡ ಡೀನ್ ಡಾ. ಎಸ್. ಆರ್. ಹೊಟ್ಟಿ ಹಾಗೂ ಹೆಚ್ಚುವರಿ ಶೈಕ್ಷಣಿಕ ಡೀನ್ ಪ್ರೋ. ಅಶೋಕ ಪಾಟೀಲ, ಶೈಕ್ಷಣಿಕ ವಲಯದ ಉಪ-ಡೀನರಾದ ಡಾ. ಸಂತೋಷ ಕೋರಿ, ಡಾ. ವೀರೇಶ ಮಲ್ಲಾಪೂರ ಮತ್ತು ಖಾಜಾ ಮೋಯಿನುದ್ದಿನ ಅವರ ಸತತ ಪರಿಶ್ರಮ ಕೂಡ ಸ್ವಾಯತ್ತತೆಯ ಮುಂದುವರೆಕೆಗೆ ಸಹಾಯಕಾರಿಯಾಗಿದೆ ಎಂದು ತಿಳಿಸಿದರು.