ಶಹಾಬಾದ: ಹಂದಿ ಮಾಲೀಕರಿಂದ ಹಂದಿಗಳ ಸ್ಥಳಾಂತರ

0
40

ಶಹಾಬಾದ :ನಗರದಲ್ಲಿ ಹಂದಿ ಮಾಲೀಕರು ಹಂದಿಗಳನ್ನು ಹಿಡಿದು ನಗರದ ಹೊರಗಡೆ ಸಾಗಿಸುತ್ತಿರುವುದರಿಂದ ಹಂದಿಗಳ ಕಾಟದಿಂದ ಬೇಸತ್ತ ಜನರಿಗೆ ಮುಕ್ತಿ ಸಿಕ್ಕಂತಾಗಿದೆ.
ಬಹುದಿನಗಳಿಂದ ನಗರದಲ್ಲಿನ ಸಾರ್ವಜನಿಕರಿಗೆ ಹಂದಿಗಳ ಕಾಟದಿಂದ ಬೇಸತ್ತು ಹೋಗಿದ್ದರು.

ಮಕ್ಕಳು ಹೊರಗಡೆ ಹೋಗದಂತೆ ಹಾಗೂ ಆಟವಾಡದಂತಾಗಿತ್ತು. ಅಲ್ಲದೇ ಮನೆಯೊಳಗೆ ಆಹಾರಕ್ಕಾಗಿ ನುಗ್ಗುತ್ತಿರುವುದು ಕಂಡು ಬಂದಿದ್ದವು. ದಿನೇ ದಿನೇ ಹಂದಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಹಂದಿಗಳ ಕಾಟವೂ ಹೆಚ್ಚಾಗತೊಡಗಿದ್ದರಿಂದ ಸಾರ್ವಜನಿಕರು ನಗರಸಭೆಯ ಅಧಿಕಾರಿಗಳಿಗೆ ದೂರು ಸಲ್ಲಿಸುತ್ತಿದ್ದರು.

Contact Your\'s Advertisement; 9902492681

ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಿದ ನಗರಸಭೆಯ ಪೌರಾಯುಕ್ತೆ ಪಂಕಜಾ ರಾವೂರ, ಪರಿಸರ ಎಇಇ ಅಭಯಕುಮಾರ ಹಾಗೂ ಆರೋಗ್ಯ ನಿರೀಕ್ಷಕರಾದ ಶಿವರಾಜಕುಮಾರ ಹಂದಿ ಮಾಲೀಕರನ್ನು ಕರೆಯಿಸಿ ಹಂದಿಗಳ ಕಾಟ ವಿಪರೀತವಾಗಿದ್ದು, ಕೂಡಲೇ ತಮ್ಮ ತಮ್ಮ ಹಂದಿಗಳನ್ನು ಸ್ಥಳಾಂತರಿಸಬೇಕು.ಇಲ್ಲದಿದ್ದರೇ ನಿಮ್ಮ ಮೇಲೆ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.

ಹಂದಿ ಮಾಲೀಕರು ನಗರಸಭೆಯ ಅಧಿಕಾರಿಗಳ ಮಾತಿಗೆ ಸ್ಪಂದಿಸಿ ಎರಡು ದಿನಗಳಿಂದ ಸುಮಾರು ನೂರಾರು ಹಂದಿಗಳನ್ನು ಹಿಡಿದು ಸ್ಥಳಾಂತರ ಮಾಡುತ್ತಿದ್ದಾರೆ. ನೂರಾರು ಹಂದಿಗಳನ್ನು ಹಿಡಿದು ಸಾಗಿಸಿದರೂ ಇನ್ನೂ ಸುಮಾರು ಅಧಿಕ ಹಂದಿಗಳು ನಗರದಲ್ಲಿ ವಾಸವಾಗಿವೆ. ಇಂದೆರಡು ದಿನ ಸಾಗಿಸಿದಂತೆ ಮಾಡಿ ಮತ್ತೆ ಹಂದಿ ಮಾಲೀಕರು ತಮ್ಮ ಹಂದಿಗಳನ್ನು ಹಿಡಿದು ಸಾಗಾಟ ಮಾಡಲು ಹಿಂದೇಟು ಹಾಕುತ್ತಾರೆ.ಆದ್ದರಿಂದ ಇನ್ನೂ ಹಂದಿಗಳು ನಗರದಲ್ಲಿ ಸಂಚರಿಸುತ್ತಿದ್ದು ಇವುಗಳನ್ನು ಸಹ ಆದಷ್ಟು ಬೇಗನೆ ಹಿಡಿದು ಸಾಗಾಟ ಮಾಡುವಂತೆ ನಾಗರಿಕರು ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here