ಶಹಾಬಾದ: ಉದ್ಯೋಗ ಖಾತ್ರಿ ಯೋಜನೆ ಅನುμÁ್ಠನ, ತೆರಿಗೆ ವಸೂಲಿ,ಬೀದಿ ದೀಪಗಳ ನಿರ್ವಹಣೆ ಸೇರಿದಂತೆ ಗ್ರಾಮದಲ್ಲಿ ಸ್ವಚ್ಛತೆಯನ್ನು ಗಮನಿಸಿ ಪ್ರಸಕ್ತ ವರ್ಷ ತಾಲೂಕಿನ ಭಂಕೂರ ಗ್ರಾಪಂಗೆ 2022-23ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಬ್ಯಾಂಕ್ ವೈಟ್ ಹಾಲ್‍ನಲ್ಲಿ ಸರ್ಕಾರದ ವತಿಯಿಂದ ಹಮ್ಮಿಕೊಂಡ ಗಾಂಧಿ ಗ್ರಾಮ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ ಪ್ರಿಯಾಂಕ ಖರ್ಗೆ ಅವರು ಭಂಕೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಶರಣಬಸಪ್ಪ ಧನ್ನಾ ಅವರಿಗೆ ಗಾಂಧಿ ಗ್ರಾಮ ಪುರಸ್ಕಾರ ಹಾಗೂ ಲ್ಯಾಪ್ ಟಾಪ್ ಮತ್ತು ಒಂದು ಮೊಬೈಲ್ ಹಾಗೂ 5ಲಕ್ಷ ರೂ. ನೀಡಿ ಗೌರವಿಸಿದರು.
ಗ್ರಾಮ ಪಂಚಾಯತಿಗಳು ಸ್ಥಳೀಯ ಮಟ್ಟದಲ್ಲಿ ಸ್ವಯಂ ಆಡಳಿತ ಸಂಸ್ಥೆಗಳಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕೆಂಬ ಸದುದ್ದೇಶದಿಂದ ರಾಜ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಗ್ರಾಪಂಗಳನ್ನು ಪೆÇ್ರೀತ್ಸಾಹಿಸುವ ಉದ್ದೇಶದಿಂದ ಕಳೆದ 2013-14ನೇ ಸಾಲಿನಿಂದ ಪ್ರತಿ ತಾಲೂಕಿಗೆ ಒಂದರಂತೆ ಗ್ರಾಪಂಯನ್ನು ಗಾಂಧಿ ಪುರಸ್ಕಾರಕ್ಕೆ ಆಯ್ಕೆ ಮಾಡಿಕೊಂಡು ಬರಲಾಗುತ್ತಿದೆ.ಇದರಲ್ಲಿ ಪ್ರಸಕ್ತ ವರ್ಷ ತಾಲೂಕಿನ ಭಂಕೂರ ಗ್ರಾಪಂಗೆ 2022-23ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿತ್ತು.
ತಾಲೂಕಿಗೆ ಮರತೂರ,ತೊನಸನಹಳ್ಳಿ(ಎಸ್)ಹೊನಗುಂಟಾ ಹಾಗೂ ಭಂಕೂರ ಗ್ರಾಪಂಗಳು ಒಳಗೊಂಡಿವೆ. ಸರಕಾರ ನಿಗದಿಪಡಿಸಿದ ಗುರಿಯೊಂದಿಗೆ ಉದ್ಯೋಗ ಖಾತ್ರಿ ಕಾಮಗಾರಿಯಲ್ಲಿ ಅತ್ಯುತ್ತಮ ಪ್ರಗತಿ ಸಾಧಿಸಿದ ಭಂಕೂರ ಗ್ರಾಪಂಗೆ ಸಲ್ಲುತ್ತದೆ. ಉದ್ಯೋಗ ಖಾತ್ರಿ ಯೋಜನೆ ಅನುμÁ್ಠನ, ತೆರಿಗೆ ವಸೂಲಿ, ಚೆಕ್ ಡ್ಯಾಮ್ ಮತ್ತು ಕೃಷಿ ಹೊಂಡ ನಿರ್ಮಾಣ, ಕುಡಿಯುವ ನೀರಿನ ಪೂರೈಕೆ, ಬೀದಿ ದೀಪಗಳ ನಿರ್ವಹಣೆ, ಕೊಳವೆ ಬಾವಿ ಮರುಪೂರಣ ವ್ಯವಸ್ಥೆ, ಪ್ಲಾಸ್ಟಿಕ್ ನಿಷೇಧದ ಕುರಿತು ಜಾಗೃತಿ ಹೀಗೆ ಹತ್ತು ಹಲವು ಕಾಮಗಾರಿಗಳಲ್ಲಿ ಗ್ರಾಪಂಗಳ ಸಾಧನೆ ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.
ಲ್ಯಾಪ್ ಟಾಪ್ ಮತ್ತು ಒಂದು ಮೊಬೈಲ್‍ನ್ನು ಗ್ರಂಥಾಲಯಕ್ಕೆ ನೀಡಲಾಗಿದ್ದು, ಗಾಂಧಿ ಗ್ರಾಮ ಪುರಸ್ಕಾರ ಹಾಗೂ 5ಲಕ್ಷ ರೂ. ಪಂಚಾಯತಿ ನೀಡಲಾಗಿದೆ.
ಪಂಚಾಯಿತಿ ಗಾಂಧಿ ಗ್ರಾಮ ಪುರಸ್ಕಾರ ನೀಡಿರುವುದು ಸಂತಸ ತಂದಿದೆ. ಇನ್ನು ಮುಂದೆಯಾದರೂ ಎಲ್ಲರ ಸಹಕಾರ ತತ್ವದಡಿ ಕೆಲಸ ಮಾಡಲಾಗುತ್ತದೆ.ಅಲ್ಲದೇ ಭಂಕೂರ ವೃತ್ತದಿಂದ ಗ್ರಾಮದವರೆಗಿನ ರಸ್ತೆ ಮಾಡುವುದು ಮೊದಲನೇ ಆದ್ಯತೆ ನೀಡಿ ಸುಗಮ, ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಮುಂದಾಗಿದ್ದೆನೆ.ಈ ಪ್ರಶಸ್ತಿ ಇನ್ನಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಪ್ರೇರಣೆ ಆಗಿದೆ- -ಶರಣಬಸಪ್ಪ ಧನ್ನಾ ಅಧ್ಯಕ್ಷರು ಗ್ರಾಪಂ ಭಂಕೂರ.