ಅಧಿಕಾರಿಗಳು ಮನೆಮನೆಗೆ ತೆರಳಿ ತೆರಿಗೆ ಪಾವತಿಸಲು ಮನವಿ/ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ

0
57
ಸ್ವಯಂಪ್ರೇರಿತರಾಗಿ ಸಾರ್ವಜನಿಕರು ತೆರಿಗೆ ಪಾವತಿಸಿ-ಪಂಕಜಾ ರಾವೂರ

ಶಹಾಬಾದ:ನಗರಸಭೆಯ ಪೌರಾಯುಕ್ತೆ ಪಂಕಜಾ ರಾವೂರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ವಾಣಿಜ್ಯ ಉದ್ದಿಮೆ ಪರವಾನಗಿ, ಆಸ್ತಿ ತೆರಿಗೆ, ನೀರಿನ ಕರ ಪಾವತಿಸದ ಸಾರ್ವಜನಿಕರ ಮನೆಮನೆಗೆ ತೆರಳಿ ತೆರಿಗೆ ವಸೂಲಾತಿ ಹಾಗೂ ತೆರಿಗೆ ನಿಗದಿತ ಸಮಯದೊಳಗೆ ಪಾವತಿಸುವಂತೆ ಮನವಿ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ: ನಗರಸಭೆಯ ಪೌರಾಯುಕ್ತೆ ಪಂಕಜಾ ರಾವೂರ ಅವರು, ಈಗಾಗಲೇ ಬಾಕಿ ಹಾಗೂ ಚಾಲ್ತಿ ತೆರಿಗೆಯನ್ನು ಸಾಕಷ್ಟು ಜನರು ಪಾವತಿಸದ ಕಾರಣ ನಗರಸಭೆ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ. ಸ್ವಯಂಪ್ರೇರಿತರಾಗಿ ಸಾರ್ವಜನಿಕರು ವಾಣಿಜ್ಯ ಉದ್ದಿಮೆ ಪರವಾನಗಿ, ಆಸ್ತಿ ತೆರಿಗೆ, ನೀರಿನ ಕರ ಪಾವತಿ ಮಾಡುವುದು ಅವರ ಆದ್ಯ ಕರ್ತವ್ಯ.ಆದರೆ ಕರಪಾವತಿ ಮಾಡಲು ಮುಂದಾಗುತ್ತಿಲ್ಲ.ಈಗಾಗಲೇ ಅನೇಕ ಬಾರಿ ಕರ ಪಾವತಿಸುವಂತೆ ಮನವಿ ಮಾಡಲಾಗಿದೆ. ತೆರಿಗೆ ಸಂಗ್ರಹವಾದರೆ ಮಾತ್ರ ನಗರದ ಅಭಿವೃದ್ಧಿ ಮಾಡಲು ಸಾಧ್ಯ.ಅಲ್ಲದೇ ಸಿಬ್ಬಂದಿಗಳ ವೇತನ ನೀಡಲು ಸಾಧ್ಯವಾಗುತ್ತದೆ. ನಗರದ ಅಭಿವೃದ್ಧಿ ದೃಷ್ಟಿಯಿಂದ ಸಾರ್ವಜನಿಕರು ಸಹಕರಿಸಿ, ತೆರಿಗೆ ಪಾವತಿ ಮಾಡಿ.ಇಲ್ಲವಾದಲ್ಲಿ ದಂಡ ವಿಧಿಸಲಾಗುವುದೆಂದು ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದರು.

Contact Your\'s Advertisement; 9902492681

ನಗರಸಭೆಯ ಎಇಇ ಶರಣು ಪೂಜಾರಿ, ಪರಿಸರ ಎಇಇ ಅಭಯಕುಮಾರ, ವ್ಯವಸ್ಥಾಪಕ ಶರಣಗೌಡ ಪಾಟೀಲ, ಜೆಇಗಳಾದ ರಬ್ಬಾನಿ, ಸಿದ್ದಪ್ಪ ಸೋಮಪೂರೆ, ಕಂದಾಯ ನಿರೀಕ್ಷಕ ಸುರೇಶ, ಸಮುದಾಯ ಸಂಘಟನಾಧಿಕಾರಿ ರಘುನಾಥ ನರಸಾಳೆ, ನಾರಾಯಣ ರೆಡ್ಡಿ, ಆರೋಗ್ಯ ನಿರಕ್ಷಕರಾದ ಶಿವರಾಜಕುಮಾರ.ಮಹ್ಮದ್ ಮೈಹಿನೋದ್ದಿನ್, ಶಿವಾನಂದ ದ್ಯಾಮಗೊಂಡ, ಕರ ವಸೂಲಿಗಾರರು ಸೇರಿದಂತೆ ಸಿಬ್ಬಂದಿಗಳು ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here