ಕಮ್ಯೂನಿಸ್ಟ್, ರೈತ ಚಳುವಳಿಗಾರ ಮಲ್ಲಯ್ಯ ಜಾಲ ಹಳ್ಳಿ ನಿಧನಕ್ಕೆ CPIM ಸಂತಾಪ

0
71

ರಾಯಚೂರು; ಜಿಲ್ಲೆಯ ಎಡ ಮತ್ತು ರೈತ ಹೋರಾಟಗರಾದ ಮಲ್ಲಯ್ಯ ಜಾಲಹಳ್ಳಿ ನಿಧನಕ್ಕೆ CPIM ಲಿಂಗಸ್ಗೂರು ತಾಲೂಕು ಸಮಿತಿ ತೀವ್ರ ಸಂತಾಪಗಳನ್ನು ಸೂಚಿಸುತ್ತದೆ.

ಮಲ್ಲಯ್ಯ ಜಾಲಹಳ್ಳಿಯವರು ಕಳೆದ 4 ದಶಕಗಳಿಂದ ಅವಿಭಜಿತ ರಾಯಚೂರು ಜಿಲ್ಲೆಯಲ್ಲಿ ರೈತಪರ ಹೋರಾಟಗಳನ್ನು ಸಂಘಟಿಸಿ ಕರ್ನಾಟಕ ಪ್ರಾಂತ ರೈತ ಸಂಘವನ್ನು ಜಿಲ್ಲೆಯಲ್ಲಿ ಬಲಷ್ಟಗೂಳಿಸಿದ್ದರು. ಅದರಂತೆ ಸಿಪಿಐ(ಎಂ) ಪಕ್ಷದ ಸದಸ್ಯರಾಗಿ ಕಮ್ಯೂನಿಸ್ಟ್ ಪಕ್ಷವನ್ನು ಜಿಲ್ಲೆಯಲ್ಲಿ ಕಟ್ಟಿ ಬೆಳಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Contact Your\'s Advertisement; 9902492681

ಅವರು ಸಿಪಿಐ(ಎಂ) ಪಕ್ಷದ ಜಿಲ್ಲಾ ಕಾರ್ಯದರ್ಶಿಯಾಗಿ ಎರಡು ಬಾರಿಗೆ ಆಯ್ಕೆಯಾಗಿದ್ದರು. ಪಕ್ಷದ ರಾಜ್ಯ ಸಮಿತಿ ಸದಸ್ಯರಾಗಿ ಪಕ್ಷದ ಕೆಲಸ ಮಾಡಿ ಪಕ್ಷದ ಏಳಿಗೆಗಾಗಿ ದುಡಿದಿದ್ದಾರೆ. ನಾರಾಯಣಪುರ ಬಲದಂಡೆ ಕಾಲುವೆ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು ಹಲವಾರು ನೀರಾವರಿ ಹೋರಾಟಗಳನ್ನು ಕಟ್ಟಿದ ಮುಂಚೂಣಿ ನಾಯಕರಾಗಿದ್ದರು. ಇದರಂತೆ ಕಾರ್ಮಿಕರ, ದಲಿತರ, ಮಹಿಳೆಯರ ಸಂಘಟನೆ ಕೂಡ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಅವರು ಕರ್ನಾಟಕ ಪ್ರಾಂತ ರೈತ ಸಂಘಟದ ರಾಜ್ಯ ಪದಾಧಿಕಾರಿಗಳಾಗಿ ಜಿಲ್ಲೆಯ ದೇವದಾಸಿ ಮಹಿಳಾ ವಿಮೋಚನಾ ಸಂಘಟನೆಯನ್ನು ಕಟ್ಟಿ ಜಿಲ್ಲೆಯ ಪ್ರಥಮ ಗೌರವಾಧ್ಯಕ್ಷರುರಾಗಿದ್ದರು. 1970 -1975 ನೆಯ ಸಮಯದಲ್ಲೇ ಜಾತಿ ವ್ಯವಸ್ಥೆಗೆ ಸೆಡ್ಡು ಹೊಡೆದು ನಿಜವಾದ ಜಾತ್ಯತೀತತೆ ಪಾಠವನ್ನು ಬೋಧನೆ ಮಾಡಿ, ಹಾಗೆ ಸಮಾಜವೇ ಒಪ್ಪದ ಅಂತರ್ಜಾತಿ ವಿವಾಹವಾಗಿ ಕುಟುಂಬ, ಸ್ವಜಾತಿಯ ವಿರೋಧವನ್ನು ಜೀವನದುದಕ್ಕೂ ಎದುರಿಸಿ ಬದುಕಿ ಅದರ್ಶರಾಗಿ ಬದುಕಿದ್ದಾರೆ. ಇವರ ಅಂತ್ಯಕ್ರಿಯೆ ನಾಳೆ ದಿ.6-10-23 ರಂದು ರಾಯಚೂರು ನಗರದಲ್ಲಿ ನಡೆಯಲಿದೆ.

ಇವರ ನಿಧನಕ್ಕೆ ಲಿಂಗಸ್ಗೂರು ತಾಲೂಕಿನ ಸಿಪಿಐ(ಎಂ), ಕರ್ನಾಟ ಪ್ರಾಂತ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಸಿಐಟಿಯು, ಎಸ್ಎಫ್ಐ, ಡಿವೈಎಫ್ಐ, ದೇವದಾಸಿ ಮಹಿಳಾ ವಿಮೋಚನಾ ಸಂಘಟನೆಗಳು ಭಾವಪೂರ್ಣ ಸಂತಾಪಗಳು ತಿಳಿಸುತ್ತವೆ ಎಂದು ಸಿಪಿಐ (ಎಂ) ಲಿಂಗಸ್ಗೂರು ತಾಲೂಕು ಕಾರ್ಯದರ್ಶಿ ರಮೇಶ ವೀರಾಪೂರು, ಆಂಜನೇಯ ನಾಗಲಾಪೂರು, ಅಮರೇಶ ಗುರಿಕಾರ, ಮಹ್ಮದ್ ಹನೀಫ್, ವಿಶ್ವ ಅಂಗಡಿ, ಪವನ್ ಕಮದಾಳ, ನಿಂಗಪ್ಪ ಎಂ., ಸಂಗಪ್ಪ ಸಗರದ, ಅಸನತ್ ಅಲಿ, ಬಾಬು ಸಾಗರ್, ಗೋಪಾಲ್ ಸ್ವಾಮಿ, ಫಕ್ರುದ್ದೀನ್, ಅಲ್ಲಾಭಕ್ಷ, ಶೇಖರಪ್ಪ, ಯಗ್ಗಡದಿನ್ನಿ, ಲಿಂಗರಾಜ್ ದೇಸಾಯಿ, ನಿಂಗಮ್ಮ, ನಾಗಮ್ಮ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here