ಸುರಪುರ: ಶ್ರೀ ಯೋಗಿಶ್ವರ ಯಾಜ್ಞವಲ್ಕ್ಯ ಸಂಘದ ವತಿಯಿಂದ ನಗರದ ಪ್ರಸನ್ನ ವೆಂಕಟರಮಣ ದೇವಸ್ಥಾನದಲ್ಲಿ ವಿಠಲ್ ಕೃಷ್ಣ ಜಯಂತಿಯನ್ನು ಶುಕ್ರವಾರ ಹಾಗೂ ಶನಿವಾರಗಳಂದು ಭಕ್ತಿ-ಶ್ರದ್ಧೆಗಳಿಂದ ಆಚರಿಸಲಾಯಿತು, ನಿಮಿತ್ತವಾಗಿ ಸಾಯಂಕಾಲ ದೇವಸ್ಥಾನದಲ್ಲಿ ಮಕ್ಕಳಿಂದ ಕೃಷ್ಣ ವೇಷಧಾರಿಗಳ ಪ್ರದರ್ಶನ, ನೃತ್ಯ ಹಾಗೂ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು, ನಂತರ ವೇಣುಗೋಪಾಲ ಮಹಿಳಾ ಭಜನಾ ಮಂಡಳಿ ಯಿಂದ ದಾಸ ಸಾಹಿತ್ಯದ ಅಂತ್ಯಾಕ್ಷರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು, ನಂತರ ಭಜನೆ ಹಾಗೂ ಹರಿವಾಣ ಸೇವೆ ನಡೆಯಿತು, ಶನಿವಾರದಂದು ಬೆಳಿಗ್ಗೆ ಪಾರಣಿ ಕಾರ್ಯಕ್ರಮ ಜರುಗಿತು, ಭಕ್ತಾದಿಗಳಿಗೆ ತೀರ್ಥ, ಪ್ರಸಾದ ಜರುಗಿತು.
ಸಮಿತಿಯ ಹಿರಿಯರಾದ ಅಶೋಕ ಕುಲಕರ್ಣಿ ಹೆಮನೂರು, ಮಲ್ಲಾರಾವ ಕುಲಕರ್ಣಿ ಸಿಂದಗೇರಿ, ರಾಘವೇಂದ್ರಾಚಾರ್ಯ ಹಳ್ಳದ, ಮಲ್ಲಾಚಾರ್ಯ ಜೋಷಿ ಕುರಿಹಾಳ, ಕೃಷ್ಟಾಚಾರ್ಯ ದೇವರು, ಲಕ್ಷ್ಮೀಕಾಂತ ಕುಲಕರ್ಣಿ ಅಮ್ಮಾಪುರ, ಭೀಮಶೇನಾಚಾರ್ಯ ಜೋಷಿ ಮಂಗಳೂರು, ಚಂದ್ರಕಾಂತ ನಾಡಗೌಡ, ಮಲ್ಲಾರಾವ ಪಟವಾರಿ, ಶ್ರೀನಾಥ ಸಿಂದಗೇರಿ, ರಾಘವೇಂದ್ರ ಕುಲಕರ್ಣಿ ಗೆದ್ದಲಮರಿ, ವೆಂಕಟೇಶ ಕುರಿಹಾಳ, ಪ್ರವೀಣ ಕುಲಕರ್ಣಿ, ಶ್ರೀನಿವಾಸ ದೇವಡಿ, ಗುಂಡೂರಾವ ಕುಲಕರ್ಣಿ ಅರಳಹಳ್ಳಿ ಹಾಗೂ ಮಹಿಳೆಯರು, ಮಕ್ಕಳು ಇದ್ದರು.