ಹೆಳವ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಅ.15ರಂದು

0
33

ಕಲಬುರಗಿ: 2022-23ನೇ ಸಾಲಿನಲ್ಲಿ ನಡೆದ 10ನೇ ತರಗತಿಯಲ್ಲಿ ಶೇ. 75 ಹಾಗೂ ಪಿ.ಯು.ಸಿ ಯಲ್ಲಿ ಶೇ.70ಕ್ಕಿಂತ ಹೆಚ್ಚು ಅಂಕ ಪಡೆದ ಜಿಲ್ಲೆಯ ಅಲೆಮಾರಿ ಹೆಳವ ಸಮುದಾಯದ ವಿದ್ಯಾರ್ಥಿಗಳಿಗೆ ಅಖಿಲ ಕರ್ನಾಟಕ ಹೆಳವ ಸಮಾಜ ಜಿಲ್ಲಾ ಘಟಕದ ವತಿಯಿಂದ ಅ.15ರಂದು ಬೆಳಿಗ್ಗೆ 11:00 ಗಂಟೆಗೆ ನಗರದ ಕನ್ನಡ ಭವನದಲ್ಲಿ ಪ್ರತಿಭಾವಂತ ಸಾಧಕ ವಿದ್ಯಾರ್ಥಿಗಳಿಗೆ “ಪ್ರತಿಭಾ ಪುರಸ್ಕಾರ” ನೀಡಿ ಸತ್ಕರಿಸಲು ನಿರ್ಧರಿಸಲಾಗಿದೆ. ಸಮುದಾಯದ ವಿದ್ಯಾರ್ಥಿಗಳು ಅ. 13ರೊಳಗೆ ಅರ್ಜಿಯ ಜೊತೆಗೆ ಅಂಕಪಟ್ಟಿ, ಆಧಾರ ಕಾರ್ಡ ಹಾಗೂ ಪಾಸಪೋರ್ಟ ಅಳತೆಯ ಪೋಟೋ ಸಲ್ಲಿಸಬೇಕೆಂದು ಜಿಲ್ಲಾಧ್ಯಕ್ಷ ಸಾಯಬಣ್ಣ ಹೆಳವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಜಿಗಳನ್ನು ಸಲ್ಲಿಸಲು ಮಲ್ಲಿಕಾರ್ಜುನ ಆರ್. ಹೆಳವರ (ಮೊ. 9901301254), ಸಾಯಬಣ್ಣ ಹೆಳವರ (ಮೊ. 9900836221), ಗುರುಲಿಂಗ ಹೆಳವರ (ಮೊ.7353835777), ಅಂಕಿತಾ ಹೆಳವರ, ತಿಪ್ಪಣ್ಣ ಹೆಳವರ (ಮೊ.9632176935) ಹಾಗೂ ಶಿವಾನಂದ ಹೆಳವರ (ಮೊ.7676471436) ಇವರನ್ನು ಸಂಪರ್ಕಿಸಬಹುದು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here