ಗ್ರಂಥಾಲಯದ ಕಾಯಕ ಯೋಗಿ ಆನಂದರಾಜ ಪಾಟೀಲ

0
24

ಕಲಬುರಗಿ: ನಗರದ ಕೆಪಿಇ ಶಿಕ್ಷಣ ಸಂಸ್ಥೆಯ ಮಿಲಿಂದ ಪ್ರೌಢಶಾಲೆ ಡಾ. ಅಂಬೇಡ್ಕರ್ ಪದವಿ ಮಹಾವಿದ್ಯಾಲಯದ ಗ್ರಂಥಪಾಲಕರಾದ ಆನಂದರಾಜ ಪಾಟೀಲ ಅವರ ವಯೋನಿವೃತ್ತಿ ಸನ್ಮಾನ ಸಮಾರಂಭ ಜರುಗಿತು.

ಮುಖ್ಯ ಅತಿಥಿಗಳಾದ ನಿವೃತ್ತ ಪ್ರಾಂಶುಪಾಲರಾದ ಡಾ. ಐ.ಸ್.ವಿದ್ಯಾಸಾಗರ ಅವರು ಮಾತನಾಡಿ ಆನಂದರಾಜ ಪಾಟೀಲರು ಕಾಲೇಜಿನ ಗ್ರಂಥಪಾಲಕರಾಗಿ ವಿದ್ಯಾರ್ಥಿಗಳಿಗೆ ಮಿತಿಮೀರಿ ಸಹಾಯ ಮಾಡಿದ್ದಾರೆ. ವಿದ್ಯಾರ್ಥಿಗಳು ಹಾಗೂ ಪಾಟೀಲರ ನಡುವೆ ಒಳ್ಳೆಯ ಅನ್ಯೋನ್ಯತೆ ಇತ್ತು. ಇವರಲ್ಲಿ ಸಿಟ್ಟು, ಕಪಟ ಗುಣ ಹಾಗೂ ಯಾರಿಗೂ ಕೆಟ್ಟದ್ದನ್ನು ಬಯಸದ ಸರ್ವಸಂಪನ್ನ ಗುಣ ಹೊಂದಿದ್ದಾರೆ. ಅನೇಕ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡಿ ಅವರ ಬೆಳವಣಿಗೆಗೆ ದಾರಿದೀಪವಾಗಿದ್ದಾರೆ ಎಂದರು.

Contact Your\'s Advertisement; 9902492681

ಕಾರ್ಯಕ್ರಮದ ಇನ್ನೋರ್ವ ಮುಖ್ಯ ಅತಿಥಿಗಳಾದ ಗುಲಬರ್ಗಾ ವಿಶ್ವವಿದ್ಯಾಲಯ ಗ್ರಂಥಾಲಯ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರು ಮತ್ತು ಸಮಾಜ ವಿಜ್ಞಾನ ವಿಭಾಗದ ಡೀನರಾದ ಪ್ರೊ. ವಿ.ಟಿ. ಕಾಂಬಳೆಂ ಮಾತನಾಡುತ್ತ ಆನಂದರಾಜ ಪಾಟೀಲ ನಿರಂತರ ಕೆಲಸ ಮಾಡುವ ಅಪರೂಪದ ಗ್ರಂಥ ಪಾಲಕರು. ಗ್ರಂಥಾಲಯವೆಂದರೆ ಸಮಾಜದ ಹೃದಯವಿದ್ದಂತೆ, ಪುಸ್ತಕಗಳ ಮಧ್ಯದಲ್ಲಿ ಜ್ಞಾನದ ಹಸಿವನ್ನು ಹೆಚ್ಚಿಸಿಕೊಂಡು ಮಾನವೀಯ ಗುಣಗಳನ್ನು ಮೈಗೂಡಿಸಿಕೊಂಡಿದ್ದಾರೆ. ನಾನು ಮತ್ತು ಆನಂದರಾಜ ಪಾಟೀಲರು ಮೂಲತಃ ಮಿಲಿಂದ ಪ್ರೌಢಶಾಲೆಯಲ್ಲಿ ಹುದ್ದೆಗೆ ಸೇರಿ ನಂತರ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದೇವೆ. ಪಾಟೀಲರ ನಿವೃತ್ತಿ ಜೀವನ ಸಮಾಜಮುಖಿಯಾಗಿ ಹೊರಹೊಮ್ಮಲಿ ಎಂದು ಹಾರೈಸಿದರು.

ಈ ಕಾರ್ಯಾಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕೆ.ಪಿ.ಇ.ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿಗಳಾದ ಡಾ|. ಮಾರುತಿರಾವ ಡಿ. ಮಾಲೆ ಅವರು ಮಾತನಾಡುತ್ತಾ ಎಲ್ಲರನ್ನು ಸ್ನೇಹದ ರೀತಿಯಲ್ಲಿ ಅಪ್ಪಿಕೊಂಡು ಸುಮಾರು 41 ವರ್ಷಗಳ ಕಾಲ ಸೇವೆ ಸಲ್ಲಿಸಿ ಪುಸ್ತಕಗಳನ್ನು ಓದುವ ಹವ್ಯಾಸವನ್ನು ನಮ್ಮ ವಿದ್ಯಾರ್ಥಿಗಳಲ್ಲಿ ಹೆಚ್ಚಿಸಿದ್ದಾರೆ. ಇವರಂತೆ ಉಳಿದ ಸಿಬ್ಬಂದಿಗಳು ಕೂಡ ಉದಾರ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದರು. ಇವರ ನಿವೃತ್ತಿ ಜೀವನ ಸಖಕರವಾಗಿರುವಂತೆ ಬುದ್ದ ಬಸವ ಡಾ.ಅಂಬೇಡ್ಕರರು ಇವರನ್ನು ಕರುಣಿಸಲಿ ಎಂದು ಹಾರೈಸಿದರು.

ಶಾಲೆಯ ಮುಖ್ಯ ಗುರುಗಳಾದ ಮಧುಕರ ಡಾಂಗೆ ಅವರು ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಇದೆ ಸಂದರ್ಭದಲ್ಲಿ ವಯೋನಿವೃತ್ತರಾದ ಆನಂದರಾಜ ಪಾಟೀಲ ದಂಪತಿಗಳಿಗೆ ಗೌರವಿಸಿ ಸನ್ಮಾನಿಸಲಾಯಿತು. ಹಾಗೂ ಈ ಹಿಂದೆ ನಿವೃತ್ತಿ ಹೊಂದಿರುವ ಶಾಲೆಯ ಮುಖ್ಯ ಗುರುಗಳು ಹಾಗೂ ಸಿಬ್ಬಂದಿಗಳಿಗೆ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಅತಿಥಿಗಳಾಗಿ ಪ್ರೋ.ಪಿ.ಡಿ.ಕುಲಕರ್ಣಿ, ಪ್ರೊ. ಈಶ್ವರ ಇಂಗನ, ಸಿಂಧುಮತಿ ಭೊಸಲೆ, ಪ್ರೊ. ಮಹಾಜನ ಸಿಬ್ಬಂದಿಗಳಾದ ವೀರಶೆಟ್ಟಿ ದೊಡ್ಡಮನಿ, ಪ್ರವೀಣಕುಮಾರ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಾಲೆಯ ಸಹಶಿಕ್ಷಕಿ ಶ್ರೀಮತಿ ಚಂದ್ರಭಾಗಾ ಅವರು ನಿರೂಪಿಸಿದರು. ಮತ್ತು ಸಹಶಿಕ್ಷಕ ಶ್ರೀ ಸಚಿನ ಅವರು ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here