ಸುರಪುರ:ನಗರದ ಗೋಲ್ಡನ್ ಕೇವ್ ಬುದ್ದ ವಿಹಾರದಲ್ಲಿ ಬೋಧಿಸತ್ವ ಡಾ.ಬಿ.ಆರ್. ಅಂಬೇಡ್ಕರ್ ರವರು ಹುಟ್ಟುಹಾಕಿರುವ ಭಾರತೀಯ ಬೌದ್ಧ ಮಹಾಸಭಾದ ಸಭೆ ನಡೆಸಿ ತಾಲೂಕು ಘಟಕ ರಚನೆ ಮಾಡಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಮಹಾಸಭಾದ ಜಿಲ್ಲಾಧ್ಯಕ್ಷ ಮರೆಪ್ಪ ಬಕ್ಕಲ್ ಮಾತನಾಡಿ,ಭಾರತೀಯ ಬೌದ್ಧ ಮಹಾಸಭಾ ಸಂಸ್ಥೆಯು ದೇಶದಲ್ಲಿ ಅದಿಕೃತವಾಗಿ ವಿಶ್ವಕ್ಕೆ ಬೆಳಕಾದ ತಥಾಗಥ ಗೌತಮ್ ಬುದ್ಧನ ಬೌದ್ಧ ಧಮ್ಮದ ಶಾಂತಿ, ಕರುಣೆ ಮತ್ತು ಮೈತ್ರಿಯನ್ನು ಹೊತ್ತು ಪ್ರತಿಯೊಬ್ಬ ಬೌದ್ದ ಅನುಯಾಯಿ ಗಳು ಕಾರ್ಯೋನ್ಮುಖರಾಗುವಂತೆ ಮಾಡುತ್ತದೆ, ಇದರಿಂದ ಸಮುದಾಯಲ್ಲಿ ಇರುವ ಅಜಾಕುರಕತೆಯನ್ನು ತೊಡೆದು, ಮೌಡ್ಯವನ್ನು ತೊರೆದು ಬುದ್ದನ ತತ್ವ ಆದರ್ಶಗಳನ್ನು ಬಿತ್ತುಬೇಕು ಎಂದು ಸಾರಿದ್ದ ಸದುದ್ದೇಶದಿಂದ ಸಂಸ್ಥೆ ಕೆಲಸಮಾಡುತ್ತದೆ ಎಂದರು.
ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ರ್ಶಿ ವೆಂಕಟೇಶ ಹೊಸ್ಮನಿ ಪ್ರಾಸ್ತಾವಿಕವಾಗಿ ಮಾತನಾಡಿ, ಸುರಪುರದಲ್ಲಿ ಕಳೆದ ಕೆಲವು ವರ್ಷಗಳಿಂದ ಬೌದ್ಧ ಧಮ್ಮದ ಸುವಾಸನೆ ತುಂಬಾ ಜೋರಾಗಿದ್ದ ಕಾರಣ ಇಂದು ಅಧಿಕೃತವಾಗಿ ಬುದ್ಧ ವಿಹಾರದಲ್ಲಿ ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಶಾಖೆಯು ಸುರಪುರ ತಾಲೂಕ ಸಮಿತಿಯನ್ನು ಹುಟ್ಟುಕಲುÁ ಸಭೆ ಕರೆಯಲಾಗಿದೆ ಎಂದರು.
ರಾಜ್ಯ ಪಧಾದಿಕಾರಿಯಾದ ರಣಧೀರ ಹೊಸಮನಿಯವರು ಎಲ್ಲರನ್ನು ಸಮಿತಿಗೆ ಬರಮಾಡಿಕೊಂಡರು. ಸಭೆಯಲ್ಲಿ ಬಾಗವಹಿಸದವರು ರಾಹುಲ್ ಹುಲಿಮನಿ ಸುರೇಶ ಯಾದಗಿರ ಚಂದ್ರಕಾಂತ ಚಲುವಾದಿ ಮಾಳಪ್ಪ ಕಿರದಳ್ಳಿ, ತಿಪ್ಪಣ್ಣ ಶೆಳ್ಳಗಿ ಇತರರು ಬಾಗವಹಿಸಿದ್ದರು.
ವೆಂಕಟೇಶ್ವರ ಸುರಪುರ, ಜಿಲ್ಲಾ ಕಾರ್ಯಕಾರಣಿ ಕಾರ್ಯದರ್ಶಿಯನ್ನಾಗಿ ನೇಮಿಸಲಾಯಿತು.
ಸುರಪೂರ ತಾಲೂಕ ಸಮಿತಿ ಮಲ್ಲಿಜಾರ್ಜುನ್ ವಾಗಣಗೇರಾ ತಾಲೂಕ ಅದ್ಯಕ್ಷ,ಶೇಖರ್ ಮಂಗಳೂರು ಪ್ರಧಾನ ಕಾರ್ಯಾದರ್ಶಿ,ಮರೆಪ್ಪ ತೇಲ್ಕರ್ ಖಜಾಂಚಿ,ಆನಂದ ಕಟ್ಟಿಮನಿ ಕಛೇರಿ ಕಾರ್ಯಾದರ್ಶಿ ,ಗೋಪಾಲ್ ವಜ್ಜಲ್ ಕಾನೂನ ಸಲಹೆಗಾರ,ಮಹಿಳಾ ಉಪಾದ್ಯಕ್ಷೆ: ಮಂಜುಳಾ ಸುರಪುರ,ಶಿಲ್ಪಾ ಆರ್ ಹುಲಿಮನಿ ಕಾರ್ಯಾದರ್ಶಿ,ಸುನೀತಾ ಎಮ್ ಕಿರದಳ್ಳಿ ಕಾರ್ಯಾದರ್ಶಿ,ಭೀಮಬಾಯಿ ಕಲ್ಲದೇವನಹಳ್ಳಿ ಸಂಘಟನಾ ಕಾರ್ಯಾದರ್ಶಿ,ಯಲ್ಲಮ್ಮ ತೇಲ್ಕರ್ ಸಂಘಟನಾ ಕಾರ್ಯಾದರ್ಶಿ. ಸಮತಾ ಸೈನಿಕ ದಳ : ಪರಶುರಾಮ್ ನಾಟೇಕಾರ್,
ಶರಣು ಹಸನಾಪೂರ ಕಾರ್ಯಾದರ್ಶಿ ಮಂಜುನಾಥ ಹೊಸಮನಿ ಕಾರ್ಯಾದರ್ಶಿ ಗಣೇಶ್ ಹೊಸಮನಿ ಸಂಘಟನಾ ಕಾರ್ಯಾದರ್ಶಿ ಪ್ರವಾಸ ಮತ್ತು ಪರ್ಯಾಟನ ಉಪಾದ್ಯಕ್ಷ : ಸಂಗಣ್ಣ ಉರಸಗುಂಡಿ ಬೋನ್ಹಾಳ ಮಲ್ಲಪ್ಪ ದೊಡ್ಡಮನಿ ಕಾರ್ಯಾದರ್ಶಿ,ಮಾನಪ್ಪ ಶೆಳ್ಳಗಿ ಕಾರ್ಯಾದರ್ಶಿ, ಹಣಮಂತ ತೇಲ್ಕರ್ ಸಂಘಟನಾ ಕಾರ್ಯಾದರ್ಶಿ, ಮಲ್ಲಪ್ಪ ಕಂಪ್ಯೂಟರ್ ತಳವರಗೇರಾ ಸಂಘಟನಾ ಕಾರ್ಯಾದರ್ಶಿ
ಸಂಸ್ಕಾರ ವಿಭಾಗ ಉಪಾದ್ಯಕ್ಷ : ಹಣಮಂತ ಭದ್ರಾವತಿ, ನಾಗರಾಜ್ ಬೇವಿನಾಳ ಕಾರ್ಯಾದರ್ಶಿ, ಅವಿನಾಶ ಹೊಸಮನಿ ಕಾರ್ಯಾದರ್ಶಿ
ಭೀಮರಾಯ ಮಂಗಳೂರು ಸಂಘಟನಾ ಕಾರ್ಯಾದರ್ಶಿ, ಎಲ್ಲರೂ ಸರ್ವಾನುಮತದಿಂದ ಆಯ್ಕೆಯಾದರು.