ಸಮರ್ಪಕ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿ ರೈತರ ಮನವಿ

0
23

ಸುರಪುರ :ತಾಲೂಕಿನ ಆಲ್ದಾಳ, ನಾಗರಾಳ, ಹಾವಿನಾಳ ಮತ್ತು ಹೆಮನೂರು ಗ್ರಾಮಗಳ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಗುಣಮಟ್ಟದ ವಿದ್ಯುತ್ ಪೂರೈಕೆ ಇಲ್ಲದೇ ರೈತರು ತೊಂದರೆ ಅನುಭವಿಸುತ್ತಿದ್ದು ಕೂಡಲೇ ಸಮರ್ಪಕ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ರೈತರು ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಕುರಿತು ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ರೈತರು ಕಳೆದ ಒಂದು ವಾರದಿಂದ ಸಮರ್ಪಕ ವಿದ್ಯುತ್ ಪೂರೈಕೆಯಿಲ್ಲದೇ ನೀರಾವರಿ ವ್ಯಾಪ್ತಿಯ ರೈತಾಪಿ ವರ್ಗ ಸಂಕಷ್ಟ ಅನುಭವಿಸುತ್ತಿದ್ದು ದಿನಕ್ಕೆ 2-3 ಗಂಟೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ ಪದೇ ಪದೇ ಕರೆಂಟ್ ಹೋಗುತ್ತಿರುವದರಿಂದ ಮೋಟಾರುಗಳು ಸುಟ್ಟು ಹೋಗುತ್ತಿವೆ ಈಗಾಗಲೇ ಬೆಳೆಯು ಕಾಳು ಕಟ್ಟುವ ಹಂತದಲ್ಲಿದ್ದು ನೀರಿಲ್ಲದೇ ಗದ್ದೆಗಳು ಒಣಗುತ್ತಿವೆ ಕೋಟ್ಯಾಂತರ ರೂಪಾಯಿ ನಷ್ಟ ಅನುಭವಿಸುವ ಆತಂಕವನ್ನು ರೈತರು ಎದುರಿಸುವಂತಾಗಿದ್ದು ಕೂಡಲೇ ರೈತರು ತಮ್ಮ ಜಮೀನುಗಳಿಗೆ ನೀರು ಹರಿಸಲು ಸಮರ್ಪಕ ವಿದ್ಯುತ್ ಪೂರೈಸಬೇಕು ಎಂದು ಜೆಸ್ಕಾಂ ಉಪ ವಿಭಾಗದ ಎಇಇ ಅವರಿಗೆ ಮನವಿ ಸಲ್ಲಿಸಲಾಯಿತು.

Contact Your\'s Advertisement; 9902492681

ಮುಖಂಡರಾದ ಮಲ್ಲಯ್ಯ ಕಮತಗಿ, ತಿಪ್ಪಣ್ಣ ಹಬ್ಲಿ, ಧೀರಜ್‍ಕುಮಾರ ಹಾವಿನಾಳ, ರಮೇಶ ಆಲ್ದಾಳ, ವೆಂಕಟೇಶರಾವ, ವಿವೇಕಾನಂದ, ಹಾಲೇಶರಡ್ಡಿ, ಹಣಮಂತ್ರಾಯ ಆಲ್ದಾಳ, ಬಲಭೀಮರಾವ ದಳಪತಿ ಹಾವಿನಾಳ, ಹಣಮಂತ್ರಾಯ ಮುದನೂರ, ಮಾನಪ್ಪ ಜಂಬಲದಿನ್ನಿ, ಯಂಕಪ್ಪ, ಗ್ಯಾನಪ್ಪ ಪೂಜಾರಿ, ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here