ಸಚಿವ ಸಂಪುಟದಲ್ಲಿ ಶಾಸಕ ನೆಹರು ಓಲೇಕಾರ ಅವರಿಗೆ ಸಚಿವ ಸ್ಥಾನ ನೀಡಲು ಮೋಹನ್ ಕುಮಾರ್ ದಾನಪ್ಪ ಒತ್ತಾಯ

0
311

ಬೆಂಗಳೂರು: 3 ಬಾರಿ ಶಾಸಕರಾಗಿ 2 ಬಾರಿ ಕರ್ನಾಟಕ ರಾಜ್ಯ ಎಸ್ ಸಿ, ಎಸ್ ಟಿ ಆಯೋಗದ ಅಧ್ಯಕ್ಷರಾಗಿ ಹಾಗೂ ಇತರೆ ರಾಜ್ಯ ಮಟ್ಟದ ಪ್ರಾಧಿಕಾರಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಹಾವೇರಿ ಶಾಸಕ ನೆಹರು ಓಲೇಕಾರ ಅವರಿಗೆ ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಸೇರಿಸಬೇಕೆಂದು ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲರಾದ ಮೋಹನ್ ಕುಮಾರ್ ದಾನಪ್ಪ ಅವರು ಒತ್ತಾಯಿಸಿದ್ದಾರೆ.

ಅವರು ಪತ್ರಿಕಾ ಪ್ರಕಟಣೆ ನೀಡಿ, ರಾಜ್ಯದಲ್ಲಿ 75 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಛಲವಾದಿ (ಬಲಗೈ) ಸಮಾಜದವರು ಹಲವಾರು ವರ್ಷಗಳಿಂದ ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿರುತ್ತಾರೆ, ಭಾರತೀಯ ಜನತಾ ಪಕ್ಷದಿಂದ 6 ಜನ ಛಲವಾದಿ ಸಮಾಜದವರು ಶಾಸಕರಾಗಿ ಆಯ್ಕೆಯಾಗಿದ್ದು, 6 ಹಿರಿಯ ಅನುಭವವುಳ್ಳ, ಜನ ಸೇವಾ ಮನೋಭಾವನೆಯುಳ್ಳ ರಾಜಕಾರಣಿಯಾಗಿರುತ್ತಾರೆ, ಮೊದಲನೇ ಹಂತದ ಸಚಿವ ಸಂಪುಟದಲ್ಲಿ ಕೇಳಿ ಬಂದಿತ್ತಾದರೂ ಸಚಿವ ಸ್ಥಾನ ನೀಡುವಲ್ಲಿ ತಾರತಮ್ಯ ಮಾಡಿ ಕೈಬಿಟ್ಟಿದ್ದಲ್ಲದೆ ನೂತನ ಸರ್ಕಾರದಲ್ಲಿ ಪಕ್ಷದಿಂದ ಆಯ್ಕೆಯಾದ ಯಾವೊಬ್ಬ ಛಲವಾದಿ ಸಮಾಜದ ಶಾಸಕರಿಗೆ ಸಚಿವ ಸ್ಥಾನ ನೀಡದೆ ಜಾತಿ ತಾರತಮ್ಯ ಮಾಡಿರುವುದು ಬಲಗೈ ಸಮುದಾಯಕ್ಕೆ ನೋವಿನ ಸಂಗತಿಯಾಗಿರುತ್ತದೆ ಕಳವಳ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಎರಡನೇ ಹಂತದ ಸಂಪುಟದಲ್ಲಿ ಸ್ಥಾನ ನೀಡದೇ ಇದ್ದಲ್ಲಿ ಬಿಜೆಪಿ ಪಕ್ಷವನ್ನು ಬೆಂಬಲಿಸುತ್ತಿರುವ ಬಲಗೈ ಸಮುದಾಯದವರು ರಾಜ್ಯದ ನಾನಾ ಘಟಕದಲ್ಲಿ ಪಕ್ಷದಲ್ಲಿ ತಮಗೆ ನೀಡಿದ ತಮ್ಮ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷದಿಂದ ದೂರ ಉಳಿಯುವ ಚಿಂತನೆಯಲ್ಲಿರುತ್ತಾರೆ, ಆದ್ದರಿಂದ ಬಿಜೆಪಿಯ ನಿಷ್ಠಾವಂತ ನಾಯಕನ ನಿಷ್ಠತೆಯನ್ನು ಮತ್ತು ಅನುಭವವನ್ನು ಪರಿಗಣಿಸಿ ರಾಜ್ಯದಲ್ಲಿ ಅತಿ ಹಿಂದುಳಿದ ಛಲವಾದಿ ಸಮಾಜದ ಪ್ರಗತಿಗಾಗಿ ಸದ್ರಿ ಈ ನೂತನ ಸರ್ಕಾರದ ಸಚಿವ ಸಂಪುಟದಲ್ಲಿ ಹಾವೇರಿ ಶಾಸಕರಾರ ನೆಹರು ಚ ಓಲೇಕಾರ್ ರವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಭಾರತೀಯ ದಲಿತ ಪ್ಯಾಂಥರ್ ನ ಮುಖಂಡ ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲರಾದ ಮೋಹನ್ ಕುಮಾರ್ ದಾನಪ್ಪ ನವರು ಇಂದು ಪತ್ರಿಕಾ ಪ್ರಕಟಣೆ ಮುಖಾಂತರ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here