ಕಲಬುರಗಿ ಮಹಾನಗರ ಪಾಲಿಕೆ ವ್ಯವಸ್ಥಾಪಕ ಅಧಿಕಾರಿ ಅಮಾನತು

0
230

ಕಲಬುರಗಿ: ಆಸ್ತಿಯ ಮಾಲಿಕತ್ವದಲ್ಲಿ ಅನಧಿಕೃತ ಬದಲಾವಣೆ ನಡೆಸಿರುವ ಆರೋಪದಲ್ಲಿ ಇಲ್ಲಿನ ಕಲಬುರಗಿ ಮಹಾನಗರ ಪಾಲಿಕೆಯ ವ್ಯವಸ್ಥಾಪಕ ಅಧಿಕಾರಿಯನ್ನು ಗುರುವಾರ ಅಮಾನತು ಗೊಳ್ಳಿಸಿ ಪಾಲಿಕೆ ಆಯುಕ್ತರು ಆದೇಶ ಹೋರಡಿಸಿದ್ದಾರೆ.

ವಿನೋದಕುಮಾರ ಒ೦ಟಿ ಪಾಲಿಕೆಯ ವ್ಯವಸ್ಥಾಪಕರಾಗಿದ್ದ 1966ರ ನಿಯಮ 3(i) (ii) (iii) ನ್ನು ಉಲ್ಲಂಘಿಸಿರುವುದರಿಂದ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ 1957ರ ಪ್ರಕಾರ ಶಿಸ್ತಿನ ಕ್ರಮಕ್ಕೆ ಗುರಿಯಾಗಿರುತ್ತಾರೆ. ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಕರ್ನಾಟಕ ನಾಗರೀಕ ಸೇವಾ ನಿಯಮ 10 (1) (ಡಿ) ಅನ್ವಯ ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ.

Contact Your\'s Advertisement; 9902492681

ಪಿ.ಐ.ಡಿ ಸಂಖ್ಯೆ 87952 ರ ಮಾಲಿಕತ್ವದ ಕಸ್ತೂರಿಬಾಯಿ ಹೆಸರಿನಿಂದ ಅಶ್ರುಲ್ಹಾ ಖಾನ್ ರವರ ಹೆಸರಿಗೆ ಆಕ್ರಮವಾಗಿ ಬದಲಾವಣೆ ಮಾಡಿರುತ್ತಾರೆ ಮತ್ತು ಹಳೆಯ ಆಸ್ತಿ ಸಂಖ್ಯೆ 9-5877/9ಎ ನ್ನು ಪ್ಲಾಟ ನಂ 01 ಸರ್ವೆ ನಂ 25/2 ವಕ್ಕಲಗೇರಾ ಖುಲ್ಲಾ ನಿವೇಶನಕ್ಕೆ ಅನಧೀಕೃತವಾಗಿ ಬದಲಾವಣೆ ಮಾಡಿರುವ ಆರೋಪ ಸಾಬಿತಾಗಿರುವ ಹಿನ್ನೆಲೆಯಲ್ಲಿ ಅಮಾನತು ಗೊಳಿಸಲಾಗಿದೆ ಎಂದು ಶಿಸ್ತು ಪ್ರಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತರಾದ ಪಾಟೀಲ್ ಭುವನೇಶ ದೇವಿದಾಸ್ ತಿಳಿಸಿದ್ದಾರೆ.

2021ರಲ್ಲಿ 43720, 43721, 38103, 43437 ಮತ್ತು 43460 ಅನಧಿಕೃತ ಪಿಐಡಿಗಳು ನೀಡಿರುವ ಹಿನ್ನೆಲೆಯಲ್ಲಿ ದೂರಗಳ ಆಧರಿಸಿ ಉಪ ಆಯುಕ್ತರು ವಿನೋದಕುಮಾರ ಒಂಟಿ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಿ ವಿಚಾರಣೆಗೆ ಒಳಪಡಿಸಿದರು. ಈ ಪ್ರಕರಣಗಳ ವಿಚಾರಣೆ ಇನ್ನೂ ಬಾಕಿ ಇವೆ ಎಂದು ತಿಳಿದುಬಂದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here