ಡಿಜಿಟಲ್ ಸಖಿ ಜಿಲ್ಲಾಮಟ್ಟದ ಕಾರ್ಯಾಗಾರ

0
17

ಕಲಬುರಗಿ: ಪ್ರತಿಯೊಬ್ಬರಲ್ಲೂ ಡಿಜಿಟಲ್ ಹಣಕಾಸಿನ ವ್ಯವಹಾರ ಕುರಿತು ಅರಿವು ಇರಬೇಕು ಎಂದು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಜಗದೇವಪ್ಪ ಬೈಗೊಂಡ ಹೇಳಿದರು.

ನಗರದ ವಿಜ್ಞಾನ ಕೇಂದ್ರದಲ್ಲಿ ಎಲ್ ಆ್ಯಂಡ್ ಟಿ ನೆರವಿನೊಂದಿಗೆ ಅಕ್ಸೆಸ್ ಲೈವ್ಲಿಹುಡ್ಸ್ ಗುರುವಾರ ಆಯೋಜಿಸಿದ್ದ ಡಿಜಿಟಲ್ ಸಖಿ ಜಿಲ್ಲಾಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರಿಗೆ ಡಿಜಿಟಲ್ ಮೂಲಕ ಹಣಕಾಸಿನ ವ್ಯವಹಾರ ಕುರಿತು ಮತ್ತು ಉದ್ಯಮ ಅಭಿವೃದ್ಧಿ, ಜೀವನೋಪಾಯಗಳ ವೃದ್ಧಿ ಕುಕರಿತು ಸಮಗ್ರ ಮಾಹಿತಿ ನೀಡುವ ಕೆಲಸ ಡಿಜಿಟಲ್ ಸಖಿ ಅವರು ಮಾಡುತ್ತಿದ್ದಾರೆ ಎಂದರು.

Contact Your\'s Advertisement; 9902492681

ಒಬ್ಬ ಮಹಿಳೆಯು ಆನ್ ಲೈನ್ ವ್ಯವಹಾರದ ಮಾಹಿತಿ ನೀಡಿದರೆ ಇಡೀ ಕುಟುಂಬಕ್ಕೆ ಮಾಹಿತಿ ನೀಡಿದಂತಾಗುತ್ತದೆ. ಭಾರತವು ಡಿಜಿಟಲ್ ಹಣಕಾಸು ವ್ಯವಹಸರದತ್ತ ಹೆಚ್ಚು ಗಮನ ಕೊಡುತ್ತಿದೆ. ಈ ಸಂದರ್ಭ ದಲ್ಲಿ ಮಹಿಳೆಯರಲ್ಲ ಡಿಜಿಟಲ್ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ಹೊಗಳಿದರು.

ಸಂಸ್ಥೆಯ ಯೋಜನಾ ವ್ಯವಸ್ಥಾಪಕ ಮಹ್ಮದ್ ಸಿರಾಜ್ ಪ್ರಾಸ್ತಾವಿಕ ಮಾತನಾಡಿ, ಡಿಜಿಟಲ್ ಮೂಲಕ ಮಹಿಳಾ ಸಬಲೀಕರಣದ ಉದ್ದೇಶದೊಂದಿಗೆ ಅಕ್ಸೆಸ್ ಲೈವ್ಲಿಹುಡ್ ಸಂಸ್ಥೆಯು ಜಿಲ್ಲೆಯಲ್ಲಿ 72 ಜನ ಸಖಿಯರಿಗೆ ತರಬೇತಿ ನೀಡಲಾಗಿದೆ. ಮೊದಲ ಹಂತವಾಗಿ ಜಿಲ್ಲೆಯ ಆಳಂದ, ಕಲಬುರಗಿ, ಕಮಲಾಪುರ ಮತ್ತು ಚಿಂಚೋಳಿ ತಾಲೂಕಿನ 127 ಗ್ರಾಮಗಳಲ್ಲಿ ತರಬೇತಿ ಪಡೆದ ಈ ಸಖಿಯರು ಮನೆ ಮನೆಗೆ ತೆರಳಿ ಮಹಿಳೆಯರು ಮತ್ತು ಪುರುಷರಿಗೆ ಡಿಜಿಟಲ್ ಹಣಕಾಸಿನ ವ್ಯವಹಾರದ ಕುರಿತು ಮಾಹಿತಿ ನೀಡುತ್ತಿದ್ದಾರೆ ಎಂದು ವಿವರಿಸಿದರು.

ನಬಾರ್ಡ್ ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಲೋಹಿತ ಪಿ, ಲೀಡ್ ಬ್ಯಾಂಕಿನ ಎಲ್.ಡಿ.ಎಂ ಸದಾಶಿವ ರಾತ್ರಿಕರ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಬಿ.ಸತೀಶ ಕುಮಾರ, ಎಸ್ .ಬಿ.ಐ ಆರ್ಥಿಕ ಸಾಕ್ಷರತೆ ಸಲಹೆಗಾರ ಗೋಪಾಲ ಕುಲಕರ್ಣಿ ಉಪಸ್ಥಿತರಿದ್ದರು.
ಐಶ್ವರ್ಯ ಪ್ರಾರ್ಥಿ ಸಿದರು. ಗುರು ಖಣದಾಳ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here