ಕೆಸರಿನ ಗದ್ದೆಯಾದ ರಾಣಾಪುರ ಗ್ರಾಮದ ರಸ್ತೆ.!

0
223
  • ಸಾಜಿದ ಅಲಿ

ಕಲಬುರಗಿ (ಚಿಂಚೋಳಿ): ಜಿಲ್ಲೆಯ ಕೊಂಚಾವರಂ ಅರಣ್ಯ ಪ್ರದೇಶ ಹೊಂದಿರುವ ಚಿಂಚೋಳಿ ಕ್ಷೇತ್ರವು ಈ ನಾಡಿಗೆ ಒಬ್ಬ ಮುಖ್ಯಮಂತ್ರಿಯನ್ನು ಕೊಟ್ಟ ರಮಣೀಯ ಮತ್ತು ಮಹತ್ವದ ಕ್ಷೇತ್ರವಾಗಿದೆ.ಸಂಸದ ಡಾ. ಉಮೇಶ್ ಜಾಧವ ಈ ಹಿಂದೆ ಪ್ರತಿನಿಧಿಸಿದ್ದ ಈ ಕ್ಷೇತ್ರವನ್ನು ಇದೀಗ ಅವರ ಪುತ್ರ ಡಾ. ಅವಿನಾಶ ಜಾಧವ ಪ್ರತಿನಿಧಿಸುತ್ತಿದ್ದಾರೆ.

ಇಂತಹ ಭೌಗೋಳಿಕ ಮತ್ತು ರಾಜಕೀಯ ಹಿನ್ನೆಲೆ ಇರುವ ಈ ಕ್ಷೇತ್ರದಲ್ಲಿ ನೂರಾರು ಸಮಸ್ಯೆಗಳು ಇವೆ. ಮೂಲ ಭೂತ ಸೌಕರ್ಯಗಳಾದ ಕುಡಿಯುವ ನೀರು,ವಿದ್ಯುತ್, ರಸ್ತೆ ಇನ್ನಿತರ ಸೌಲಭ್ಯಗಳು ಈ ವರೆಗೆ ಮರೀಚಿಕೆಯಾಗಿವೆ ಎಂದು ಹೇಳಬಹುದು.

Contact Your\'s Advertisement; 9902492681

ಅದರಂತೆ ಇಲ್ಲಿನ ಚಂದನಕೇರಾ ಗ್ರಾಮ ಪಂಚಾಯಿತಿ ವ್ಯಪ್ತಿಯ ರಾಣಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ತೀರಾ ಹದಗೆಟ್ಟಿದ್ದು, ರಸ್ತೆಗಳು ಹಾಳಾಗಿ ಹೋಗಿ ಕೆಸರಿನ ಗದ್ದೆಗಳಾಗಿ ನಿರ್ಮಾಣವಾಗಿವೆ. ಹೀಗಾಗಿ ಗ್ರಾಮದ ನಿವಾಸಿಗಳು ಪ್ರತಿದಿನ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದಲಿತ ಸೇನೆಯ ತಾಲ್ಲೂಕ ಸಂಘಟನಾ ಕಾರ್ಯದರ್ಶಿ  ಸುರೇಶ ರಾಣಾಪುರ ಅವರು ತಿಳಿಸಿದ್ದಾರೆ.

ಅವರು ಇ ಮೀಡಿಯಾ ಲೈನ್ ಗೆ ಮಾತನಾಡಿ ರಾಣಾಪುರದ ಬಸ್ ನಿಲ್ದಾಣದಿಂದ ರಾಣಾಪುರ ಗ್ರಾಮದ ಒಳಗಡೆ ಹೋಗುವ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ಅದು ಕೂಡ ಕಚ್ಚಾ ರಸ್ತೆಯಾಗಿದ್ದು,  ಮಳೆ ಬಂದರೆ ಗ್ರಾಮಕ್ಕೆ ಪ್ರವೇಶಿಸಲು ಹರಸಾಹಸ ಪಡಬೇಕಾಗುತ್ತದೆ ಎಂದು ಅವರು ತಮ್ಮ ಗ್ರಾಮದ ಹದಗೆಟ್ಟ ರಸ್ತೆಯ ಪರಿಸ್ಥಿತಿಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

ಹದಗೆಟ್ಟಿರುವ ಈ ರಸ್ತೆಯನ್ನು ದುರಸ್ತಿ ಪಡಿಸಿ ಗ್ರಾಮಸ್ಥರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಗ್ರಾಮದ ಯುವ ಮುಖಂಡರು ಆದ ಮಹಾದೇವ್ ಭುತಾಳಿ . ಅಂಬಣ್ಣ ನಾಟಿಕಾರ್ ಕೃಷ್ಣ ತಳವಾರ  ಶಿವಕುಮಾರ್ ಭೂತಳಿ ಚಂದ್ರಕಾಂತ್ ಕಟ್ಟಿಮನಿ ಸೇರಿದಂತೆ ಅನೇಕರು ಆಗ್ರಹಿಸಿದ್ದಾರೆ.

ಆದ್ದರಿಂದ ಸಂಬಂದ ಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಗ್ರಾಮದ ಜನರ ಬವಣೆಗೆ ಪರಿಹಾರ ಕಲ್ಪಿಸಬೇಕು ಸ್ಥಳಿಯ ಶಾಸಕ ಅವಿನಾಶ್ ಜಾಧವ್  ಅವರು ಯಾವುದಾದರು ಯೋಜನೆಯಲ್ಲಿ ರಾಣಾಪುರ ಗ್ರಾಮಕ್ಕೆ ರಸ್ತೆ ಮಂಜೂರು ಮಾಡಿಸುವ ಮೂಲಕ ಜನರ ಸಂಕಷ್ಟ ನಿವಾರಣೆ ಮಾಡಬೇಕಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here