ಶಹಾಬಾದ: ನಗರದ ಹಳೆಶಹಾಬಾದ ಸಮೀಪದಲ್ಲಿರುವ ಕುನ್ನಿಕೆರೆ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ಗುತ್ತಿಗೆದಾರ ಕಳಪೆ ಮಟ್ಟದ ಕಾಮಗಾರಿಯಿಂದ ವರ್ಷದಿಂದ ವರ್ಷಕ್ಕೆ ಅವಸಾನದತ್ತ ಸಾಗುತ್ತಿದೆ.
ನಗರದ ಸುತ್ತಮುತ್ತಲಿನ ಹೇಳಿಕೊಳ್ಳಲು ಇರುವ ಒಂದೇ ಕೆರೆ ಕುನ್ನಿಕೆರೆ. ಇದು ಎಷ್ಟೊ ಜನರಿಗೆ ಇಂದಿಗೂ ಗೊತ್ತಿಲ್ಲ. ಸುಮಾರು 2.60 ಕಿಮೀ ಚೌಕಾಕಾರದ ವಿಸೀರ್ಣ ಹೊಂದಿರುವ ಈ ಕೆರೆಯಲ್ಲಿ ಸರಿಯಾದ ಪ್ರಮಾಣದಲ್ಲಿ ನೀರಿನ ಸಂಗ್ರಹಣೆ ಇಲ್ಲ.ಮಳೆಗಾಲದಲ್ಲಿ ಮಾತ್ರ ಹೊಂಡದಲ್ಲಿ ನೀರು ನಿಲ್ಲುವಂತೆ ನಿಲ್ಲತ್ತದೆ.ಆದರೆ ಸಂಗ್ರಹಣೆಗೊಳ್ಳುವ ಯಾವ ವಿಧಾನವೂ ಇಲ್ಲಿ ಅಳವಡಿಸಿಲ್ಲ.
ಪ್ರತಿ ಬಾರಿ ಹೂಳೆತ್ತುವ ಯೋಜನೆ ಹಾಕಿಕೊಂಡಾಗ ಕೇವಲ ನಾಮಕೇ ಬಾಸ್ತೆ ಎರಡು ಮೂರು ಹೂಳು ತೆಗೆದು ನಂತರ ಬಿಲ್ ಎತ್ತಿ ಹಾಕಲಾಗುತ್ತಿದೆ.ಅಲ್ಲದೇ ಕಳಪೆ ಕಾಮಗಾರಿ ಮಾಡಿ ಗುತ್ತಿಗೆದಾರರು ಹೋಗುತ್ತಿದ್ದಾರೆ.ಇದರಿಂದ ಲಕ್ಷಗಟ್ಟಲೇ ಬಂದ ಅನುದಾನ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಶಾಮೀಲಾಗಿರುವುದರಿಂದ ಕೆರೆ ಹಾಳಾಗುತ್ತಿದೆ. ಸರಕಾರ ಹೊಸ ಕೆರೆಗಳನ್ನು ಅಭಿವೃದ್ಧಿ ಮಾಡಲು ಹೊರಟಿದೆ.ಆದರೆ ಇದ್ದ ಕೆರೆಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿದರೆ ಕೆರೆಗಳಿಗೆ ಜೀವ ಬರುತ್ತದೆ.ಅಲ್ಲದೇ ಪ್ರಾಣಿ ಪಕ್ಷಿಗಳಿಗೆ ದಾಹ ತೀರಿಸುತ್ತದೆ.ಇದರಿಂದ ಜೀವ ವೈವಿಧ್ಯ ಉಳಿಯಲು ಕಾರಣವಾಗುತ್ತದೆ.
ಇತ್ತಿಚ್ಚಿಗಷ್ಟೇ ಕಲಬುರಗಿ ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ ಸುಮಾರು 75 ಲಕ್ಷ ರೂ. ಅನುದಾನದಲ್ಲಿ ಕೆರೆ ದುರಸ್ತಿ ಹಾಗೂ ಅಭಿವೃದ್ಧಿಕಾಮಗಾರಿ ಕೈಗೊಳ್ಳಲಾಗಿತ್ತು.ಆದರೆ ಸರಿಯಾದ ಕಾಮಗಾರಿಯಿಲ್ಲದೇ ಹಾಗೂ ಅಧಿಕಾರಿಗಳ ಸರಿಯಾದ ನಿರ್ವಹಣೆಯಿಲ್ಲದೆ ಕೆಲಸ ನಿಂತಿದೆ.ಸುಮಾರು ಬಾರಿ ಹೂಳೆತ್ತುವ ಹೆಸರಲ್ಲಿ ಅನುದಾನ ಖರ್ಚಾಗುತ್ತಿದೆ.ಆದರೆ ಕೆರೆಗೆ ಜೀವ ತುಂಬುವ ಕೆಲಸ ಮಾತ್ರ ಮಾಡುತ್ತಿಲ್ಲ.
ಈ ಕುನ್ನಿಕೆರೆ ಅಭಿವೃದ್ಧಿಗೊಂಡರೆ ಸುತ್ತಮುತ್ತಲಿನ ಹಳಶಹಾಬಾದ ಹಾಗೂ ತರನಳ್ಳಿ ಗ್ರಾಮದ ಪ್ರದೇಶದಲ್ಲಿ ಅಂತರ್ಜಲ ವೃದ್ಧಿಯಾಗಿ ಕೊಳವೆ ಬಾವಿ ಹಾಗೂ ಬಾವಿಗಳಲ್ಲಿ ನೀರು ಕಾಣಬಹುದು.ಆ ದೃಷ್ಟಿಯಲ್ಲಿ ಸ್ಥಳೀಯ ಜನರು, ಜನಪ್ರತಿನಿದಿಗಳು ಹಾಗೂ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕಾಗಿದೆ ಎಂದುಕಸಾಪ ಕಲಬುರಗಿ ಗ್ರಾಮೀಣ ಕಸಾಪ ಮಾಜಿ ಅಧ್ಯಕ್ಷ ಶರಣಗೌಡ ಪಾಟೀಲ ಒತ್ತಾಯಿಸಿದ್ದಾರೆ.