ಕಲಬುರಗಿ: ನಗರದ ಕುಸನೂರು ರಸ್ತೆಯಲ್ಲಿರುವ ಪ್ರತಿಷ್ಠಿತ ರೇಷ್ಮಿ ಪದವಿ ಕಾಲೇಜಿನ ಬಗ್ಗೆ ಎರಡು ದಿನಗಳ ಹಿಂದೆ ವಿಡಿಯೋ ವೈರಲ್ ಆಗಿದ್ದು, ಸುಳ್ಳು ಸುದ್ದಿಗೆ ಪಾಲಕರು, ವಿದ್ಯಾರ್ಥಿಗಳು ಕಿವಿಗೊಡಬಾರದು ಎಂದು ರೇಷ್ಮಿ ಪದವಿ ಕಾಲೇಜಿನ ಪ್ರಾಚಾರ್ಯ ಶರಣಗೌಡ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಂಸ್ಥೆಯ ಬಗ್ಗೆ ಸುಳ್ಳು ಸುದ್ದಿಯ ವೈರಲ್ ಹರಿದಾಡಿದ ಬಗ್ಗೆ ಗಮನಕ್ಕೆ ಬಂದಿದ್ದು, ಅದು ಕೇವಲ ಅಪಪ್ರಚಾರವಾಗಿದೆ. ಈಗಾಗಲೇ ಸಂಬಂಧಪಟ್ಟ ಇಲಾಖೆಗೆ ದೂರು ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಂಸ್ಥೆಯು ಸದಾಕಾಲ ಬಡವರ ಪರವಾಗಿ ಇರುವುದಲ್ಲದೆ, ಹಲವಾರು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಉಚಿತ ಅನ್ನ ದಾಸೋಹದ ಮೂಲಕ ಕಲ್ಯಾಣ ಕರ್ನಾಟಕದಲ್ಲಿ ತನ್ನದೆಯಾದ ಪ್ರತಿಷ್ಠೆ ಉಳಿಸಿ ಬೆಳೆಸಿಕೊಂಡು ಬಂದಿದೆ. ಸಂಸ್ಥೆಯ ಬಗ್ಗೆ ಹೆಸರನ್ನು ಕೆಡಿಸುವ ದುರುದ್ದೇಶದಿಂದ ಇಲ್ಲಸಲ್ಲದ ಆರೋಪ ಕೆಲವರು ಮಾಡುತ್ತಿದ್ದಾರೆ. ಈ ಸುಳ್ಳು ಸುದ್ದಿಗೆ ಪಾಲಕರು ಹಾಗೂ ವಿದ್ಯಾರ್ಥಿಗಳು ಕಿವಿಕೊಡದಂತೆ ಮನವಿ ಮಾಡಿದ್ದಾರೆ.