23 ರಂದು ಡಾ.ಸಿದ್ಧತೋಟೇಂದ್ರ ಸ್ವಾಮೀಜಿಯವರ ಜನ್ಮ ವರ್ಧಂತಿ ಮಹೋತ್ಸವ
ಚಿತ್ತಾಪುರ:ತಾಲ್ಲೂಕಿನ ನಾಲವಾರದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದಲ್ಲಿ ನವರಾತ್ರಿ ಪ್ರಯುಕ್ತ ಒಂಬತ್ತು ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಭ್ರಮ ಸಡಗರದ ಮಧ್ಯೆ ನಡೆಯಲಿವೆ ಎಂದು ಮಠದ ವಕ್ತಾರ ಮಹಾದೇವ ಕೆ ಗಂವ್ಹಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಠದ ಹಿಂದಿನ ಪೀಠಾಧಿಪತಿಗಳಾಗಿದ್ದ, ಪವಾಡ ಪುರುಷ ಲಿಂ.ತೋಟೇಂದ್ರ ಶಿವಯೋಗಿಗಳ ಪುಣ್ಯಸ್ಮರಣೋತ್ಸವ,ಪ್ರಸ್ತುತ ಪೀಠಾಧಿಪತಿಗಳಾದ ಪೂಜ್ಯ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಜನ್ಮದಿನೋತ್ಸವ ಕಾರ್ಯಕ್ರಮ 23 ರ ಆಯುಧಪೂಜೆಯ ದಿನದಂದು ನಡೆಯಲಿವೆ. ತನ್ನಿಮಿತ್ತವಾಗಿ ವಿವಿಧ ಧಾರ್ಮಿಕ – ಸಾಂಸ್ಕೃತಿಕ – ಸಾಹಿತ್ಯಿಕ ಕಾರ್ಯಕ್ರಮಗಳು ನಡೆಯಲಿವೆ.
ನವರಾತ್ರಿ ಒಂಬತ್ತು ದಿನಗಳು ಪ್ರತಿದಿನ ಸಂಜೆ ಲಿಂ.ತೋಟೇಂದ್ರ ಶಿವಯೋಗಿಗಳ ಕರ್ತೃ ಗದ್ದುಗೆಗೆ ವಿಶೇಷ ಪೂಜೆ,ಪ್ರತಿದಿನ ಒಬ್ಬೊಬ್ಬ ಪ್ರಸಿದ್ಧ ಸಂಗೀತಗಾರರಿಂದ ವಿವಿಧ ವಾದ್ಯಗಳ ನಾದಾರ್ಚನೆ,ಪ್ರವಚನ ಕಾರ್ಯಕ್ರಮಗಳು ನಡೆಯಲಿವೆ.
23 ರಂದು ಆಯುಧಪೂಜೆಯ ದಿನದಂದು ಸಂಜೆ ನಾಡಿನ ಹರಗುರುಚರಮೂರ್ತಿಗಳ ಸಮ್ಮುಖ ಹಾಗೂ ಸಚಿವರು-ಶಾಸಕರ ಉಪಸ್ಥಿತಿಯಲ್ಲಿ ಪೂಜ್ಯ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಜನ್ಮ ವರ್ಧಂತಿ ಮಹೋತ್ಸವ ಅದ್ಧೂರಿಯಾಗಿ ನಡೆಯಲಿದ್ದು,ಪುಸ್ತಕ ಬಿಡುಗಡೆ, ಧ್ವನಿಸುರುಳಿ ಲೋಕಾರ್ಪಣೆ, ಪೂಜ್ಯರ ತುಲಾಭಾರ,ಸಂಗೀತ ರಸಮಂಜರಿ,ಪ್ರಶಸ್ತಿ ಪ್ರದಾನ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳು ನಡೆಯಲಿವೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗುರುವಿನ ಕೃಪೆಗೆ ಪಾತ್ರರಾಗಬೇಕು ಎಂದು ತಿಳಿಸಿದ್ದಾರೆ