ಕಲಬುರಗಿ ಪಾಲಿಕೆಯಿಂದ ಬೊಲ್ಡೊಜರ್ ಕಾರ್ಯಾಚರಣೆ: ಸಂಸದ ಡಾ. ಜಾಧಾವ್ ಆಕ್ರೋಶ

0
21

ಕಲಬುರಗಿ: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಡವರ ಮೇಲೆ ಒಂದಾನೊಂದು ದೌರ್ಜನ್ಯ ಮಾಡುತ್ತಾ ಬರುತ್ತಿದೆ. ವಾರ್ಡ್ ಸಂಖ್ಯೆ 23ರಲ್ಲಿ ಬಂಜಾರ, ದಲಿತ ಹಾಗೂ ಇನ್ನಿತರ ಸಮಾಜದ ಜನರು ಸುಮಾರು 25ವರ್ಷಗಳಿಂದ ವಾಸ ಮಾಡುತ್ತಿರುವ 40 ಮನೆಗಳನ್ನು ಏಕಾಏಕಿ ಇಂದು ಕೆಡವಿದ್ದು (Demolish) ನಾನು ತೀವ್ರವಾಗಿ ಖಂಡನೀಯವಾಗಿದೆ ಎಂದು ಕಲಬುರಗಿ ಲೋಕಸಭಾ ಸದಸ್ಯ ಡಾ. ಉಮೇಶ್ ಜಾಧವ್ ಪಾಲಿಕೆಯ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಸರ್ವೋಚ್ಚ ನ್ಯಾಯಾಲಯದ ನಿರ್ದೇಶನೆಯೆ ಇದೆ ಅತಿಕ್ರಮಣವಾಗಿ ನೆಲೆಸಿದವರನ್ನು ಮೊದಲು ಪರ್ಯಾಯವಾಗಿ ಜಾಗದಲ್ಲಿ ಸ್ಥಳಾಂತರಿಸಿ ಆಮೇಲೆ ಅತಿಕ್ರಮಣ ತೆರವುಗೊಳಿಸಬೇಕು. ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರು ಇಡೀ ದೇಶದಲ್ಲಿ ಸೂರು ಇಲ್ಲದವರನ್ನು ಸೂರು ಕಲ್ಪಿಸಿ ಕೊಡುವ ಕನಸನ್ನು ಕಂಡಿದ್ದಾರೆ ಅದರ ಪ್ರಕಾರ ದೇಶದಲ್ಲಿ ಬಡವರಿಗೆ ದೀನದಲಿತರಿಗೆ ಸೂರು ಕಲ್ಪಿಸುವ ಕೆಲಸವು ನಡೆಯುತ್ತಿದೆ. ಆದರೆ ಇಂದಿನ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಮಹಾನಗರ ಪಾಲಿಕೆಯು ಈ ರೀತಿ ಕ್ರಮ ಕೈಗೊಂಡಿದ್ದು ನಿಜಕ್ಕೂ ಇದು ಖೇದಕರ ಸಂಗತಿ. ನಾನು ರಾಜ್ಯಸರ್ಕಾರಕ್ಕೆ ಕೇಳಲು ಬಯಸುತ್ತೇನೆ ಈ ರೀತಿ ಏಕಾಏಕಿ ಈ ಬಡವರ ಬದುಕನ್ನು ಬೀದಿಪಾಲು ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಇದೆ? ರಾಜ್ಯದ ಪ್ರತಿಯೊಂದು ಬಡವರ ಕುಟುಂಬಕ್ಕೆ ಸೂರು ಕಲ್ಪಿಸುವ ಆಶಯ ನಿಮಗೆ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.

Contact Your\'s Advertisement; 9902492681

ಈ ಆಶ್ರಯ ಕಾಲೋನಿ ದಂತಹ ಕಲಬುರ್ಗಿಯಲ್ಲಿ ನೂರಾರು ಕಡೆ ಜನರು ಅತಿಕ್ರಮಣವಾಗಿ ನೆಲೆಸಿದ್ದಾರೆ, ನಾನು ಅವರೆಲ್ಲರ ಪರವಾಗಿ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತವನ್ನು ಕೇಳಿಕೊಳ್ಳುತ್ತೇನೆ, ಅವರನ್ನು ಇದೇ ರೀತಿ ಅತಿಕ್ರಮಣ ತೆರವು ಗೊಳಿಸುವ ನಿಟ್ಟಿನಲ್ಲಿ ನಿರಾಶ್ರಿತ ಮಾಡಬೇಡಿ, ಅವರೆಲ್ಲರೂ ವಾಸುಸುತ್ತಿರುವ ಜಾಗವನ್ನು ಅವರ ಹೆಸರ ಮೇಲೆ ಖಾಯಂಗೊಳಿಸಿ, ಅವರೆಲ್ಲರಿಗೂ ಕೂಡ ಈ ತೆರವಿನ ಆತಂಕದಿಂದ ಮುಕ್ತಗೊಳಿಸಬೇಕೆಂದು ಎಂದು ತಿಳಿಸಿದ್ದಾರೆ.

ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಇಂತಹ ಯಾವುದೇ ಘಟನೆಗಳು ನಡೆದಿಲ್ಲಾ, ಕೂಡಲೇ ಆ ಸಂತ್ರಸ್ತ ಕುಟುಂಬಗಳಿಗೆ ಸೂಕ್ತವಾದ ಸ್ಥಳವನ್ನು ನೀಡಿ ಅವರ ಬದುಕನ್ನು ಹಸನು ಮಾಡುವ ಕೆಲಸ ಸರ್ಕಾರ ಕೂಡಲೇ ಮಾಡಬೇಕೆಂದು ಅಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here