ಮುಸ್ಲಿಮರ ಮೀಸಲಾತಿ ಮರುಸ್ಥಾಪನೆ ಮತ್ತು ಶೇ.8% ಹೆಚ್ಚಳಕ್ಕೆ ಆಗ್ರಹಿಸಿ ಕಲಬುರಗಿಯಲ್ಲಿ ಪ್ರತಿಭಟನಾ ಧರಣಿ

0
49

ಕಲಬುರಗಿ: ರಾಜ್ಯ ಸರ್ಕಾರ ಕಾಂತರಾಜ ಆಯೋಗದ ಜಾತಿ ಗಣತಿ ವರದಿಯನ್ನು ಅಂಗೀಕರಿಸಿ ಜಾರಿಗೆ ತರಬೇಕು ಮತ್ತು ಮುಸ್ಲಿಮರ ಮೀಸಲಾತಿ 2ಬಿ ಪ್ರಮಾಣವನ್ನು ಶೇ. 8ಕ್ಕೆ ಏರಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಶನಿವಾರ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ವತಿಯಿಂದ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಲಾಯಿತು.

ಎಸ್ಡಿಪಿಐ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೈಯದ್ ಸಲಿಂ ಇಲಾಹಿ ಮಾತನಾಡಿ, ಸರ್ಕಾರ ಚುನಾವಣೆ ಸಂದರ್ಭದಲ್ಲಿ ಮತಕ್ಕಾಗಿ ಅಹಿಂದ ವರ್ಗಗಳಿಗೆ ಹೇಳಿತ್ತು ನಾವು ಅಧಿಕಾರಕ್ಕೆ ಬಂದರೆ ಕಾಂತರಾಜ್ ವರದಿಯನ್ನು ಜಾರಿಗೊಳಿಸುತ್ತೇವೆ ಮತ್ತು ಅದೇ ರೀತಿ ಮುಸ್ಲಿಮರಿಗೆ 2ಬಿ ಮೀಸಲಾತಿಯನ್ನು ಮರು ಸ್ಥಾಪಿಸುತ್ತೇವೆ ಎಂದು ಈ ಮಾತನ್ನು ಕಾಂಗ್ರೆಸ್ ಸರ್ಕಾರ ನೀಡದೆ ವಂಚಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.

Contact Your\'s Advertisement; 9902492681

ರಾಜ್ಯ ಸರಕಾರವು ಈ ಹಿಂದೆ ನೇಮಿಸಿದ ಹಿಂದುಳಿದ ವರ್ಗಗಳ ಎಲ್ಲ ಆಯೋಗಗಳೂ ಮುಸ್ಲಿಮರು ತೀವ್ರ ಹಿಂದುಳಿದ ಸಮುದಾಯವೆಂದು ಗುರುತಿಸಿದೆ. ಕಾಂತರಾಜ ಅಧ್ಯಕ್ಷತೆಯ ಆಯೋಗವು ರಾಜ್ಯದಲ್ಲಿ ಮುಸ್ಲಿಮರ ಜನಸಂಖ್ಯೆಯು ಶೇಕಡಾ 16 ರಷ್ಟು ಇದೆ ಎಂದು ಗುರುತಿಸಿದೆ.

ಈ ಜನಸಂಖ್ಯೆ ಮತ್ತು ಹಿಂದುಳಿದಿರುವಿಕೆಗೆ ಅನುಗುಣವಾಗಿ 2 ಬಿ ಪ್ರವರ್ಗದ ಮೀಸಲಾತಿಯನ್ನು ಶೇಕಡಾ 8 ಕ್ಕೆ ಹೆಚ್ಚಿಸಬೇಕಾದ ಅಗತ್ಯವಿದೆ, ಮುಸ್ಲಿಮರ ಹಿಂದುಳಿದಿರುವಿಕೆಯ ಸದ್ಯದ ಸ್ಥಿತಿಗತಿಯನ್ನು ತಿಳಿದುಕೊಳ್ಳಲು ಅಗತ್ಯ ಬಿದ್ದರೆ ಪ್ರತ್ಯೇಕ ಸಮೀಕ್ಷೆಯನ್ನು ನಡೆಸಬೇಕು ಎಂದು ಒತ್ತಾಯಿಸಿದೆ.

ಕಾಂತರಾಜ ಆಯೋಗದ ವರದಿಯಂತೆ ಮತ್ತು ಚುನಾವಣೆ ಸಂದರ್ಭದಲ್ಲಿ ಅಂಹಿದ ವರ್ಗಕ್ಕೆ ನೀಡಿರುವ ಮುಸ್ಲಿಂ ಮೀಸಲಾತಿ ಮರುಸ್ಥಾಪನೆಯ ಭರವಸೆಯನ್ನು ರಾಜ್ಯ ಸರಕಾರ ಈಡೇರಿಸಬೇಕೆಂದು ಧರಣಿ ನಿರತ ಹೋರಾಟಗಾರರು ಆಗ್ರಹಿಸಿದರು.

ಈ‌ ಸಂದರ್ಭದಲ್ಲಿ ಎಸ್ಡಿಪಿಐ ರಾಜ್ಯಾ ಉಪಾ ಅಧ್ಯಕ್ಷರಾದ ಸೈಯದಾ ಸಾದಿಯಾ, ರಾಜ್ಯ ಪರಿಷತ್ ಸದಸ್ಯ ಅಬ್ದುಲ್ ರಹೀಮ್ ಪಟೇಲ್, ಜಿಲ್ಲಾಧ್ಯಕ್ಷ ಸೈಯದ್ ದಸ್ತಗೀರ್, ಮೊಹಮ್ಮದ್ ಮೊಹ್ಸಿನ್, WIM ರಾಜ್ಯ ಪರಿಷತ್ ಸದಸ್ಯ ರೆಹನಾ ಬೇಗಂ, WIM ಜಿಲ್ಲಾಧ್ಯಕ್ಷ ಸಮೀನಾ ಬೇಗಂ, ಬಸವರಾಜ್ ರಾವೂರ್, ಅಫಜಲ್ ಅಹ್ಮದ್ ಸೇರಿದಂತೆ ಇನ್ನಿತರ ಮುಸ್ಲಿಂ ದಲಿತ ಪರ, ಸಾಮಾಜಿಕ ಹೋರಾಟಗಾರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here