ಸತತ ಅಧ್ಯಯನ ಆದರ್ಶ ವ್ಯಕ್ತಿಯನ್ನಾಗಿ ರೂಪಿಸುತ್ತದೆ: ಪಾಟೀಲ್

0
72

ಬೀದರ: ವಿದ್ಯಾರ್ಥಿಗಳು ಜೀವನದಲ್ಲಿ ಗುರಿಯನ್ನಿಟ್ಟುಕೊಂಡು ಸತತ ಅಧ್ಯಯನದಲ್ಲಿ ತೊಡಗಿಕೊಂಡಾಗ ಮಾತ್ರ ಸಮಾಜದಲ್ಲಿ ಆದರ್ಶ ವ್ಯಕ್ತಿಗಳನ್ನಾಗಿ ಹೊರಹೊಮ್ಮುತ್ತಾರೆಂದು ಹಿರಿಯ ಸಾಹಿತಿ ವಿಮರ್ಶಕ ಕನ್ನಡ ವಿದ್ವಾಂಸರಾದ ಡಾ.ಗವಿಸಿದ್ದಪ್ಪಾ ಪಾಟೀಲರವರು ಗುಲಬರ್ಗಾ ವಿಶ್ವವಿದ್ಯಾಲಯದ ಹಾಲಹಳ್ಳಿ ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದಲ್ಲಿ ವಿದ್ಯಾರ್ಥಿಗಳು ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಮತ್ತು ಎಮ್ ಎ ದ್ವೀತಿಯ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿದರು.

ನಂತರ ಮಾತನಾಡುತ್ತ ಮುಂದುವರೆದು ವಿದ್ಯಾರ್ಥಿಗಳು ಮಾಹತ್ಮರನ್ನ ಶರಣರನ್ನ ಆದರ್ಶವಾಗಿಟ್ಟುಕೊಂಡು ನಾಡಿಗಾಗಿ ಸಾಮಾಜಿಕ ವ್ಯವಸ್ಥೆ ಪರಿವರ್ತನೆಗಾಗಿ ಹೋರಾಟ ಮಾಡಿ ಅಜರಾಮರವಾಗಿರುವವರ ಇತಿಹಾಸವನ್ನು ಮೆಲಕು ಹಾಕುತ್ತಾ ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಬದುಕು ಕಟ್ಟಿಕೊಳ್ಳಬೆಕೆಂದರು ಮುಖ್ಯ ಅತಿಥಿಗಳಾಗಿ ಮೌಲ್ಯಮಾಪನ ಕುಲಸಚಿವರು ಪರಮೇಶ್ವರ್ ನಾಯ್ಕ ಡಾ.ರಾಮಚಂದ್ರ ಗಣಾಪೂರ ಡಾ.ಸುನೀಲ ಜಾಬಾದಿ ಡಾ.ಮಾಹನಂದ ಮಡಕಿ ಡಾ.ಅಶೋಕ ಬಾಬು ಮಾತನಾಡಿದರು.

Contact Your\'s Advertisement; 9902492681

ಮಾತನಾಡಿದ ಮಾರುತಿ ಗಂಜಗಿರಿ ರವರು ಎಂತಹ ಸಾಮಾನ್ಯ ವ್ಯಕ್ತಿಗು ಸಹಿತ ಸಮಾಜದಲ್ಲಿ ಅಸಾಮಾನ್ಯ ವ್ಯಕ್ತಿಯನ್ನಾಗಿ ತಯ್ಯಾರುಮಾಡುವ ಶಕ್ತಿ ಶಿಕ್ಷಣ ವೃತ್ತಿಗಿದೆ ಎಂದು ಅರಿತವರು ಡಾ ಸರ್ವೆಪಲ್ಲಿ ರಾಧಾಕೃಷ್ಣನ್ ರವರಿಗೆ ಗೊತ್ತಿತ್ತು ಅದಕ್ಕಾಗಿ ಅವರು ತಮ್ಮ ಜನ್ಮದಿನವನ್ನು ಶಿಕ್ಷಕರ ದಿನಾಚರಣೆನ್ನಾಗಿ ಆಚರಣೆ ಮಾಡಬೇಕೆಂದು ಕರೆ ಕೊಟ್ಟರು ಮುಂದಾಲೋಚನೆ ಇದ್ದವರು ಈ ಜಗತ್ತಿನಲ್ಲಿ ಸೊರ್ಯಚಂದ್ರ ಇರುವವರೆಗು ಜೀವಂತ ಇರುತ್ತಾರೆ ಮತ್ತು ವಿಶೇಷವಾಗಿ ದೇಶದ ಪ್ರಥಮ ಮಹಿಳಾ ಶಿಕ್ಷಕಿಯಾದ ಸಾವಿತ್ರಿಬಾಯಿ ಫುಲೆಯವರ ಕೊಡುಗೆ ಅಪಾರವಾಗಿದೆ ಅಂದು ಸಾವಿತ್ರಿಬಾಯಿ ಫುಲೆ ಸಗಣಿ ಎರಚಿದ ಸೀರೆ ಕುಪ್ಪಸವನ್ನು ಇಟ್ಟುಕೊಳ್ಳುವ ಬ್ಯಾಗಿನಲ್ಲಿ ಇಂದು ಮಹಿಳೆಯರು ಅಪಾರ ಮೌಲ್ಯವುಳ್ಳ ವಸ್ತುಗಳನ್ನು ಇಟ್ಟುಕೊಳ್ಳುತ್ತಿದ್ದಾರೆ ಆದರೆ ಪುಲೆಯವರ ತ್ಯಾಗ ಬಲಿದಾನ ಮರೆಯುತ್ತಿದ್ದಾರೆಂದು ಕಳವಳ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಡಾ. ಸಾವಳೆಯವರು, ಡಾ. ಸುರೇಖಾ ಬಿರಾದರ ಉಪಸ್ಥಿತರಿದ್ದರು. ಸತ್ಯಶೀಲ ಪ್ರಾರ್ಥಿಸಿದರು. ಸತೀಶ್ ನಿರೂಪಿಸಿದರು. ಜ್ಯೋತಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here