ಸುರಪುರ:ಕನ್ನಡ ಸಾಹಿತ್ಯ ಸಂಘ ಸುರಪುರ ಹಾಗೂ ರಿಕ್ರಿಯೇಷನ್ ಕ್ಲಬ್ ಸುರಪುರ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ 37ನೇ ನಾಡ ಹಬ್ಬ ಕಾರ್ಯಕ್ರಮಕ್ಕೆ ನಾಡ ಹಬ್ಬ ಉತ್ಸವ ಸಮಿತಿ ಗೌರವಾಧ್ಯಕ್ಷ ರಾಜಾ ಪಾಮ ನಾಯಕ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಾಡ ಹಬ್ಬ ಉತ್ಸವ ಸಮಿತಿ ಅಧ್ಯಕ್ಷ ರಾಜಾ ಮುಕುಂದ ನಾಯಕ ಮಾತನಾಡಿ,ಕಳೆದ 34 ವರ್ಷಗಳಿಂದ ನಮ್ಮೆಲ್ಲರ ಸಾಂಸ್ಕøತಿಕ ರಾಯಭಾರಿಯಾಗಿದ್ದ ರಾಜಾ ಮದನಗೋಪಾಲ ನಾಯಕ ಅವರು ನಡೆಸುಕೊಂಡು ಬರುತ್ತಿದ್ದ ನಾಡ ಹಬ್ಬ ಕಾರ್ಯಕ್ರಮವನ್ನು ಕಳೆದ 3 ವರ್ಷಗಳಿಂದ ರಾಜಾ ಮದನಗೋಪಾಲ ನಾಯಕರಿಲ್ಲದೆ ನಾಡ ಹಬ್ಬ ಮಾಡುತ್ತಿದ್ದೇವೆ ಎಂದು ಭಾವುಕರಾದರು,ಅಲ್ಲದೆ ಮುಂದೆಯೂ ಎಲ್ಲರ ಸಹಕಾರ ದೊಂದಿಗೆ ನಾಡ ಹಬ್ಬದ ಜೊತೆಗೆ ನಾಡು ನುಡಿ ಸಂಸ್ಕøತಿಯನ್ನು ಉಳಿಸಿ ಬೆಳೆಸೋಣ ಎಂದರು.
ಇದೇ ಸಂದರ್ಭದಲ್ಲಿ ಮತ್ತೋರ್ವ ಮುಖಂಡ ಕಲಬುರ್ಗಿ ಯಾದಗಿರಿ ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಡಾ:ಸುರೇಶ ಸಜ್ಜನ್ ಮಾತನಾಡಿ,ರಾಜಾ ಮದನಗೋಪಾಲ ನಾಯಕ ಅವರು ಕಳೆದ ಅನೇಕ ವರ್ಷಗಳಿಂದ ನಡೆಸಿಕೊಂಡು ಬಂದಿದ್ದ ಈ ನಾಡ ಹಬ್ಬ ಸೇರಿದಂತೆ ಎಲ್ಲ ಕಾರ್ಯಕ್ರಮಗಳು ಈಗ ರಾಜಾ ಮುಕುಂದ ನಾಯಕ ಅವರ ನೇತೃತ್ವದಲ್ಲಿ ನಡೆಯುತ್ತಿರುವುದು ಸಂತೋಷದ ಸಂಗತಿಯಾಗಿದೆ, ಈ ಎಲ್ಲಾ ಕಾರ್ಯಕ್ರಮಗಳನ್ನು ರಾಜಾ ಮದನಗೋಪಾಲ ನಾಯಕ ಅವರು ನೋಡಿ ಆನಂದಪಡುತ್ತಿರುತ್ತಾರೆ.
ಮುಂದೆಯೂ ಈ ಎಲ್ಲಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗೊಣ ಎಂದರು.ಅಲ್ಲದೆ ನಾನು ಮುಂಬರು ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯ ಆಕಾಂಕ್ಷಿಯಾಗಿದ್ದು, ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ಅದು ನೆರವೇರಿದಲ್ಲಿ ಮುಂದಿನ ವರ್ಷದ ಕಾರ್ಯಕ್ರಮದ ಎಲ್ಲಾ ಭಾರವನ್ನು ನಾನೆ ಹೊರುವುದಾಗಿ ಚಾಮುಂಡೇಶ್ವರಿಯಲ್ಲಿ ಬೇಡಿಕೊಂಡಿರುವುದಾಗಿ ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಚಾಮುಂಡೇಶ್ವರಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು,ನಂತರ ಮುಖಂಡ ಹೆಚ್.ಸಿ ಪಾಟೀಲ್,ಬಸವರಾಜ ಜಮದ್ರಖಾನಿ ಕಾರ್ಯಕ್ರಮದ ಕುರಿತು ಮಾತನಾಡಿದರು.
ನಂತರ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.ಕಾರ್ಯಕ್ರಮ ವೇದಿಕೆ ಮೇಲೆ ಮುಖಂಡರಾದ ಕಿಶೋರಚಂದ್ ಜೈನ್,ಪ್ರಕಾಶ ಸಜ್ಜನ್,ಸೋಮನಾಥ ನಾಯಕ ಡೊಣ್ಣಿಗೇರ,ರಾಯಚಂದ್ರ ಜೈನ್ ಸೇರಿದಂತೆ ಅನೇಕರಿದ್ದರು.ಕಾರ್ಯಕ್ರಮದಲ್ಲಿ ನಬಿಲಾಲ ಮಕಾಂದಾರ,ಶ್ರೀನಿವಾಸ ಜಾಲವಾದಿ,ಎ.ಕವiಲಾಕರ,ಹೆಚ್.ರಾಠೋಡ ಸೇರಿದಂತೆ ಅನೇಕರಿದ್ದರು.ಶಿವಕುಮಾರ ಮಸ್ಕಿ ನಿರೂಪಿಸಿದರು,ರಾಜಶೇಖರ ದೇಸಾಯಿ ಸ್ವಾಗತಿಸಿದರು,ದೇವು ಹೆಬ್ಬಾಳ ವಂದಿಸಿದರು.
ನಾಡ ಹಬ್ಬ ಉದ್ಘಾಟನೆ ಸಂದರ್ಭದಲ್ಲಿ ಉಪನ್ಯಾಸಕ ಡಾ:ಮಲ್ಲಿಕಾರ್ಜುನ ಕಮತಗಿ ರಚಿಸಿರುವ ಅರಳಿ ಎಲೆಗಳ ಮೇಲೆ ವಿವಿಧ ಮಹಾತ್ಮರು,ಸ್ವಾತಂತ್ರ್ಯ ಹೋರಾಟಗಾರರು,ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಸಾಹಿತಿಗಳ ಚಿತ್ರ ಬಿಡಿಸಿರುವ ಕಲಾಕೃತಿಗಳ ಅನಾವರಣ ಕಾರ್ಯಕ್ರಮ ಜರುಗಿತು.ಅರಳಿ ಎಲೆಯ ಮೇಲೆ ರಚಿಸಿರುವ 52 ಕಲಾಕೃತಿಗಳು ಎಲ್ಲರ ಗಮನ ಸೆಳೆದವು.ಕಾರ್ಯಕ್ರಮದ ಆಯೋಜಕ ರಿಂದ ಕಲಾಕಾರ ಡಾ:ಮಲ್ಲಿಕಾರ್ಜುನ ಕಮತಗಿಗೆ ಸನ್ಮಾನಿಸಿ ಗೌರವಿಸಿದರು.