ಬಸವಣ್ಣನವರ ಭಾವಚಿತ್ರ ಅವಮಾನ ಖಂಡಿಸಿ ಪ್ರತಿಭಟನೆ

0
16

ಶಹಾಬಾದ: ಚಿತ್ತಾಪೂರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ವಿಶ್ವಗುರು ಬಸವಣ್ಣ ಅವರ ಭಾವಚಿತ್ರಕ್ಕೆ ಅವಮಾನಿಸಿರುವುದು ಖಂಡನೀಯ. ಕೂಡಲೇ ಕಿಡಿಗೇಡಿಗಳನ್ನು ಬಂಧಿಸಿ ಕಾನೂನು ಕ್ರಮ ವಹಿಸಬೇಕೆಂದು ಒತ್ತಾಯಿಸಿ ವೀರಶೈವ ಲಿಂಗಾಯತ ಸಮಾಜದ ತಾಲೂಕು ಘಟಕ, ಹಳೇಶಹಾಬಾದ ಘಟಕ ಹಾಗೂ ತೊನಸನಹಳ್ಳಿ(ಎಸ್) ಗ್ರಾಮದ ವೀರಶೈವ ಮುಖಂಡರು ತಹಸೀಲ್ದಾರ ಗುರುರಾಜ ಸಂಗಾವಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ತೊನಸನಹಳ್ಳಿ(ಎಸ್) ಗ್ರಾಮದ ವೀರಶೈವ ಲಿಂಗಾಯತ ಸಮಾಜದ ನೂರಾರು ಜನರು ಗ್ರಾಮದಿಂದ ಬಸವೇಶ್ವರ ವೃತ್ತದವರೆಗೆ ಪಾದಯಾತ್ರೆ ನಡೆಸಿದರು.ಅಲ್ಲದೇ ತಾಲೂಕಾ ಘಟಕ ಹಾಗೂ ಹಳೇಶಹಾಬಾದ ಘಟಕದ ವೀರಶೈವ ಲಿಂಗಾಯತ ಸಮಾಜದವರು ಬಸವೇಶ್ವರ ವೃತ್ತದವರೆಗೂ ಪಾದಯಾತ್ರೆಯ ಮೂಲಕ ಪ್ರತಿಭಟನೆ ನಡೆಸಿ, ನಂತರ ಎಲ್ಲರೂ ಕೂಡಿಕೊಂಡು ತಹಸೀಲ್ದಾರ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಮನವಿ ಪತ್ರ ಸಲ್ಲಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಶಿವಾನಂದ ಪಾಟೀಲ ಮರತೂರ,ಹನ್ನೆರಡನೇ ಶತಮಾನದಲ್ಲಿ ಜಾತಿ-ಮತಗಳನ್ನು ದೂರ ಮಾಡಿ ಸಮಾನತೆ ತತ್ವಗಳನ್ನು ಬೋಧಿಸಿ ಎಲ್ಲರೂ ಒಂದೇ ಎಂದು ಸಾರಿದ ವಿಶ್ವಗುರು ಬಸವಣ್ಣ ಅವರ ಭಾವಚಿತ್ರಕ್ಕೆ ಕಿಡಿಗೇಡಿಗಳು ಅವಮಾನ ಮಾಡಿ ಸಮಾಜದಲ್ಲಿ ಅಶಾಂತಿ ಉಂಟು ಮಾಡಿರುವುದು ಸಲ್ಲ. ವಿಕೃತ ಮನಸ್ಸಿನ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅರುಣ ಪಟ್ಟಣಕರ್ ಮಾತನಾಡಿ,ಬಸವಣ್ಣನವರ ಭಾವಚಿತ್ರ ವಿರೂಪಗೊಳಿಸಿ ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ. ಬಸವಣ್ಣನವರು ಸಾಮಾಜಿಕ ಸಮಾನತೆ, ಲಿಂಗಸಮಾನತೆಯನ್ನು ಅನುμÁ್ಠನಗೊಳಿಸಿದವರು. ಸಮಾಜಕ್ಕೆ ಮೌಲ್ಯಗಳನ್ನು ನೀಡಿದವರು. ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವ ಮಾದರಿಯನ್ನು ತೋರಿಸಿಕೊಟ್ಟ ಯುಗಪುರುಷರಾಗಿದ್ದಾರೆ.ಸಮಾಜ ಸುಧಾರಕ ಬಸವಣ್ಣನ ಭಾವಚಿತ್ರ ವಿರೂಪಗೊಳಿಸಿರುವುದು ಖಂಡನೀಯ. ದೇಶ, ವಿದೇಶದಲ್ಲಿರುವ ಬಸವ ಭಕ್ತರಿಗೆ ಇದರಿಂದ ಆಘಾತವಾಗಿದೆ. ಸರ್ಕಾರ ಕೂಡಲೇ ದುಷ್ಕರ್ಮಿಗಳನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

ವೀರಶೈವ ಸಮಾಜದ ತಾಲೂಕಾಧ್ಯಕ್ಷ ಶರಣಬಸಪ್ಪ ಕೋಬಾಳ, ಹಳೆಶಹಾಬಾದ ಅಧ್ಯಕ್ಷ ಮಲ್ಲಿಕಾರ್ಜುನ ಚಂದನಕೇರಿ, ಶರಣಯ್ಯಸ್ವಾಮಿ, ಅಣವೀರ ಇಂಗಿನಶೆಟ್ಟಿ,ಸೂರ್ಯಕಾಂತ ಕೋಬಾಳ, ವಿಶ್ವರಾಧ್ಯ ಬೀರಾಳ, ಅಣವೀರ ಗೊಳೇದ್,ಶರಣಗೌಡ ಪಾಟೀಲ ಗೋಳಾ(ಕೆ), ವಿಜಯಕುಮಾರ ಮುಟ್ಟತ್ತಿ,ಸಾಹೇಬಗೌಡ ಬೋಗುಂಡಿ,ರುದ್ರಗೌಡ ಪಾಟೀಲ,ನಾಗಣ್ಣ ರಾಂಪೂರೆ,ಬಸವರಾಜ ತರನಳ್ಳಿ,ಸಂತೋಷ ಪಾಟೀಲ,ಭೀಮಾಶಂಕರ ಕುಂಬಾರ,ಸದಾನಂದ ಕುಂಬಾರ,ಸೂರ್ಯಕಾಂತ ವಾರದ, ದತ್ತು ಘಂಟಿ, ಬಸವರಾಜ ಗೊಳೇದ್, ಅಭಿಷೇಕ ಪಾಟೀಲ,ಮಲ್ಲಿಕಾರ್ಜುನ ಗೊಳೇದ್,ಬೆಳೆಪ್ಪ ಪಾಟೀಲ,ಪ್ರಕಾಶ ಹಿರೇಮಠ,ಶರಣು ಕೊಡದೂರ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here