ಕಲಬುರಗಿಯಲ್ಲಿ ಮೊತ್ತೊಂದು ದೇವರ ಮೂರ್ತಿ ಭಗ್ನ: ಸ್ಥಳಕ್ಕೆ ಧಾವಿಸಿದ ಪೊಲೀಸರು

0
248

ಕಲಬುರಗಿ: ಇತ್ತೀಚಿಗೆ ಚಿತ್ತಾಪೂರು ತಾಲ್ಲೂಕಿನ ಹಲಕಟಿ ದಲ್ಲಿ ಬಸವಣ್ಣನವರ ಭಾವ ಚಿತ್ರಕ್ಕೆ ಅವಮಾನ ಮಾಡಿರುವ ಬೆನ್ನಲ್ಲೆ ಇತ್ತ ಮತ್ತೊಂದು ದೇವರ ಮೂರ್ತಿಯನ್ನು ಕಿಡಿಗೇಡಿಗಳು ಭಗ್ನಗೊಳ್ಳಿಸಿರುವ ಘಟನೆ ಬೆಳಕಿಗೆ ಬಂದಿದೆ.

ಶಹಾಬಾದ ತಾಲೂಕಿನ ಮುತ್ತಗಾ ಗ್ರಾಮದ ಹೊರವಲಯದಲ್ಲಿರುವ ಕಂಠಿ ಬಸವೇಶ್ವರ ದೇವಸ್ಥಾನ ನಂದಿ ಮೂರ್ತಿಯನ್ನು ಯಾರೋ ಕಿಡಿಗೇಡಿಗಳು ಭಗ್ನಗೊಳಿಸಿದ ಘಟನೆ ಮಂಗಳವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.

Contact Your\'s Advertisement; 9902492681

ಗ್ರಾಮದಿಂದ ಹೊರವಲಯದಲ್ಲಿರುವ ಕಂಠಿ ಬಸವೇಶ್ವರ ದೇವಸ್ಥಾನಕ್ಕೆ ಪೂಜೆಗೆಂದು ಬಂದ ಮಂದಿರದ ಸ್ವಾಮಿಗಳು ನಂದಿ ಮೂರ್ತಿ ಭಗ್ನಗೊಂಡಿದನ್ನು ಕಂಡು ಗ್ರಾಮದ ಮುಖಂಡರಿಗೆ ತಿಳಿಸಿದ್ದಾರೆ. ಅಲ್ಲದೇ ದೇವಸ್ಥಾನದ ಕೀಲಿ ಮುರಿದು ಗರ್ಭಗುಡಿಯೊಳಗೆ ಪ್ರವೇಶ ಮಾಡಿ ನಂದಿ ಮೂರ್ತಿಯ ಮುಖವನ್ನು ಹಾಗೂ ಕಾಲನ್ನು ಧ್ವಂಸಗೊಳಿಸಿದಲ್ಲದೇ, ಪಾದುಕೆಗಳು,ಹಳೆಯ ಮೂರ್ತಿಗಳನ್ನು ಹೊರಗಡೆ ಹಾಕಿದ್ದಾರೆ. ಸುದ್ದಿ ತಿಳಿದ ತಕ್ಷಣವೇ ಪಿಐ ರಾಘವೇಂದ್ರ.ಎಸ್.ಎಚ್ ಅವರು ಸ್ಥಳಕ್ಕೆ ಬಂದು ಪರಿಶೀಲಿಸಿದರು.

ನಂತರ ಗ್ರಾಮಸ್ಥರು ಹಾಗೂ ಮುಖಂಡರೊಂದಿಗೆ ಮಾತನಾಡಿ,  ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳನ್ನು ಆದಷ್ಟು ಬೇಗನೆ  ಬಂಧಿಸಲು ಎಲ್ಲಾ ರಿತೀಯ ಪ್ರಯತ್ನ ಮಾಡುತ್ತೆವೆ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.

ಈ ಹಿಂದೆ ಕಳೆದ ವರ್ಷ ನವೆಂಬರ್ 9 ರಂದು ಕಂಠಿ ಬಸವೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಬರುವ ಹಾದಿ ಬಸವಣ್ಣನ ನಂದಿ ವಿಗ್ರಹವನ್ನು ಭಗ್ನಗೊಳಿಸಿದ್ದರು.ಈ ರಿತೀಯ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿದ್ದು, ಕೂಡಲೇ ಮೂರ್ತಿಯನ್ನು ಭಗ್ನಗೊಳಿಸಿದ ಕಿಡಿಗೇಡಿಗಳನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು.ಇನ್ನೊಮ್ಮೆ ಈ ರೀತಿಯ ಘಟನೆಗಳು ನಡೆದಂತೆ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ನಂತರ ಜಿಲ್ಲಾ ಎಸ್ಪಿ ಅಡ್ಡೂರು ಶ್ರೀನಿವಾಸಲು , ಹೆಚ್ಚುವರಿ ಎಸ್ಪಿ ಬೇಟಿ ನೀಡಿದರು.ಅಲ್ಲದೇ ಕಿಡಿಗೇಡಿಗಳನ್ನು ಆದಷ್ಟು ಬೇಗನೆ ಬಂಧಿಸಲಾಗುವುದು. ಗ್ರಾಮಸ್ಥರು ಮಾತ್ರ ಶಾಂತಿ ಕಾಪಾಡಿಕೊಳ್ಳಬೇಕೆಂದು ತಿಳಿಸಿದರು.

ಶ್ವಾನದಳ, ಬೆರಳಚ್ಚುಗಾರರ ತಂಡ ಬೇಟಿ ನೀಡಿದರು.ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮಾಜದ ಪ್ರಧಾನ ಕಾರ್ಯದರ್ಶಿ ಬಸವರಾಜ ಕೋರಿ, ಗ್ರಾಮಸ್ಥರಾದ ಬಸಯ್ಯಸ್ವಾಮಿ ಹಿರೇಮಠ, ಬಸವರಾಜ ಮಾಲಿ ಪಾಟೀಲ, ಚಂದ್ರಕಾಂತ ಕೋರಿ, ಗುರಲಿಂಗಯ್ಯಸ್ವಾಮಿ, ಶರಬಣ್ಣ ಮಾವೂರ,ಮೃತ್ಯುಂಜಯ್ ಹಿರೇಮಠ,ಬಸವರಾಜ ಜಿರಕಲ್,ಪ್ರವೀಣ ಕೋರಿ,ಅಶೋಕ ಸಿರಸಗಿ,ಈರಣ್ಣ ಮಾವೂರ,ಷಣ್ಮುಖಯ್ಯಸ್ವಾಮಿ ಮಠಪತಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here