ಬಸವಣ್ಣನವರ ಭಾವಚಿತ್ರಕ್ಕೆ ಅವಮಾನ ಮಾಡಿದ ಆರೋಪಿ ಬಂಧನ: ಸಿ. ಎಸ್. ಮಾಲಿ ಪಾಟೀಲ್ ಹರ್ಷ

0
377

ಕಲಬುರಗಿ; ಜಿಲ್ಲೆಯ ಚಿತ್ತಾಪೂರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ಮಹಾಮಾನವತವಾದಿ ಜಗಜ್ಯೋತಿ ಅಣ್ಣಬಸವಣ್ಣನವರ ಭಾವಚಿತ್ರಕ್ಕೆ ಮಸಿಬಳೆದು ವಿಕೃತಿ ಮೆರೆದು ವೀರಶೈ ವ ಲಿಂಗಾಯತ ಧರ್ಮಕ್ಕೆ ಅವಮಾನ ಮಾಡಿದ ಯುವಕನನ್ನು ಬಂಧಿಸಿದ ಪೋಲಿಸರು ಜನಮೆಚ್ಚುವಂಥ ಕೆಲಸ ಮಾಡಿದ್ದಾರೆ ಎಂದು ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಸಿ. ಎಸ್. ಮಾಲಿ ಪಾಟೀಲ್ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಘಟನೆ ಮಾಡಿದ ವ್ಯಕ್ತಿಯ ಮನಸ್ಸು ಬಹು ವಿಕೃತಿಯಾಗಿದ್ದು, ಇಂತಹ ನರ ಹಂತಕನನ್ನು‌ ಬಂಧಿಸಿದ ಪೋಲಿಸರು ಈ ಕೆಲಸದಹಿಂದೆ ಯಾರಿದ್ದಾರೆ? ಇದು ಯಾಕಾಗಿ? ಮಾಡಿದ್ದಾನೆ ಎಂಬುದು ಸೂಕ್ತವಾದ ಮಾಹಿತಿಯನ್ನು ಪಡೆದು ಇದರ ಕುರಿತ ತನಿಖೆ ನಡೆಸಿ ತಪ್ಪಿತಸ್ಥ ಜೈಲಿಗೆ ಹಾಕಿ ದಂಡದ ಜೊತೆಗೆ ಜೀವಾವಧಿ ಶಿಕ್ಷೆ ನೀಡಿದಾಗ ಮಾತ್ರ ಮತ್ತೊಮ್ಮೆಸಮಾಜದಲ್ಲಿ ಇಂತಹ ವಿಕೃತ ಮನಸ್ಸುಗಳಿಂದ ಕೋಮುಗಲಭೆಯಾಗದಂತೆ ತಡೆಯಲು ಸಾಧ್ಯವಾಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಈತನ ಹಿಂದೆ ಯಾರಿದ್ದಾರೆ ಯಾವ ಕಾರಣಕ್ಕಾಗಿ ಈ ಕೆಲಸ ಮಾಡಿದ್ದಾನೆ ಎಂಬ ಮಾಹಿತಿ ಕಲೆಹಾಕುವ ಪ್ರಯತ್ನ ಪೋಲಿಸ್ ಅಧಿಕಾರಿಗಳು ನಿರ್ಭಯವಾಗಿ ಮಾಡಲಿ ಯಾವುದೇ ಇಂಥ ದುಷ್ಟರನ್ನು ಸೆದೆ ಬಡಿಯದಿದ್ದಲ್ಲಿ ಮುಂದಿನ ದಿನಮಾನಗಳಲ್ಲಿ ಸಮಾಜದಲ್ಲಿ ಜಾತಿ ಧರ್ಮಗಳ ಹೆಸರಲ್ಲಿ ನಿಂದಿಸುವಂತ ಗಲಭೆಕೋರರು ಹೆಚ್ಚಾಗಬಹುದು ಕಳವಳ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here