ವಿದ್ಯಾವಂತರಾಗಿ, ಬುದ್ದಿವಂತರಾಗಿಆದರೆ ಮೊದಲು ಪ್ರಜ್ಞಾವಂತರಾಗಿ

0
12

ಕಲಬುರಗಿ: ವಿದ್ಯಾರ್ಥಿಗಳು ವಿದ್ಯಾವಂತರಾಗಿ, ಬುದ್ದಿವಂತರಾಗುವುದರೊಂದಿಗೆ ಪ್ರಜ್ಞಾವಂತರಾಗಿ ಬೆಳೆದಾಗ ನಿಮ್ಮ ವ್ಯಕ್ತಿತ್ವ ವಿಕಾಸವಾಗುತ್ತದೆ. ಏಕೆಂದರೆ ನಿಮ್ಮಜೊತೆಗೆ ಸಮಾಜ ಬೆಳೆಯುತ್ತದೆ.ವಿದ್ಯಾರ್ಥಿಗಳು ಮನಸ್ಸನ್ನುತನ್ನ ಹತೋಟಿಯಲ್ಲಿಟ್ಟು ಸಾಧನೆ ಮಾಡಿದಾಗ ಸಮಾಜದ, ಜಗತ್ತಿನ ಆಸ್ತಿಯಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆಎಂದುಕರ್ನಾಟಕರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‍ನಸಂಸ್ಥಾಪಕ ಅಧ್ಯಕ್ಷಡಾ. ಹುಲಿಕಲ್ ನಟರಾಜ್ ಹೇಳಿದರು.

ನಗರದ ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗಾಗಿ ವ್ಯಕ್ತಿತ್ವ ವಿಕಸನಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದಅವರು, ಪ್ರತಿ ವಿದ್ಯಾರ್ಥಿಯಲ್ಲಿಯೂ ಪ್ರತಿಭೆಇರುತ್ತದೆ, ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು.

Contact Your\'s Advertisement; 9902492681

ಜೀವನದಲ್ಲಿ ಪ್ರತಿದಿನವೂ ಅಮೂಲ್ಯವಾದುದು.ಸಮಯ ವ್ಯರ್ಥಮಾಡದೆ ವೇಳಾಪಟ್ಟಿ ಹಾಕಿಕೊಂಡುಅದರಂತೆಕಾರ್ಯ ಪ್ರವೃತ್ತರಾಗಬೇಕು.ಶಿಸ್ತು, ಸಂಯಮ, ಪ್ರಾಮಾಣಿಕತೆ, ನಿರಂತರ ಪ್ರಯತ್ನಇದ್ದಾಗಎತ್ತರಕ್ಕೆ ಬೆಳೆಯಲು ಸಾಧ್ಯವಾಗುತ್ತದೆ. ಬದುಕಿನಲ್ಲಿ ಕಷ್ಟ ಬಂದಾಗ ಹತಾಶರಾಗಬಾರದು, ವೈಜ್ಞಾನಿಕವಾಗಿ ಸತ್ಯವಾದುದನ್ನು ನಂಬಬೇಕು.ಮೌಢ್ಯತೆಯ್ನು ಮೀರಿ ಬೆಳೆಯಬೇಕು.ಸಕಾರಾತ್ಮಕ ಭಾವನೆ ಬೆಳೆಸಿಕೊಳ್ಳಬೇಕು.ನಡೆ-ನುಡಿ, ಗುಣ-ಸ್ವಭಾವ, ಸಂಸ್ಕಾರ-ಸಂಸ್ಕøತಿಯನ್ನು ಮೈಗೂಡಿಸಿಕೊಳ್ಳಬೇಕು.ನಮ್ಮ ಹಣೆಬರಹ ನಮ್ಮಕೈಯಲ್ಲಿದೆಎಂದರು.

ಇಂದಿನ ವಿದ್ಯಾರ್ಥಿಯುವ ಸಮೂಹ ಮೊಬೈಲನ್ನು ಹೆಚ್ಚು ಬಳಸುವುದರಿಂದ ಒಂಟಿತನದಿಂದಖಿನ್ನತೆಗೆ ಒಳಗಾಗುತ್ತಿದ್ದಾರೆ. ಮೌಢ್ಯತೆ, ವಾಮಾಚಾರ, ಮಾಟ-ಮಂತ್ರಗಳನ್ನು ಧಿಕ್ಕರಿಸಬೇಕು.ನೂರಾರುದೇವರನ್ನು ಪೂಜಿಸುವುದಕ್ಕಿಂತಜನ್ಮಕೊಟ್ಟತಂದೆ-ತಾಯಿಗೆಗೌರವ ಬರುವ ಹಾಗೆ ನಡೆದುಕೊಳ್ಳಬೇಕು.ಆದರ್ಶ ಮಕ್ಕಳಾಗಬೇಕು.ಮಕ್ಕಳ ಆದರ್ಶದ ಬದುಕಿಗೆ ಶಿಕ್ಷಕರು, ಪಾಲಕರುಉತ್ತಮ ಮಾರ್ಗದರ್ಶಕರಾಗಿದ್ದಾರೆ. ವಿದ್ಯಾರ್ಥಿಗಳು ಅವರನ್ನುಅನುಕರಿಸಬೇಕು.ವೈಜ್ಞಾನಿಕವಾಗಿ ಬದುಕಬೇಕು.ಶುದ್ಧವಾದ ಗಾಳಿ, ನೀರು, ಆಹಾರವನ್ನು ಪಡೆಯುವಂತಾಗಬೇಕುಎಂದು ತಿಳಿಸಿದರು.

ಸಂಸ್ಥೆಯಅಧ್ಯಕ್ಷರಾದಗೀತಾಚನ್ನಾರಡ್ಡಿ ಪಾಟೀಲ, ದೇವಕಿ ಹುಲಿಕಲ್ ನಟರಾಜ, ಪರಿಷತ್‍ಜಿಲ್ಲಾಧಕ್ಷರವೀಂದ್ರ ಶಾಬಾದಿ, ಪ್ರಧಾನ ಕಾರ್ಯದರ್ಶಿ ಡಾ. ಶಿವರಂಜನ್ ಸತ್ಯಂಪೇಟೆ, ಸತೀಶ ಸಜ್ಜನ್, ಸಂಸ್ಥೆಯ ಮುಖ್ಯ ಶೈಕ್ಷಣಿಕ ನಿರ್ದೇಶಕಅಭಿಷೇಕ್‍ಚನ್ನಾರಡ್ಡಿ ಪಾಟೀಲ, ಎಂ.ಸಿ.ಕಿರೇದಳ್ಳಿ ವಿನುತಾಆರ್.ಬಿ., ಪ್ರಶಾಂತಕುಲಕರ್ಣಿ, ಪ್ರಭುಗೌಡ ಸಿದ್ಧಾರೆಡ್ಡಿ, ಕರುಣೇಶ್ ಹಿರೇಮಠ, ಗುರುರಾಜಕುಲಕರ್ಣಿ, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮೌಢ್ಯತೆ ಮೀರಲು ಸಲಹೆ; ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು.ದೆವ್ವ-ಭೂತ, ಭಾನಾಮತಿ, ವಾಮಾಚಾರವನ್ನು ನಂಬಬಾರದು. ಮೌಢ್ಯತೆಯನ್ನು ಮೀರಿಕಷ್ಟಪಟ್ಟು ಓದಿ ಮುಂದೆ ಬರಬೇಕು.ಆತ್ಮ ವಿಶ್ವಾಸದಿಂದ ಕೆಲಸ ಮಾಡಬೇಕು.ನಮ್ಮ ಶ್ರೇಷ್ಠ ಸಾಧಕರನ್ನುಆದರ್ಶ ವ್ಯಕ್ತಿಗಳಾಗಿಸಿರಿಕೊಂಡು ಕಠಿಣ ಪರಿಶ್ರಮ, ನಿರಂತರ ಪ್ರಯತ್ನ, ಗುರಿ ಮುಟ್ಟುವಛಲವನ್ನು ಹೊಂದಿದ್ದು ಸಾಧನೆ ಮಾಡಬೇಕು.ಇದರಿಂದ ಮಾತ್ರ ಬದುಕು ಬದಲಾಗುತ್ತದೆ.ಬದುಕು ಸುಂದರವಾಗುತ್ತದೆ.ಭವಿಷ್ಯಉಜ್ವಲವಾಗುತ್ತದೆ.ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾರ್ಯಪ್ರವೃತ್ತರಾಗಬೇಕೆಂದುಎಂದು ಸಂಸ್ಥೆಯ ಸಂಸ್ಥಾಪಕÀ ಪ್ರೊ.ಚನ್ನಾರಡ್ಡಿ ಪಾಟೀಲ ಅವರು ಪ್ರಾಸ್ತಾವಿಕವಾಗಿಮಾತಾಡಿಪ್ರೇರೇಪಿಸಿದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here