ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವಿದ್ಯಾರ್ಥಿ ಲಕ್ಷ್ಮಿ ಪುಂಡಲೀಕರಾವ ಅವರು “ಪ್ರೊಬಲಮ್ಸ್ ಅಂಡ್ ಪ್ರಸ್ಪೇಕ್ಟ್ಸ್ ಆಫ್ ವುಮೇನ್ ಇನ್ ಪಂಚಾಯಿತರಾಜ್ ಎ ಸ್ಟಡೀ ಆಫ್ ಹೈದರಾಬಾದ್ ಕರ್ನಾಟಕ ರಿಜಿಯನ್” ಎಂಬ ವಿಷಯದ ಮೇಲೆ ಡಾ. ಜೈ ಕಿಸಾನ್ ಠಾಕೂರ್ ಅವರ ಮಾರ್ಗದರ್ಶನದಲ್ಲಿ ಮಹಾ ಪ್ರಬಂಧವನ್ನು ಮಂಡಿಸಿದ್ದಕ್ಕಾಗಿ ಅವರಿಗೆ ಗುಲ್ಬರ್ಗ ವಿಶ್ವವಿದ್ಯಾಲಯ ಪಿಎಚ್. ಡಿ ಪದವಿ ಪ್ರದಾನ ಮಾಡಿದೆ.
ಲಕ್ಷ್ಮಿ ಪುಂಡಲೀಕರಾವ ಅವರು ಪ್ರಸ್ತುತ ಸೇಡಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮಾಜಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಲಕ್ಷ್ಮಿ ಪುಂಡಲೀಕರಾವ ಅವರಿಗೆ ಡಾಕ್ಟರೇಟ್ ಪದವಿ ಲಭಿಸಿದ್ದಕ್ಕಾಗಿ ಕಾಲೇಜಿನ ಎಲ್ಲಾ ಪ್ರಾಧ್ಯಾಪಕ ವೃಂದ ಹಾಗೂ ಸಿಬ್ಬಂದಿ ವರ್ಗದವರು ಹಾಗೂ ಕುಟುಂಬ ವರ್ಗದವರು, ಸ್ನೇಹಿತರು ಅನೇಕ ಗಣ್ಯರು ಅಭಿನಂದನೆಗಳನ್ನು ತಿಳಿಸಿದ್ದಾರೆ