ಸೇಡಂ, ಅ.20- ಪಟ್ಟಣದ ಐತಿಹಾಸಿಕ ಶ್ರೀ ಪಂಚಲಿಂಗೇಶ್ವರ ದೇವಾಲಯದಲ್ಲಿ ದಸರಾ ಉತ್ಸವ ನಿಮಿತ್ತ ಗುರುವಾರ ಸಂಜೆ ನಾಟಕ ಪ್ರದರ್ಶನ ನಡೆಯಿತು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಸಿದ್ದಾರ್ಥ ಬುದ್ಧನಾದ `ಜಲ’ ನಾಟಕವನ್ನು ಕಲಬುರಗಿಯ ಅಂತರಂಗ ಕಲಾ ತಂಡದವರು ಸೊಗಸಾಗಿ ಅಭಿನಯಿಸಿದರು.
ಕಲಾವಿದ ಹರಿಕೃಷ್ಣ ಅವರು ಪ್ರಾಸ್ತಾವಿಕ ಮಾತನಾಡಿದರು. ನಾಟಕದ ನಿರ್ದೇಶಕಿ ಲಲಿತಾ ಹರಿಕೃಷ್ಣ, ಅಭಿಷೇಕ, ಪ್ರಿಯಾಂಕ ಸೇರಿದಂತೆ ಅನೇಕ ಕಲಾವಿದರು ಹಾಗೂ ಬಾಲ ಕಲಾವಿದರು ಸಹ ನಾಟಕದಲ್ಲಿ ನಟಿಸಿದರು. ಕಲ್ಯಾಣಿ ಭಜಂತ್ರಿ ಅವರು ಸಂಗೀತ ಸಾಥ್ ನೀಡಿದರು.
ರಾಘವೇಂದ್ರ ರೆಡ್ಡಿ ಅಗನೂರ ಕಾರ್ಯಕ್ರಮ ನಿರೂಪಿಸಿದರು. ನಂತರ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.
ಬುಧವಾರ ರಾತ್ರಿ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಪಂಚಾಕ್ಷರ ಮಹಾಸ್ವಾಮಿಗಳು ಸತ್ಸಂಗ ಕುರಿತು ಮಾತನಾಡಿದರು.
ಪೂಜ್ಯ ಶ್ರೀ ಶಿವಶಂಕರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಶ್ರಾವಣಿ ಭರತನಾಟ್ಯ ಶಾಲೆಯ ವತಿಯಿಂದ ವಿಶೇಷವಾದ ನವರಾತ್ರಿ ದುರ್ಗೆ ನೃತ್ಯ ಸೇರಿದಂತೆ ವಿವಿಧ ನೃತ್ಯ ಕಾರ್ಯಕ್ರಮ ಜರುಗಿತು. ಶ್ರಾವಣಿ ಶಾಲೆಯ ಮುಖ್ಯಸ್ಥೆ ಶೃತಿ ಚರಂತಿಮಠ ಸ್ವತಃ ನೃತ್ಯ ಮಾಡಿ ನೋಡುಗರ ಗಮನ ಸೆಳೆದಳು. ನಂತರ ಶೃತಿಯನ್ನು ಸತ್ಕರಿಸಲಾಯಿತು. ಶಿವಶರಣರೆಡ್ಡಿ ಪಾಟೀಲ, ಮಹಿಪಾಲರೆಡ್ಡಿ ಮುನ್ನೂರ್, ಸಂತೋಷ ಕುಲಕರ್ಣಿ, ಶಂಕರ ಬೋಳದ, ನಾಗಭೂಷಣ ಯಲಗಾರ, ಬಸವರಾಜ ಸಕ್ರಿ, ಜನಾರ್ಧನರೆಡ್ಡಿ ತುಳೇರ, ನಾಗಭೂಷಣ ಬೋಳದ ಇತರರಿದ್ದರು.
ಬುಧವಾರ ಸಂಜೆ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಶ್ರಾವಣಿ ಭರತನಾಟ್ಯ ಶಾಲೆಯ ವತಿಯಿಂದ ಭರತನಾಟ ಕಾರ್ಯಕ್ರಮ ನಡೆಯಿತು. ಶ್ರಾವಣಿ ಶಾಲೆಯ ಮುಖ್ಯಸ್ಥೆ ಶೃತಿ ಅವರನ್ನು ಪೂಜ್ಯರಾದ ಶ್ರೀ ಶಿವಶಂಕರ ಶಿವಾಚಾರ್ಯರು ಮತ್ತು ಶ್ರೀ ಪಂಚಾಕ್ಷರ ಮಹಾಸ್ವಾಮಿಗಳು ಸತ್ಕರಿಸಿದರು.