ಕವಿರಾಜಮಾರ್ಗದ ನೆಲವು ಕನ್ನಡ ನಾಡಿನ ಕಿರೀಟ: ಮುಡಬಿ ಗುಂಡೇರಾವ

0
187

ಕಾಳಗಿ: ಕವಿರಾಜಮಾರ್ಗದ ನೆಲವು ಕನ್ನಡ ನಾಡಿಗೆ ಕಿರೀಟವಾಗಿದೆ ಎಂದು ಸಂಶೋಧಕ ಸಾಹಿತಿ ಮುಡುಬಿ ಗುಂಡೇರಾವ ಅಭಿಮತ ವ್ಯಕ್ತಪಡಿಸಿದರು.

ಕಾಳಗಿ ತಾಲೂಕಿನ ಕೋರವಾರ ಜವಾಹರ ನವೋದಯ ವಸತಿ ಶಾಲೆಯಲ್ಲಿ ಕಾಳಗಿ ತಾಲೂಕು ಕಸಾಪ ಹಮ್ಮಿಕೊಂಡ ಕವಿರಾಜಮಾರ್ಗದ ನೆಲ ಸ್ವಾಭಿಮಾನದ ಬೀಡು ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತ ಕನ್ನಡ ನಾಡು ನುಡಿ ಕಟ್ಟಿದವರು ರಾಷ್ಟ್ರಕೂಟರು. ಶ್ರೀವಿಜಯವರು ಕವಿರಾಮಾರ್ಗ ಕೃತಿ ನೀಡುವ ಮೂಲಕ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಕಲೆ, ಸಾಹಿತ್ಯ, ಸಂಸ್ಕøತಿ, ಧರ್ಮ, ಆಧ್ಯಾತ್ಮ ಆಡಳಿತ ಹಿನ್ನೆಲೆಯಲ್ಲಿ ರಾಷ್ಟ್ರಕೂಟರ ಕಾಲ ಸುವರ್ಣ ಯುವಾಗಿತ್ತು. ಮಾನ್ಮಖೇಟ್, ನಾಗಾವಿ, ಕಾಳಗಿ, ದಿಗ್ಗಾವಿ, ಮರತೂರ ಸ್ಥಳಗಳಲ್ಲಿ ಇತಿಹಾಸ ಸಂಶೋಧನೆಯಾಗಲಿ ಮತ್ತು ಕವಿರಾಜಮಾರ್ಗ ನೆಲದ ಕುರಿತು ಶಿಕ್ಷಣದ ಎಲ್ಲಾ ಹಂತದ ಪಠ್ಯಕ್ರಮವಾಗಲಿ ಎಂಬ ಅಭಿಪ್ರಾಯದೊಂದಿಗೆ ಉಪನ್ಯಾಸ ನೀಡಿದರು.

Contact Your\'s Advertisement; 9902492681

ಇಂದಿನ ಮಕ್ಕಳು ನಾಳಿನ ನಾಗರೀಕರು ಎಂಬಂತೆ ಇಂದು ಕಷ್ಟಪಟ್ಟು ಓದಿದರೆ ಮುಂದೊಂದು ದಿನ ಸುಖ ಪಡೆಯಲು ಸಾಧ್ಯ ನಿಮ್ಮ ಶಿಕ್ಷಣಕ್ಕೆ ಸ್ಪಂದಿಸಿದ ಪಾಲಕರಿಗೂ, ಶಿಕ್ಷಕರಿಗೂ, ಕೀರ್ತಿ ತರುವಂತಹ ವಿದ್ಯಾರ್ಥಿಗಳಾಗಬೇಕು ಎಂದು ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ರಾಜೇಶ ಗುತ್ತೇದಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂಗ್ಲಿಷ್ ಭಾಷೆ ಕಲಿಯುವುದಕ್ಕೆ ನಮ್ಮ ವಿರೋಧವಿಲ್ಲ, ಕನ್ನಡ ಭಾಷೆ ಮತ್ತು ಸಂಸ್ಕøತಿ ಮರೆತರೆ ನಮ್ಮನು ನಾವು ಮರೆತಂತೆ ಎಂದು ಜವಾಹರ ನವೋದಯ ವಿದ್ಯಾಲಯದ ಉಗಮ ಮತ್ತು ಸ್ಥಾಪನೆ ಕುರಿತು ರೇವಣಸಿದ್ದಪ್ಪ ದುಕಾನ ಮಾಹಿತಿ ನೀಡುತ್ತ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.

ಕಾಳಗಿ ಕನ್ನಡ ಸಾಹಿತ್ಯ ಪರಿಷತ್ತ ಘಟವು ವಿಭಿನ್ನ ಕಾರ್ಯಕ್ರಮಗಳ ಮೂಲಕ ತುಂಬಾ ಕ್ರಿಯಾಶೀಲ್‍ವಾಗಿದ್ದು, ಇದೆ ರೀತಿ ಶಾಲಾ ಕಾಲೇಜುಗಳಲ್ಲಿ ಪಠ್ಯದ ವಿದ್ಯಾಭ್ಯಾಸದೊಂದಿ ಸಾಹಿತ್ಯ ಮತ್ತು ಸಂಸ್ಕøತಿ ಚಟುವಟಿಕೆಗಳು ತುಂಬಾ ಅಗತ್ಯವಿದ್ದು, ಅಂತಹ ಕಾರ್ಯ ಪರಿಷತ್ತು ನಿರ್ವಹಿಸಿಕೊಂಡು ಬರುತ್ತಿದೆ ಎಂದು ಕಾರ್ಯಕ್ರಮದ ಸಾನಿಧ್ಯವಹಿಸಿ ಸೂಗೂರು ಮಠದ ಡಾ. ಚನ್ನರುದ್ರಮುನಿ ಶಿವಾಚಾರ್ಯರು ಮಾತನಾಡಿದರು.

ವೇದಿಕೆಯ ಮೇಲೆ ವೆ. ಮೂ. ಧನಂಜಯ ಸ್ವಾಮಿಗಳು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ಮಲ್ಲಿನಾಥ ಪಾಟೀಲ ಕಾಳಗಿ, ಬಸವರಾಜ ಕಂಠಿ, ರಾಜೇಂದ್ರ ಬಾಬು, ಜೈಬೀಮ, ಉಪಸ್ಥಿತರಿದ್ದರು. ನವೋದಯ ವಿದ್ಯಾಲಯದ ಪ್ರಾಂಶುಪಾಲರಾದ ಡಿ. ಶ್ರೀನಿವಾಸರಾವ ಅಧ್ಯಕ್ಷತೆ ವಹಿಸಿದರು.

ಜವಾಹರ ನವೋದಯ ವಿದ್ಯಾಲಯದ ಕನ್ನಡ ಶಿಕ್ಷಕರಾದ ಹನುಮೇಶ ಸ್ವಾಗತಿಸಿದರು, ಕಸಾಪ ಕಾಳಗಿ ತಾಲೂಕಾ ಅಧ್ಯಕ್ಷರಾದ ಸಂತೋಷ ಕುಡಳ್ಳಿ ಪ್ರಾಸ್ತಾವಿಕ ಮಾತನಾಡಿದರು. ವಿಶ್ವನಾಥ ತೊಟನಳ್ಳಿ ನಿರುಪಿಸಿದರು.

ಕೊನೆಯಲ್ಲಿ ಶರಣು ಗೌಡನಳ್ಳಿ, ಖ್ಯಾತ ಜ್ಯೂನಿಯರ ವಿಷ್ಣುವರ್ಧನ ವೇಷದಲ್ಲಿ ಸುಧೀರ, ದಿರೇಂದ್ರ ಗೋಪಾಲ, ವಿಷ್ಣುವರ್ಧನ ಅವರಂತಹ ಧ್ವನಿಯ ರೂಪದಲ್ಲಿ ಡೈಲಾಗ್ ಹೊಡೆದು ಮಿಮಿಕ್ರಿ ಮಾಡುವ ಮೂಲಕ ಮಕ್ಕಳಿಗೆ ಹಾಸ್ಸಯ ಕಾರ್ಯಕ್ರಮ ಮಾಡಿಕೊಟ್ಟರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here