ಸಿದ್ದಲಿಂಗ ಸ್ವಾಮಿಗಳ ಮೌನ ಅನುಷ್ಠಾನದ ಮಂಗಳ ಕಾರ್ಯಕ್ರಮ

0
134

ವಾಡಿ:‌ ಕುಂದನೂರ ಗ್ರಾಮದ ಶ್ರೀ ಸಂಗಮನಾಥ ದೇವಸ್ಥಾನದಲ್ಲಿ ರಾವೂರಿನ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ನಾಲ್ಕನೇ ಮೌನ ಅನುಷ್ಠಾನ ಮಂಗಳ ಕಾರ್ಯಕ್ರಮ ಜರುಗಿತು.

ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ರವಿ ಅಲ್ಲಂಶೆಟ್ಟಿ ಮಾತನಾಡುತ್ತಾ ಸಮಸ್ತ ಜೀವ ರಾಶಿಗಳಿಗೆ ಒಳಿತಾಗಲಿ ಎಂಬ ಸಂಕಲ್ಪದೊಂದಿಗೆ ಲೋಕ ಕಲ್ಯಾಣಕ್ಕಾಗಿ ಅನುಷ್ಠಾನ ಕೈಗೊಂಡು ಶ್ರೀಗಳಿಗೆ ನಾವು ಋಣಿಯಾಗಿ,ಸಕಲರಿಗೆ ಲೇಸನ್ನು ಬಯಸುವ ಬದುಕಿಗಿ ನಾಂದಿ ಆಡಿರುವ ಶ್ರೀ ಗಳ ಬದುಕು ನಮಗೆ ದಾರಿದೀಪವಾಗಲಿದೆ ಎಂದರು.

Contact Your\'s Advertisement; 9902492681

ನಂತರ ಶ್ರೀ ಮಠದ ಭಕ್ತ ವೀರಣ್ಣ ಯಾರಿ ಮಾತನಾಡಿ
ಮನುಷ್ಯ ಪ್ರೀತಿ, ವಾತ್ಸಲ್ಯದಿಂದ ಪರರನ್ನು ಗೌರವಿಸಿ ಬದುಕಬೇಕಿದೆ.ಪರೋಪಕಾರ ಮಾಡಿದಾಗ ಪುಣ್ಯ ಪ್ರಾಪ್ತಿಯಾಗುತ್ತದೆ.ಗುರು ಕರುಣೆಯಿಂದ ನಮ್ಮ ಜನ್ಮಕ್ಕೆ ಮುಕ್ತಿ ಸಿಗುತ್ತದೆ ಎಂದು ನಮ್ಮ ಪೂಜ್ಯ ಸಿದ್ದಲಿಂಗ ಸ್ವಾಮಿಗಳಿಂದ ಕೇಳುತ್ತೇವೆ, ಇಂತಹ ಶ್ರೀಗಳು ನಮ್ಮ ಕಲ್ಯಾಣಕ್ಕಾಗಿ ಕೈಗೊಂಡ ಮೌನ ಅನುಷ್ಠಾನ ನಮ್ಮೆಲ್ಲರಿಗೂ ಅನುಗ್ರಹಿಸಲಿದೆ, ಶ್ರೀಗಳ ಆಶೀರ್ವಾದಿಂದ ಸಕಲರ ಬದುಕು ಸುಂದರವಾಗಲಿದೆ ಎಂದರು

ಕಾಗಿಣ – ಭೀಮಾ ನದಿ ಸಂಗಮದ ಸುಕ್ಷೇತ್ರ ಕುಂದನೂರಿನ ಶ್ರೀ ಸಂಗಮೇಶ್ವರ ದೇವಸ್ಥಾನದಲ್ಲಿ ಶ್ರೀ ಸಿದ್ದಲಿಂಗ ಸ್ವಾಮಿಗಳು ಒಂಬತ್ತು ದಿನಗಳ ಹಿಂದೆ ಮೌನ ಅನುಷ್ಠಾನ ಕೈಗೊಂಡಿದ್ದರು. ಪವಿತ್ರ ದಸರಾ ದಿನವಾದ ಇಂದು ಪೂರ್ಣಗೊಳ್ಳತ್ತಲಿದೆ.ಅದ್ದೂರಿಯಾಗಿ ಶ್ರೀ ಗಳನ್ನು ರಾವೂರಿನ ಶ್ರೀ ಮಠಕ್ಕೆ ಮೆರವಣಿಗೆ ಮುಖಾಂತರ ಭಕ್ತರು ಸ್ವಾಗತಿಸುತ್ತಿದ್ದು, ನಂತರ ನಡುವೆ ದಸರಾ ಕಾರ್ಯಕ್ರಮದಲ್ಲಿ ಶ್ರೀಗಳು ಸಾನಿಧ್ಯ ವಹಿಸುವರು ಎಂದು ರಾವೂರಿನ ಸಿದ್ಧಲಿಂಗೇಶ್ವರ ಮಠದ ಕಾರ್ಯದರ್ಶಿ ಗುಂಡಣ್ಣ ಬಾಳಿ ಹೇಳಿದರು.

ಶ್ರೀ ಸಂಗಮನಾಥ ದೇವಸ್ಥಾನದ ಪ್ರಧಾನ ಅರ್ಚಕರಾದ ಮಲ್ಲೇಶಪ್ಪ ಮಹಾರಾಜರು, ರಾವೂರ ಗ್ರಾಮದ ಗುರುನಾಥ ಗುದಗಲ್,ಬಾಬು ಹಳ್ಳಿ,ತಿಪ್ಪಣ್ಣ ವಗ್ಗರ,ಈಶ್ವರ ಪರೀಟ್, ರಾಮು ಕಿಣಗಿ, ಹೊನಗುಂಟಾ ಗ್ರಾಮದ ರುದ್ರಗೌಡ ಪಾಟೀಲ, ಭೀಶಕಂರ ಖೆಣಿ, ಮಹೇಬೂಬ ಪಟೇಲ್, ರವಿ ಅಲ್ಲಂಶೇಟ್ಟಿ ದೇವಿಂದ್ರ ಕಾರೊಳ್ಳಿ, ರಾಯಪ್ಪ ಮೀಣಜಗಿ, ಸಂಗಣ್ಣಾ ಇಜೆರಿ ಚನಪ್ಪ ಹಳ್ಳಿಮೆನಿ,ವಾಡಿ ಪಟ್ಟಣದ ಶರಣಗೌಡ ಚಾಮನೂರ, ಚಂದ್ರಶೇಖರ ಪಾಟೀಲ ಬಣಮಗಿ,ಬಸವರಾಜ ಕಿರಣಗಿ,ವೀರಣ್ಣ ಯಾರಿ, ಮಹಾಲಿಂಗ ಶೆಳ್ಳಗಿ ಸೇರಿದಂತೆ ವಾಡಿ ಹಾಗೂ ಸುತ್ತಮುತ್ತಲಿನ ಗ್ರಾಮದ ಅನೇಕ ಭಕ್ತರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here