ಕಲಬುರಗಿ: ಹೈದ್ರಾಬಾದ ಕರ್ನಾಟಕ ಪ್ರದೇಶದ ಪ್ರಮುಖ ನಗರವಾದ ಕಲಬುರಗಿಯಲ್ಲಿ ಗಣೇ ಚತುರ್ಥಿ ಹಬ್ಬ ಬಂದ್ರೆ ಸಾಕು ನಗರದ ಪ್ರದೇಶದಲ್ಲಿ ಸಡಗರವೋ ಸಡಗರ. ಹಿಂದೆಗಣೇಶನ ವಿಗೃಹವನ್ನುಜೇಡಿಮಣ್ಣಿನಿಂದ ತಯಾರಿಸಿ ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದರು.
ಆದರೆ ಕಾಲಬದಲಾದಂತೆ ವಿನೂತನ ಮತ್ತು ಆಕರ್ಷಣೆಗೋಸ್ಕರ ಪ್ಲಾಸ್ಟರ್‌ಆಫ್ ಪ್ಯಾರಿಸ್ ಹಾಗೂ ರಾಸಾಯನಿಕ ಬಣ್ಣದಿಂದ ವಿಗೃಹಗಳನ್ನು ತಯಾರಿಸುವುದರೊಂದಿಗೆ ನಾವುಗಳು ಜಲ ಮಾಲಿನ್ಯಕ್ಕೆ ಮತ್ತು ಪರಿಸರ ಮಾಲಿನ್ಯಕ್ಕೆ ಸುಗಮವಾದ ಮಾರ್ಗವನ್ನು ಕಲ್ಪಿಸಿಕೊಡುತ್ತಿದ್ದೇವೆ. ಆದರೆ ಅದನ್ನು ತಪ್ಪಿಸಲು ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ, ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಮಹಿಳಾ ಮಹಾವಿದ್ಯಾಲಯ ಕಲಬುರಗಿಯ ರಾಷ್ಟ್ರೀಯ ಸೇವಾ ಯೋಜನೆ ’ಎ’ ಮತ್ತು ’ಬಿ’ ಘಟಕದ ಸ್ವಯಂ ಸೇವಕಿಯರು ಮಹಾವಿದ್ಯಾಲಯದಇತರೆ ವಿದ್ಯಾರ್ಥಿನಿಯರೊಂದಿಗೆ ಜತೆಗೂಡಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ ಶಿಬಿರದಲ್ಲಿ ಪಾಲ್ಗೊಂಡು, ಪರಿಸರ ಸ್ನೇಹಿ ಗಣಪನ ವಿಗೃಹಗಳನ್ನು ತಯಾರಿಸಿ ಮಹಾವಿದ್ಯಾಲಯದ ವಿದ್ಯಾರ್ಥಿನಿಯರಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ತಾವುತಯಾರಿಸುವ ವಿಗೃಹಗಳನ್ನು ಖರೀದಿಸಿ ಪರಿಸರ ಸ್ನೇಹಿ ಗಣೇಶನ ಪ್ರತಿಷ್ಠಾಪಿಸಲು ಕೋರಿದ್ದಲ್ಲದೆ ಪರಿಸರ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ.
ಪೂರ್ವಜರ ಕಾಲದಿಂದಲೂ ಶುದ್ಧಜೇಡಿ ಮಣ್ಣಿನಿಂದಗಣೇಶನ ವಿಗೃಹಗಳನ್ನು ತಯಾರಿಸಿ ಪರಿಸರವನ್ನು ರಕ್ಷಿಸುವ ನಿಟ್ಟಿನಲ್ಲಿ ಪೂಜಿಸುತ್ತಿದ್ದರು. ಆದರೆ ಈಗ ಆಧುನಿಕತೆಗೆ ತಕ್ಕಂತೆ ಕಾಲ ಬದಲಾಗಿ ಬಣ್ಣದ ಮಾಯಾಲೋಕವಾಗಿ ಮಾರ್ಪಟ್ಟಿದೆ. ಇಂತಹ ಲೋಕದಲ್ಲಿ ಆಕರ್ಷಣೆ ಗೋಸ್ಕರ ಮಾರಕ ಪಿಒಪಿ ಮತ್ತು ರಾಸಾಯನಿಕ ಬಣ್ಣಗಳ ಬಳಕೆಗೆ ಪ್ರಾಶಸ್ತ್ಯ ನೀಡಲಾಗುತ್ತಿದೆ. ಇದರಿಂದಾಗಿ ಜಲ ಮಾಲಿನ್ಯ ಮತ್ತು ಪರಿಸರಮಾಲಿನ್ಯವಾಗುತ್ತಿದೆ. ಆದರೆ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ’ಎ’ ಮತ್ತು ’ಬಿ’ ಘಟಕದ ಸ್ವಯಂ ಸೇವಕಿಯರ ತಂಡಪರಿಸರ ಮಾಲಿನ್ಯತಪ್ಪಿಸಲು ಕಂಕಣ ಬದ್ಧವಾಗಿ ನಿಂತಿದೆ.
ಪರಿಸರದ ಬಗ್ಗೆ ಕಾಳಜಿ ಹೊಂದಿದ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಸ್ವಯಂ ಸೇವಕಿಯರು ಮಹಾವಿದ್ಯಾಲಯದ ವಿದ್ಯಾರ್ಥಿನಿಯರಲ್ಲಿ ಮತ್ತು ಮಹಾವಿದ್ಯಾಲಯದ ಸಿಬ್ಬಂದಿಗಳಲ್ಲಿ ಪರಿಸರ ಸ್ನೇಹಿ ಗಣೇಶನ ಬಳಕೆಗಾಗಿ ವಿನೂತನ ಕಾರ್ಯ ಯೋಜನೆಯನ್ನು ರೂಪಿಸಿದ್ದಾರೆ. ಸದಾ ಸಮಾನತೆ ಆದ್ಯತೆಯನ್ನು ನೀಡುವರಾಷ್ಟ್ರೀಯ ಸೇವಾ ಯೋಜನೆ ಘಟಕದ ಸ್ವಯಂಸೇವಕಿಯರು ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಣೆಗೆ ಸುಮಾರು ವರ್ಷಗಳಿಂದಲೂ ಶ್ರಮಿಸುತ್ತಿದ್ದಾರೆ.
ಪರಿಸರ ಪೂರಕ ಗಣೇಶ ಚತುರ್ಥಿ ಆಚರಣೆ ಬಗ್ಗೆ ಕಳೆದ ಕೆಲವು ದಿನಗಳಿಂದ ಮಹಾವಿದ್ಯಾಲಯದ ವಿದ್ಯಾರ್ಥಿನಿಯರಲ್ಲಿ ಹಲವು ಬಗೆಯಜಾಗೃತಿ ಮೂಡಿಸಿದ ಸ್ವಯಂ ಸೇವಕಿಯರು, ಮಹಾವಿದ್ಯಾಲಯದ ವಿದ್ಯಾರ್ಥಿನಿಯರಿಗಾಗಿ ಮತ್ತು ಸಿಬ್ಬಂದಿ ವರ್ಗದವರಿಗಾಗಿ ಜೇಡಿ ಮಣ್ಣಿನ ಗಣಪನ ವಿಗೃಹಗಳನ್ನು ತಯಾರಿಸಿದ್ದಾರೆ. ಈಗಾಗಲೇ ಸುಮಾರು ವಿಗೃಹಗಳನ್ನು ಮನೆಗಳಲ್ಲಿ ಪ್ರತಿಷ್ಠಪಿಸಲು ಅನುವು ಆಗುವಂತೆ ಹಲವು ಸೈಜ್ಗಳಲ್ಲಿ ತಯಾರಿಸಿ ಖರೀದಿಗಾಗಿ ಮಹಾವಿದ್ಯಾಲಯದಲ್ಲಿಇಟ್ಟಿದ್ದಾರೆ.ಸ್ವಯಂ ಲಾಭಕ್ಕೆ ಕಟ್ಟುಬಿಳದೆ ಕಡಿಮೆ ಬೆಲೆಯಲ್ಲಿ ಪರಿಸರ ಸ್ನೇಹಿ ಗಣೇಶನನ್ನುತಲುಪಿಸುವ ಗುರಿ ಹೊಂದಿದ್ದಲ್ಲದೆ ಪರಿಸರ ಸಂರಕ್ಷಣೆಯಜವಾಬ್ದಾರಿಯನ್ನುಹೊತ್ತಿದ್ದಾರೆ.
ಶಿಬಿರದಲ್ಲಿ ಮಹಾವಿದ್ಯಾಲಯದರಾಷ್ಟ್ರೀಯ ಸೇವಾ ಯೋಜನೆ ಘಟಕ ’ಎ’ ಮತ್ತು ’ಬಿ’ ಗಳ ಸ್ವಯಂ ಸೇವಕಿಯರಾದ ಅರುಣಾ, ಪಾಯಲ್ ಶರ್ಮಾ, ಕೀರ್ತಿ, ರೇಣುಕಾ, ವೈಶ್ಣವಿ, ಪವಿತ್ರಾ, ಸ್ಪೂರ್ತಿ, ಸುಪ್ರೀಯಾ ಮುಂತಾದವರೆಲ್ಲರು ಮಹಾದ್ಯಾಲಯದ ಇತರೆ ವಿದ್ಯಾರ್ಥಿನಿಯರೊಂದಿಗೆ ಪರಿಸರ ಸ್ನೇಹಿ ಗಣೇಶನ ವಿಗೃಹಗಳನ್ನು ತಯಾರಿಸುವಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದಾರೆ ಕಾರ್ಯಕ್ರಮಾಧಿಕಾರಿಗಳಾದ ಡಾ.ಪರವೀನ್‌ರಾಜೇಸಾಬ್ ಮತ್ತು ಡಾ. ಮೋಹನರಾಜ ಪತ್ತಾರಅವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.