ನೀರಾವರಿ ಪಂಪ್‍ಸೆಟ್‍ಗಳಿಗೆ 5-6 ಗಂಟೆ ವಿದ್ಯುತ್ ಪೂರೈಕೆ; ಎಂಡಿ ಕರಿಲಿಂಗಣ್ಣವರ್‌

0
18

ಕಲಬುರಗಿ; ಕಲಬುರಗಿ ದಕ್ಷಿಣ ಭಾಗದಲ್ಲಿ ಬರುವ ಅನೇಕ ಹಳ್ಳಿಗಳಲ್ಲಿರುವ ನೀರಾವರಿ ಪಂಪ್‌ಸೆಟ್‌ ಬಳಸುವ ರೈತರು ಸರಿಯಾಗಿ ವಿದ್ಯುಚ್ಚಕ್ತಿ ಪಡೆಯಲಾಗುತ್ತಿಲ್ಲ, ಇದಕ್ಕೆ ಅಲ್ಲಿನ ವಿದ್ಯುತ್‌ ಪರಿವರ್ತಕಗಳ ಕೊರತೆಯೇ ಕಾರಣ. ತಕ್ಷಣ ಹೆಚ್ಚುವರಿ ವಿದ್ಯುತ್‌ ಪರಿವರ್ತಕಗಳನ್ನು (ಟ್ರಾನ್ಸಫಾರ್ಮರ್‌) ಅಳವಡಿಸುವ ಮೂಲಕ ರೈತರನ್ನು ಕಾಡುತ್ತಿರುವ ವಿದ್ಯುತ್ ಕೊರತೆಯ ಸಮಸ್ಯೆ ನೀಗಿಸುವಂತೆ ಆಗ್ರಹಿಸಿ ಕಲಬುರಗಿ ದಕ್ಷಿಣ ಶಾಸಕರಾದ ಅಲ್ಲಂಪ್ರಭು ಪಾಟೀಲ್‌ ನೇತೃತ್ವದಲ್ಲಿ ರೈತರ ನಿಯೋಗ ಬುಧವಾರ ಜೆಸ್ಕಾಂ ವ್ವಸ್ಥಾಪಕ ನಿರ್ದೆಶಕರಾದ ರವೀಂದ್ರ ಕರಿಲಿಂಗಣ್ಣವರ್‌ ಅವರನ್ನು ಭೇಟಿ ಮಾಡಿ ಆಗ್ರಹಿಸಿತು.

ಭೀಮಳ್ಳಿ, ಹಡಗಿಲ್‌, ಪಟ್ಟಣ, ಸಾವಳಗಿ, ಮೇಳಕುಂದಾ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಸರಿಯಾಗಿ ವಿದ್ುಚ್ಚಕ್ತಿ ಪೂರಕೆಯಾಗದೆ ರೈತರು ತೊಂದರೆ ಅನುಭವಿಸುತ್ತಿದ್ದಾರೆಂದು ಶಸಾಕ ಅಲ್ಲಂಪ್ರಭು ಪಾಟೀಲರು ರೈತರು ಎದುರಿಸುತ್ತಿರುವ ಸಮಸ್ಯೆಯನ್ನು ಎಳೆಎಳೆಯಾಗಿ ಎಂಡಿ ರವೀಂದ್ರ ಅವರ ಮುಂದೆ ವಿವರಿಸಿದರು.

Contact Your\'s Advertisement; 9902492681

ಮೊದಲೇ ಮಲೆ ಇಲ್ಲ. ಲಭ್ಯವಿರುವ ನೀರನ್ನು ಬಳಸಿ ಬೆಳೆ ಉಳಿಸಬೇಕಾದರೆ ಕರೆಂಟ್‌ ಕೊರತೆ ಕಾಡುತ್ತಿದೆ. ನೀರಾವರಿ ಪಂಪ್‌ಸೆಟ್‌ ಹೆಚ್ಚಾಗಿದ್ದರಿಂದ ಅಲ್ಲಿರುವ ಟಿಸಿ ಸರಿಯಾಗಿ ಕೆಲಸ ಮಾಡದೆ ಟ್ರಿಪ್‌ ಆಗುತ್ತಿದೆ. ಪದೇ ಪದೇ ಆಗುತ್ತಿರುವ ಈ ಸಮಸ್ಯೆಗೆ ಕಾಯಂ ಪರಿಹಾರ ತಾವು ನೀಡಬೇಕು. ಹೆಚ್ಚುವರಿ ಟೀಸಿ ಅಲ್ಲಿ ಅಳವಡಿಸಿ ರೈತರ ನೆರವಿಗೆ ಬರಬೇಕೆಂದು ಆಗ್ರಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here