ಬೀದಿವ್ಯಾಪಾರಿಗಳ ಸಂಘದಿಂದ ಅದ್ಧೂರಿ ದಸರಾ ಉತ್ಸವ: ಪ್ರಶಸ್ತಿ ಪ್ರದಾನ

0
20

ಕಲಬುರಗಿ: ದ್ವೇಷ ಅಸುಹೆ ವೈಮನಸ್ಸುಗಳನ್ನು ದೂರ ಮಾಡಿ ಎಲ್ಲರೂ ಒಂದಾಗಿ ಬಾಳಲು ದಸರಾ ಹಬ್ಬ ಪ್ರೇರಣೆ ನೀಡುತ್ತದೆ ಕೆಲಕಾರಣದಿಂದ ನಮ್ಮಿಂದ ದೂರವಾದವರನ್ನು ಹತ್ತಿರಕ್ಕೆ ತರಲು ಈ ಹಬ್ಬ ವೇದಿಕೆಯಾಗಿದೆ ಎಂದು ಶಾಸಕ ಅಲ್ಲಮ ಪ್ರಭು ಪಾಟೀಲ ಅವರು ಹೇಳಿಕರು.

ನಗರದ ಅತ್ತರ ಕಂಪೌಂಡ ಗಾಜಿಪುರದಲ್ಲಿ ಅಖಿಲ ಕರ್ನಾಟಕ ರಾಜ್ಯ ಬೀದಿ ವ್ಯಾಪಾರಿಗಳ ಸಂಘ ಅಯೋಜಿಸಿದ್ದ ನಾಡಹಬ್ಬ ದಸರಾ ನವರಾತ್ರಿ ಉತ್ಸವ, ಮಹಾಪ್ರಸಾದ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಎಲೆಮರೆಯ ಕಾಯಿ ಎಂತೆ ಸದ್ದಿಲ್ಲದೇ ಸಮಾಜದ ಸೇವೆಯಲ್ಲಿ ತೊಡಗಿರುವ ಸಾದಕÀರನ್ನು ಗುರುತಿಸಿ ಅವರಿಗೆ ಸಂಘದ ವತಿಯಿಂದ ಪ್ರತಿವರ್ಷ ನೀಡುವ ಪ್ರಶಸ್ತಿ ಅವರ ಸೇವಾಕಾರ್ಯಕ್ಕೆ ಪೆÇ್ರೀತ್ಸಹ ಬೆಂಬಲ ನೀಡುತ್ತಿರುವುದು ತುಂಬ ಸಂತಸದ ವಿಷಯ ಎಂದರು.

Contact Your\'s Advertisement; 9902492681

ಸಂಘದ ಸಂಸ್ಥಾಪಕ ಅಧ್ಯಕ್ಷ ಜಗನ್ನಾಥ ಎಸ್.ಸೂರ್ಯವಂಶಿ ಮಾತನಾಡಿ, ದೇವಿಯ ಆರ್ಶಿವಾದ ಮತ್ತು ತಮ್ಮೆಲ್ಲರ ಪ್ರೀತಿ ವಿಶ್ವಾಸ ಹಾಗೂ ಸಹಕಾರದೊಂದಿಗೆ ಪ್ರತಿವರ್ಷ ದಸರಾ ಉತ್ಸವ ಆಚರಿಸಲಾಗುತ್ತಿದೆ, ಇಲ್ಲಿನ ಸಾದಕರಿಗೆ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿರುವ ತಮ್ಮೆಲ್ಲರಿಗೆ ಆ ದೇವಿ ಕೃಪೆ ಆರ್ಶಿವಾದ ಮತ್ತು ಸಿರಿ ಸಂಪತ್ತು ಮತ್ತು ಆಯುಶ್ಯ ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಮಹಾಪೌರರಾದ ವಿಶಾಲ ಆರ್.ಧರ್ಗಿ ಮಾತನಾಡಿ, ನಮ್ಮೆಲ್ಲರನ್ನು ಒಂದುಗೂಡಿಸುವ ಈ ಉತ್ಸವ ನಮ್ಮಲ್ಲಿ ಐಕ್ಯತೆಯನ್ನು ಮೂಡಿಸುತ್ತದೆ ನಮ್ಮ ಪೂರ್ವಿಕರ ಪರಂಪತೆಯನ್ನು ನಾವೆಲ್ಲರು ಉಳಿಸಿ ಬೆಳೆಸುವ ಕೆಲಸವನ್ನು ಮಾಡಬೇಕಾಗಿದೆ ಎಂದರು.
ಹಿತಿಯ ಪತ್ರಕರ್ತ ಭವಾನಿ ಸಿಂಗ್ ಠಾಕೂರ, ಮುಖಂಡರಾದ ನೀಲಕಂಠರಾವ ಮೂಲಗೆ, ಪಾಲಿಕೆ ವಿರೋಧ ಪಕ್ಷದ ನಾಯಕ ಅಜಂ ಗೋಲಾ, ಅಣ್ಣಾರಾವ ಧುತ್ತರಗಾಂವ, ಸೋಮಶೇಖರ ಗೋನಾಯಕ, ಪಾಲಿಕೆ 3ನೇ ವಲಯದ ಆಯುಕ್ತರಾದ ಮುಜಾಮಿಲ್ ಆಲಂ, ಕೆನರಾ ಬ್ಯಾಂಕ ಅಧಿಕಾರಿ ಸತೀಷ ಚವ್ಹಾಣ, ಶಾಮ ನಾಟಿಕರ್, ನ್ಯಾಯವಾದಿ ಗುರುರಾಜ ತಿಳಗುಳ್, ಸಿಐಡಿ ವಿಭಾಗದ ಡಿಎ???ಪಿ ಶಂಕರಗೌಡ ಪಾಟೀಲ, ನ್ಯಾಯವಾದಿ ಚಂದ್ರಶೇಖರ ಪಾಟೀಲ ಸೇರಿದಂತೆ ಹಲವುಜನ ಗಣ್ಯಮಾನ್ಯರು ಭಾಗವಹಿಸಿದ್ದರು.

ಸೇವಾ ರತ್ನ ಪ್ರಶಸ್ತಿ ಪುರಸ್ಕøತರಾದ ರೈತ ಮುಖಂಡ ದಯಾನಂದ ಪಾಟೀಲ, ಅಣ್ಣಪ್ಪ ಕಂದೇನವರ, ರೇವಣಸಿದ್ದಪ್ಪ ಮಟ್ಟಿ, ಭಾರತಿಬಾಯಿ ಜಿವಣಗಿ, ಶ್ರೀನಿವಾಸ ಕಾಡಾದಿ, ಕರಣಕುಮಾರ ಅಷ್ಟಗಿ, ಪ್ರಭು ಮಡಿವಾಳ ಅವರಿನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕನ್ನಡಪರ ಸಂಘಟನೆಗಳ ಮುಖಂಡರಾದ ದತ್ತು ಎಸ್ ಭಾಸಗಿ, ಮಂಜುನಾಥ ನಾಲವಾರಕರ್, ಮನೊಹರ ಬಿರಾದಾರ, ಗೊಪಾಲ ನಾಟಿಕರ್, ಪದ್ಮರಾಜ ಸೂಯ9ವಂಶಿ, ಮಹೇಶ್ ಸೂಯ9ವಂಶಿ, ರೋಹಿತ ಮಂಗನ್ನುರು, ಶಂಭುಲಿಂಗ, ಅಮರೇಶ, ಬಾಬು ಪರಿಟ, ರಾಘವೇಂದ್ರ ಕುಲಕರ್ಣಿ, ಅಂಬಿಕಾ ನಂದೂರ, ಸವಿತಾ ಜಿಂಗಾಡೆ, ಮಲ್ಲಿಕಾರ್ಜುನ ಸಾರವಾಡ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here