ಸುರಪುರ: ಜನಪದ ಕಲೆಯ ಊಡುಗೆ, ತೊಡುಗೆ, ಭಾಷೆ ಸಂಸ್ಕೃತಿ ಎಲ್ಲವೂ ಮಾನವಿಂii ಸಂಬಂಧದ ಸರಪಳಿ ಇದ್ದಂತೆ ಇಂದಿ ಯುವ ಪೀಳಿಗೆಯವರು ಇದನ್ನು ಅರ್ಥಮಾಡಿಕೊಂಡು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರಿಹೋಗದೆ ನಮ್ಮ ಜಾನಪದ ಕಲೆಯನ್ನು ಊಳಿಸಿ ಬೇಳಸುವಲ್ಲಿ ಕೈಜೋಡಿಸಬೇಕು ಎಂದು ಲಕ್ಷ್ಮೀಪುರದ ಮರಡಿ ಮಲ್ಲಿಕಾರ್ಜುನ ಮಠದ ಶ್ರೀ ಬಸವಲಿಂಗ ದೇವರು ಹೇಳಿದರು.
ತಾಲೂಕಿನ ಬಾದ್ಯಾಪುರ ಗ್ರಾಮದ ಶ್ರೀಗುರು ಶಾಲೆಯ ಆವರಣದಲ್ಲಿ ಮಂಗಳವಾರ ಶ್ರೀಗುರು ಸೇವಾ ಸಂಸ್ಥೆವತಿಯಿಂದ ವಿಶ್ವಜಾನಪದ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಎಲ್ಲಾ ಸಾಹಿತ್ಯ ಪ್ರಕಾರಗಳಿಗೂ ಮೂಲವಾದ ಜಾನಪದ ಸಾಹಿತ್ಯದ ಮಹತ್ವವನ್ನು ನಾವು ಮಕ್ಕಳಿಗೆ ಶಾಲೆಯಿಂದಲೆ ಹೇಳಿಕೊಟ್ಟು ಅವರಿಗೆ ಜಾನಪದದ ಅರುವು ಮೂಡಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ಶ್ರಮ ಸಂಸ್ಕೃತಿ ಮೂಲದಿಂದ ಹುಟ್ಟಿರುವ ಜನಪದ ಕಲೆಗೆ ಇತ್ತೀಚಿಗೆ ಶ್ರೀಗುರುಸೇವಾಸಂಸ್ಥೆ ಮತ್ತು ಇನ್ನಿತರ ಸಂಘ ಸಂಸ್ಥೆಗಳಿಂದಾಗಿ ಇಂದಿನ ಯುವಕರು ಜನಪದ ಕಲೆಯ ಕುರಿತು ಆಸಕ್ತಿ ತೋರುತ್ತಿರುವುದು ಸಂತಸದ ವಿಷಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೃಷ್ಣಾರೆಡ್ಡಿ ಮುದ್ನೂರು, ಸಂಸ್ಥೆಯ ಅಧ್ಯಕ್ಷ ಮಲ್ಲು ಬಾದ್ಯಾಪುರ ದೇವಿಂದ್ರಪ್ಪ ಗೌಡ ವೇದಿಕೆಯಲ್ಲಿದ್ದರು ಶಾಲೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿದ್ದರು.