ವಿವಿಧ ಬೇಡಿಕೆಗೆ ಆಗ್ರಹಿಸಿ ಮುಂದುವರೆದಿದೆ 10 ದಿನಗಳ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ

0
28

ಯಾದಗಿರಿ: ಭೂ ಮಾಪಕರಿಗೆ ತಿಂಗಳಿಗೆ ೩೦ ಕಡತಗಳ ಬದಲು ೧೮ ಕಡಿತಗಳನ್ನು ನಿರ್ವಹಿಸಲು ನಿಗದಿಪಡಿಸಬೇಕು ಎಂಬ ಬೇಡಿಕೆಗಳು ಸೇರಿದಂತೆ ಭೂ ಮಾಪಕರ ವಿವಿಧ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಸಧ್ಯ ಆ.೩೧ರ ವರೆಗೆ ಕಪ್ಪು ಪಟ್ಟಿ ಧರಿಸಿ ನಡೆಸುತ್ತಿರುವ ಮೌನ ಪ್ರತಿಭಟನೆಯನ್ನು ಇನ್ನಷ್ಟು ಉಗ್ರ ರೂಪಕ್ಕೆ ಕೊಂಡೊಯ್ಯಲಾಗುವುದು ಎಂದು ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಕಾರ್ಯನಿರ್ವಾಹಕ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಮಲ್ಲಿನಾಥ ಸ್ವಾಮಿ ಜಿಲ್ಲಾಧ್ಯಕ್ಷ ಪ್ರಶಾಂತ ಹಿರೇಮಠ, ತಾಲೂಕು ಅಧ್ಯಕ್ಷ ಸಂಜೀವಕುಮಾರ ತಿಳಿಸಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ತಿಂಗಳಿಗೆ ಜಮೀನು ಸರ್ವೆ ಮಾಡುವ ೧೮ ಕಡಿತಗಳ ಬದಲಾಗಿ ೩೦ ಕ್ಕೆ ಹೆಚ್ಚಳ ಮಾಡಿರುವುದು ಭೂಮಾಪಕರಿಗೆ ಹೊರೆಯಾಗಿ ಮಾನಸಿಕ ಹಿಂಸೆಗೆ ಕಾರಣವಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಬ್ಬ ಭೂ ಮಾಪಕರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದ್ದರಿಂದ ಈ ಹೊರೆಯನ್ನು ಕಡಿಮೆಗೊಳಿಸುವಂತೆ ರಾಜ್ಯಾದ್ಯಂತ ಭೂಮಾಪಕರ ಸಂಘಟನೆಯ ಆಶ್ರಯದಲ್ಲಿ ಚಳುವಳಿ ರೂಪಿಸಲಾಗಿದೆ.

Contact Your\'s Advertisement; 9902492681

ಈ ಮೊದಲು ಪ್ರತಿ ಭೂಮಾಪಕರಿಗೆ ಒಬ್ಬ ಜವಾನರು ನೋಟೀಸ್ ಜಾರಿಮಾಡಲು ಇರುತ್ತಿದ್ದರು. ಆದರೆ ಇವಾಗ ಯಾರು ಇರುವುದಿಲ್ಲ. ಭೂಮಾಪಕರೇ ಹಳ್ಳಿಗೆ ಹೋಗಿ ನೋಟೀಸ್ ನೀಡುವ ಪರಿಸ್ಥಿತಿ ಇಲಾಖೆಯಲ್ಲಿ ಉಂಟಾಗಿದೆ. ಇಲಾಖೆಯಲ್ಲಿ ತಂತ್ರಾಂಶದ ಮೂಲಕ ಕೆಲಸ ನಿರ್ವಹಿಸಲಾಗುತ್ತಿದ್ದು ಸರ್ವರ್ ಸಮಸ್ಯೆ ವಿಪರೀತ ಇರುತ್ತದೆ ಇದರಿಂದ ಭೂಮಾಪಕರಿಗೆ ಸುಗಮವಾಗಿ ಕೆಲಸ ನಿರ್ವಸಲು ಕಷ್ಟಸಾಧ್ಯ. ಪ್ರಗತಿ ಬರೀ ಅಂಕಿಅಂಶಗಳಲ್ಲಿ ಆಗದೆ ಗುಣಮಟ್ಟದಲ್ಲಿ ಆಗಿ ಇಲಾಖೆಯ ಘನತೆ ಹೆಚ್ಚಿಸಬೇಕಾಗಿದ್ದು ನಮ್ಮೆಲ್ಲರ ಕರ್ತವ್ಯವಾಗಿರುತ್ತದೆ ಈ ನಿಟ್ಟಿನಲ್ಲಿ  ಭೂಮಾಪಕರಿಗೆ ನೀಡಿದ ನಿಗಧಿತ ಗುರಿಯನ್ನು ಕಡಿಮೆಗೊಳಿಸಿ ಹಾಗೂ ತಾಲೂಕು ಮಟ್ಟದಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಹಾಗೂ ಇನ್ನೀತರ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿದರೂ ಇದುವರೆಗೆ ಸರ್ಕಾರ ಯಾವುದೇ ಬೇಡಿಕೆಗಳನ್ನು ಈಡೇರಿಸಿಲ್ಲ.

ಇದಲ್ಲದೇ ನಮ್ಮ ಬೇಡಿಕೆಗಳು ಜನರಿಗೆ ಅನುಕೂಲಕರವಾಗುವಂತಹವಾಗಿದ್ದು ಇದರಲ್ಲಿ ಭೂ ಮಾಪಕರ ವೈಯಕ್ತಿಕ ಹಿತಾಸಕ್ತಿ ತೀರ ಗೌಣವಾಗಿದೆ ಎಂಬುದನ್ನು ಸರ್ಕಾರ ಮನಗಾಣಬೇಕಿದೆ ಎಂದು ಅವರು ತಿಳಿಸಿದ್ದಾರೆ. ಸರ್ಕಾರ ತಕ್ಷಣ ಸ್ಪಂದಿಸದೇ ಇದ್ದಲ್ಲಿ ಮುಷ್ಕರದ ಪೂರ್ವದಲ್ಲಿ ಸರ್ಕಾರದ ಗಮನ ಸೆಳೆಯಲು ಇದೇ ಆಗಸ್ಟ್ ೧೯ರಿಂದ ೩೧-೦೮-೨೦೧೯ ರ ವರೆಗೆ ಕಪ್ಪುಪಟ್ಟಿ ಧರಿಸಿ ಕೆಲಸ ನಿರ್ವಹಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಇಷ್ಟಕ್ಕೂ ಸ್ಪಂದನೆ ಸಿಗದಿದ್ದಲ್ಲಿ ಸೆಪ್ಟೆಂಬರ್ ೪ ರಂದು ರಾಜಧಾನಿ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಮುಷ್ಕರ ನಡೆಸಲಾಗುವುದು ಎಂದು ಕಲ್ಬುರ್ಗಿ ವಿಭಾಗದ ಸಂಘಟನಾ ಕಾರ್ಯದರ್ಶಿಯಾದ ಈಶ್ವರಚಂದ್ರ ವಿದ್ಯಾಸಾಗರ, ಮಲ್ಲಿನಾಥ ರಾಜ್ಯ ಪರಿಷತ್ತು ಸದಸ್ಯರು, ಪ್ರಶಾಂತ ಹಿರೇಮಠ ಸಂಜೀವಕುಮಾರ ಎಚ್ಚರಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here