ಯಾದಗಿರಿ: ಇತ್ತಿಚಿಗೆ ಗುರುಮಠಕಲ್ ತಾಲೂಕಿನ ಎಲ್ಹೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸಂಘದ ಅದ್ಯಕ್ಷ ನಾಗನಾಥರಾವ ತೊಟ್ಲೂರಕರ್ ನೇತ್ರತ್ವದಲ್ಲಿ ೨೫ ಸಾವಿರ ರೂ.ಗಳನ್ನು ನೇರೆ ಸಂತ್ರಸ್ತರಿಗೆ ದೇಣಿಗೆ ನೀಡಲಾಯಿತು.
ನಾಗನಾಥರಾವ ಅವರು ಅವರು ವೈಯಕ್ತಿಕವಾಗಿ ೧೦ ಸಾವಿರ ಮತ್ತು ಸಂಘದ ವತಿಯಿಂದ ೧೫ ಸಾವಿರ ಒಟ್ಟು ೨೫ ಸಾವಿರ ರೂ.ಗಳ ಚೆಕ್ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಮುರಳಿಧರರಾವ ಕುಲಕರ್ಣಿ, ವಕೀಲರಾದ ಹಣಮಂತಪ್ಪ ಎಲ್ಹೇರಿ, ಸಂಘದ ಕಾರ್ಯದರ್ಶಿ ಸುಬಾಸ ಮತ್ತಿತರರು ಇದ್ದರು.