ಪುರಾಣ ವೇದಿಕೆಯಲ್ಲಿ ಉಡಿ ತುಂಬುವ ಕಾರ್ಯಕ್ರಮ

0
226

ಕಲಬುರಗಿ: ಮಹಿಳೆಯರಿಗೆ ಜನ್ಮದತ್ತವಾಗಿ ತಾಳ್ಮೆ ಗುಣಬಂದಿರುತ್ತದೆ. ಅದಕ್ಕಾಗಿ ಅವರನ್ನು ಸಹನಾಮೂರ್ತಿಗಳೆಂದು ಸಮಾಜ ಗುರುತಿಸುತ್ತದೆ. ಪ್ರತಿಯೊಬ್ಬ ಹೆಣ್ಣು ಮಗಳಿಗೆ ಉಡಿ ತುಂಬುವುದರಿಂದ ಅವರಲ್ಲಿ ತಾಯಿತನಕ್ಕೆ ಗೌರವ ಸಿಕ್ಕಂತ್ತಾಗುತ್ತದೆ ಎಂದು ಗೋಳಾ (ಬಿ) ಪೂಜ್ಯ ಶ್ರೀ ಚನ್ನಮಲ್ಲ ಸ್ವಾಮಿಗಳು ಆರ್ಶೀವಚನ ನೀಡಿದರು.

ಸೇಡಂ ರಸ್ತೆಯ ಬಸವೇಶ್ವರ ಆಸ್ಪತ್ರೆ ಎದುರುಗಡೆಯಲ್ಲಿರುವ ವಿದ್ಯಾನಗರ ಕಾಲೋನಿಯ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವಿದ್ಯಾನಗರ ವೆಲ್‌ಫೇರ್ ಸೊಸೈಟಿ ವತಿಯಿಂದ ಹಮ್ಮಿಕೊಂಡ ಗರಗದ ಮಡಿವಾಳೇಶ್ವರ ಪುರಾಣ ಕಾರ್ಯಕ್ರಮದಲ್ಲಿ ತಾಯಂದಿರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಸಿಕೊಟ್ಟ ಪೂಜ್ಯ ಶ್ರೀಗಳು ಆರ್ಶೀವಚನ ಮಾಡಿದರು.

Contact Your\'s Advertisement; 9902492681

ಉಡಿ ತುಂಬುವ ಕಾರ್ಯಕ್ರಮದಲ್ಲಿ ಸುಮಾರು ೩೨೫ ಕ್ಕಿಂತ ಹೆಚ್ಚು ತಾಯಂದಿರಿಗೆ ಉಡಿ ತುಂಬಿ ಗೌರವಿಸಲಾಯಿತು. ಉಡಿ ತುಂಬುವ ಕಾರ್ಯಕ್ರಮದ ಪ್ರಾಯೋಜಕರಾದ ಡಾ. ಸಂತೋಷ ಪಾಟೀಲ ದಂಪತಿಗಳು ಪಾದಪೂಜೆ ನಡೆಸಿಕೊಟ್ಟರು. ಶಿವಶರಣೆ ಅಕ್ಕಮಹಾದೇವಿ ಮಹಿಳಾ ಟ್ರಸ್ಟ್ ಸದಸ್ಯರು ಉಡಿ ತುಂಬುವ ಕಾರ್ಯ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ವಿವಿದ ಸುತ್ತ-ಮುತ್ತಲಿನ ಅಂದರೆ ಪ್ರಗತಿ ಕಾಲೋನಿ, ಗುಬ್ಬಿ ಕಾಲೋನಿ, ಬಡೇಪೂರ ಕಾಲೋನಿ, ಆದರ್ಶ ನಗರ, ಜಯನಗರ, ಎಂ.ಬಿ.ನಗರ ಹೀಗೆ ಸುಮಾರು ೫೦೦ ಕ್ಕಿಂತಲೂ ಹೆಚ್ಚಿನ ಭಕ್ತಾಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಭಕ್ತಾಧಿಗಳು ಸ್ವ-ಖುಷಿಯಿಂದ ತಂದಿರುವಂತಹ ಮಾಲ್ದಿ ಎಲ್ಲಾ ಭಕ್ತಾಧಿಕಾರಿಗಳಿಗೆ ಪ್ರಸಾದ ರೂಪದಲ್ಲಿ ಹಂಚಲಾಯಿತ್ತೆಂದು ಸೊಸೈಟಿಯ ಕಾರ್ಯದರ್ಶಿ ಶಿವರಾಜ ಅಂಡಗಿ ತಿಳಿಸಿದ್ದಾರೆ.

ಕಲಾವಿದರಾದ ಜಗದೀಶ ನಗನೂರ, ಜಗದೀಶ ಕಲ್ಲೂರ ಸಂಗೀತ ಸೇವೆ ನೀಡಿದರು. ಸೊಸೈಟಿಯ ಅಧ್ಯಕ್ಷರಾದ ಶ್ರೀ ಮಲ್ಲಿನಾಥ ದೇಶಮುಖ, ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ ಹಾಗೂ ಹಿರಿಯರಾದ ಶ್ರೀ ಅಣವೀರಪ್ಪಾ ಮುಗಳಿ, ಬಸವಂತರಾವ ಜಾಬಶೆಟ್ಟಿ, ಸುಭಾಷ ಮಂಠಾಳೆ, ಮಲ್ಲಿಕಾರ್ಜುನ ನಾಗಶೆಟ್ಟಿ, ನಾಗರಾಜ ಹೆಬ್ಬಾಳ, ಮಹಾದೇವಪ್ಪಾ ಪಾಟೀಲ, ನೀಲಪ್ಪಾ ಧೋತ್ರೆ, ಶಿವಪುತ್ರಪ್ಪಾ ದಂಡೋತಿ, ಶಾಂತಯ್ಯ ಬಿದಿಮನಿ, ವಿನೋದಕುಮಾರ ಜನೆವರಿ, ಡಾ. ಸಂತೋಷ ಪಾಟೀಲ, ಅನಿಲ ನಾಗೂರ, ಸಂತೋಷ ನಿಂಬೂರ, ಅಮೀತ ಸಿಕೇದ, ಶ್ರೀವತ ಸಂಗೋಳಗಿ ಹಾಗೂ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here