ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ 68 ನೇ ಕನ್ನಡ ರಾಜ್ಯೋತ್ಸವ

0
37

ಕಲಬುರಗಿ; ಕೇಂದ್ರ ಕಾರಾಗೃಹದಲ್ಲಿ 68 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅಯೋಜಿಸಲಾಯಿತು.ಕಛೇರಿಯ ಸಹಾಯಕ ಆಡಳಿತಾಧಿಕಾರಿಯಾದ ಭೀಮಾಶಂಕರ ಡಾಂಗೆರವರು ಮಾತನಾಡುತ್ತಾ, ಕನ್ನಡದ ಕಂಪನ್ನು ಮನೆ ಮನೆಗಳಲ್ಲಿ ಪಸರಿಸಿ ಬೆಳೆಯುವ ಮಕ್ಕಳಲ್ಲಿ ಮಾತೃ ನುಡಿಯ ಹಿರಿಮೆ ಹಾಗೂ ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ  ಕಲ್ಪವೃಕ್ಷವಾಗುತ್ತದೆ ಎನ್ನುವುದರ ಮೂಲಕ ಕನ್ನಡದ ಕಂಪನ್ನು ಎಲ್ಲಾ ಕಡೆ ಹರಡಿಸಬೇಕೆಂದು ಕರೆ ನೀಡಿದರು.

ಈ ಸಂಸ್ಥೆಯ ಅಧೀಕ್ಷಕರಾಗಿ ಆಗಮಿಸಿದ ಬಿ.ಎಂ. ಕೊಟ್ರೇಶ್ ರವರು ಕರ್ನಾಟಕವೆಂದು 50 ವರ್ಷ ನಾಮಕರಣಗೊಂಡ ಪ್ರಯುಕ್ತ ಕಾರಾಗೃಹದ ಎಲ್ಲಾ ಅಧಿಕಾರಿ/ಸಿಬ್ಬಂದಿಗಳಿಗೆ ಕನ್ನಡ ರಾಜ್ಯೋತ್ಸವ ಶುಭಾಶಯಗಳನ್ನು ತಿಳಿಸಿ ಮಾತನಾಡುತ್ತಾ, ಜೇನಿನ ಹನಿಯಷ್ಟು ಸಿಹಿ ಕೋಗಿಲೆಯ ದನಿಯಷ್ಟು ಸವಿಯಾದ ನಮ್ಮ ಕನ್ನಡ ನುಡಿ ಇದು ಎಲ್ಲರ ನುಡಿಯಾಗಿದೆ. ನುಡಿದರೆ ಮುತ್ತಿನ ಹಾರದಂತೆ ಇರುಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು ಎಂದು ತಮ್ಮ ಮಾತಿನಲ್ಲಿ ಕನ್ನಡದ ಸವಿಯನ್ನು ಕೊಂಡಾಡಿದರು.

Contact Your\'s Advertisement; 9902492681

ಈ ಸಂಸ್ಥೆಯ ಮುಖ್ಯಸ್ಥರಾದ ಡಾ.ಪಿ. ರಂಗನಾಥ್, ಮುಖ್ಯ ಅಧೀಕ್ಷಕರು, ಕೇಂದ್ರ ಕಾರಾಗೃಹ ಇವರು ದ್ವಜಾರೋಹಣ ಹಾಗೂ ತಾಯಿ ಭುವನೇಶ್ವರಿಗೆ ಪುಷ್ಪಚರಣೆ ಮಾಡಿ “ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ”ಎಂಬ ಘೋಷಣೆಯೊಂದಿಗೆ ಮಾತನಾಡುತ್ತಾ, “ಕನ್ನಡವೇ ನಮ್ಮ ಉಸಿರು, ಕನ್ನಡವೇ ನಮ್ಮ ಹಸಿರು”ಕನ್ನಡವು ಭಾಂದವ್ಯದ ಬೆಸುಗೆಯಾಗಿ, ಸಂಸ್ಕøತಿಯ ಸೊಗಡಾಗಿ ಕಸ್ತೂರಿಯ ಕಂಪಾಗಿ ಎಲ್ಲರು ಕಾರಾಗೃಹದಲ್ಲಿರುವ ಇತರೇ ಭಾಷೆ ಮಾತನಾಡುವವರನ್ನು ಕನ್ನಡವನ್ನು ಕಲಿಸಿ ಅವರು ಕನ್ನಡವನ್ನು ಬಳಸಿ ಕನ್ನಡವನ್ನು ಉಳಿಸಿ ಬೆಳಸಬೇಕೆಂದು ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಸಹಾಯಕ ಅಧೀಕ್ಷಕರಾದ  ಹುಸೇನಿ ಪೀರ್, ಕೇಂದ್ರ ಕಾರಾಗೃಹ ಕಲಬುರಗಿ, ಕಛೇರಿ ಅಧೀಕ್ಷಕರಾದ ಗುರುಶೇಶ್ವರ ಶಾಸ್ತ್ರಿ, ಕೇಂದ್ರ ಕಾರಾಗೃಹ ಕಲಬುರಗಿ, ಸಂಸ್ಥೆಯ ಜೈಲರ್‍ಗಳಾದ ಮತಿ ಸೈನಾಜ್, ಎಂ ನಿಗೇವಾನ್,  ಸಾಗರ ಪಾಟೀಲ್, ಪರಮಾನಂದ ಹರವಾಳ, ಎಲ್ಲಾ ಸಹಾಯಕ ಜೈಲರ್ ವೃಂದದವರು ಹಾಗೂ ಕಾರಾಗೃಹದ ಲಿಪಿಕ/ಕಾರ್ಯನಿರ್ವಾಹಕ ಅಧಿಕಾರಿ/ಸಿಬ್ಬಂದಿಗಳು ಭಾಗವಹಿಸಿದರು.

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸರ್ಕಾರ ಸೂಚಿಸಿರುವ 05 ಗೀತೆಗಳನ್ನು ಕಾರಾಗೃಹದ ಎಲ್ಲಾ ಅಧಿಕಾರಿ/ಸಿಬ್ಬಂದಿಗಳು ಮತ್ತು ಬಂದಿಗಳೊಂದಿಗೆ ಹಾಡಲಾಯಿತು. ಕನ್ನಡ ಮಾತೆಯಾದ ಭುವನೇಶ್ವರಿಗೆ ಜೈಕಾರ ಹಾಕುವುದರೊಂದಿಗೆ ಅತೀ ವಿಜೃಂಭಣೆಯೊಂದಿಗೆ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಈ ಸಂಸ್ಥೆಯ ಶಿಕ್ಷಕರಾದ  ನಾಗಾರಾಜ ಮುಲಗೆ ನೇರವೆರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here