ಸಂವಿಧಾನ ಜಾಗೃತಿ ಜಾಥಾ,ಮುಂದುವರೆದ ಸ್ಥಬ್ದಚಿತ್ರ ಸಂಚಾರ

0
20

ಕಲಬುರಗಿ: ಸಂವಿಧಾನ ಜಾರಿಗೆ ಬಂದು 75 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಂವಿಧಾನದ ಆಶಯಗಳಾದ ಸಮಾನತೆ, ಸಹಬಾಳ್ವೆ ಹಾಗೂ ಭಾತೃತ್ವ ಭಾವನೆಯನ್ನು ಜಿಲ್ಲಯ ಜನತೆಯಲ್ಲಿ ಮೂಡಿಸಲು ಹೊರಟಿರುವ ಸಂವಿಧಾನ ಜಾಗೃತಿ ಜಾಥಾವು 19ನೇ ದಿನಕ್ಕೆ ಕಾಲಿಟಿದ್ದು, ಸ್ತಬ್ದಚಿತ್ರದ ಗ್ರಾಮ-ನಗರ ಪಯಣ ಮುಂದುವರೆದಿದೆ.

ಬುಧವಾರ ಅಫಜಲಪೂರ ತಾಲೂಕಿನ ಭಾಗ್ಯವಂತಿ ದೇವಿಯ ಸುಕ್ಷೇತ್ರ ಘತ್ತರಗಾದಿಂದ ಜಾಗೃತಿ ಜಾಥಾ ಅರಂಭವಾಯಿತು. ಗ್ರಾಮಸ್ಥರು ಜಾಥಾಕ್ಕೆ‌ ಸಂಭ್ರಮದ ಸ್ವಾಗತ ಕೋರಿದರು. ನಂತರ ಕಲ್ಲೂರ, ಆನೂರ, ಮಲ್ಲಾಬಾದ ಹಾಗೂ ಕೊನೆಯದಾಗಿ ಅತನೂರ ಗ್ರಾಮಗಳಲ್ಲಿ ಜಾಗೃತಿ ಜಾಥಾ ಸಂಚರಿಸಿತು.

Contact Your\'s Advertisement; 9902492681

ಮಲ್ಲಬಾದನಲ್ಲಿ ಮಹಾನಾಯಕನಿಗೆ ಜೈಕಾರ: ಮಲ್ಲಾಬಾದ ಗ್ರಾಮಕ್ಕೆ ಜಾಗೃತಿ ಜಾಥಾ ಆಗಮಿಸುತ್ತಿದ್ದಂತೆ ಸ್ಥಬ್ದಚಿತ್ರ ವಾಹನದ ಮೇಲೆ ಪುಷ್ಪ ವೃಷ್ಟಿ ಸುರಿಸುವ ಮೂಲಕ ಭವ್ಯ ಸ್ವಾಗತ ಕೋರಲಾಯಿತು.

ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಶಾಲಾ ಮಕ್ಕಳು ವೆಲ್ ಕಮ್ ನಾಮಫಲಕ ಹಿಡಿದು ಸ್ವಾಗತಿಸಿದ್ದು ವಿಶೇಷವಾಗಿತ್ತು. ರಾಷ್ಟ್ರ ನಾಯಕರ ವೇಷಧೆಇಸಿದ ಮಕ್ಕಳ “ನಮ್ಮ‌ ಸಂವಿಧಾನ ನಮ್ಮ‌ ಹೆಮ್ಮೆ”, ” ಸಂವಿಧಾನ ರಕ್ಷಣೆ ನಮ್ಮೆಲ್ಲರ ಹೊಣೆ” ಎಂಬಿತ್ಯಾದಿ ಸಂವಿಧಾನ ಕುರಿತು ಭಿತ್ತಿಪತ್ರ ಹಿಡಿದು ಜಾಗೃತಿ ಮೂಡಿಸಿದರು. ಯುವಕರು ಮಹಾನಾಯಕ ನೀನು ಭೀಮರಾವ ಗೀತೆಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಅತ್ತ ಚಿಂಚೋಳಿ ತಾಲ್ಲೂಕಿನ ಸಲಗರ, ಬಸಂತಪುರ, ಐನಾಪುರ, ಗಡಿಲಿಂಗದಳ್ಳಿ, ಚಂದನಕೇರಾ ಗ್ರಾಮಗಳಲ್ಲಿ ಜಾಗೃತಿ ಜಾಥಾಕ್ಕೆ ಅದ್ಧೂರಿ ಸ್ವಾಗತ ದೊರೆಯಿತು. ಶಾಲಾ ವಿದ್ಯಾರ್ಥಿಗಳಿಂದ ಲೇಜಿಮ್ ನೃತ್ಯ, ಬಲೂನ್ ಹಾರಾಟ, ಮಾನವ ಸರಪಳಿ ನಿರ್ಮಾಣ ಸೇರಿದಂತೆ ಅನೇಕ ಕಲೆಗಳ ಪ್ರದರ್ಶನ ಪ್ರದರ್ಶನ ನಡೆಯಿತು.

ಸಮಾಜ ಕಲ್ಯಾಣ ಇಲಾಖೆಯ ಸಹಾಯ ನಿರ್ದೇಶಕ ಪ್ರಭುಲಿಂಗ ವಾಲಿ, ಸಿ‌.ಡಿ.ಪಿ.ಓ ಗುರುಪ್ರಸಾದ ಕವಿತಾಳ, ಪಿಡಿಓ ರೇವಣಸಿದ್ದಯ್ಯ ಸ್ವಾಮಿ, ಸರಸ್ವತಿ ಬಾಯಿ ನಾರಾಯಣ, ಸರೋಜಾ ಶಶಿಕಾಂತ, ಭೀಮಾಶಂಕರ, ಗೋವಿಂದರೆಡ್ಡಿ, ಅನ್ವರ ಅಲಿ, ತಿಪ್ಪಣ್ಣ ವಾಲಿ, ಸಂಜುಕುಮಾರ ಡೊಂಗರಗಿ ಮೊದಲಾದವರು ಪಾಲ್ಗೊಂಡಿದ್ದರು. ಬಸವಂತರೆಡ್ಡಿ ವಿಶೇಷ ಉಪನ್ಯಾಸ ನೀಡಿದರು.

ಐನಾಪುರದಲ್ಲಿ 1ನೇ ತರಗತಿ ವಿದ್ಯಾರ್ಥಿನಿ ಶಿವಲೀಲಾ ಸಂವಿಧಾನದ ಪ್ರಸ್ತಾವನೆಯನ್ನು ಓದಿ ಮೆಚ್ಚುಗೆ ಗಳಿಸಿದಳು.

ಜನಸ್ಪಂದನದಲ್ಲಿಯೂ ಜನಜಾಗೃತಿ: ಇನ್ನು ಚಿತ್ತಾಪುರ ತಾಲೂಕಿನ ಲಾಡ್ಲಾಪುರದಲ್ಲಿ ಬುಧವಾರ ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಅವರು ಜನಸ್ಪಂದನಾ ಸಬೆ ನಡೆಸಿ ಸಾರ್ವಜನಿಕರ ಸಮಸ್ಯೆ ಆಲಿಸಿದರು. ಕೆಲ‌ ಸಮಸ್ಯೆಗಳಿಗೆ ಸ್ಥಳದಲ್ಲಿಯೆ ಪರಿಹಾರ ಸೂಚಿಸಿದರು.

ಇದೇ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಸಂವಿಧಾನ ಪ್ರಸ್ತಾವನೆ ಬೋಧಿಸಿದರು. ತಾಲೂಕ ಪಂಚಾಯತ್ ಇ.ಓ. ನೀಲಗಂಗಾ ಬಬಲಾದ್ ಸಾತ್ ನೀಡಿದರು‌.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here