ಕನ್ನಡ ಧ್ವಜಾಸ್ತಂಬ ತೆರವುಗೊಳಿಸಿದ ಆರೋಪ:ಕನ್ನಡಪರ ಸಂಘಟನೆಗಳ ರಸ್ತೆ ತಡೆ

0
10

ಸುರಪುರ: ನಗರದರ ರಂಗಂಪೇಟೆಯ ದೊಡ್ಡ ಬಜಾರದಲ್ಲಿ ನೂತನವಾಗಿ ಹಾಕಲಾಗಿದ್ದ ಕನ್ನಡ ಧ್ವಜಾಸ್ತಂಬವನ್ನು ತಹಸೀಲ್ದಾರರು ಹಾಗೂ ನಗರಸಭೆ ಅಧಿಕಾರಿಗಳು ತೆರವುಗೊಳಿಸುವ ಮೂಲಕ ಕನ್ನಡ ವಿರೋಧಿ ಕಾರ್ಯ ಮಾಡಿದ್ದಾರೆ ಎಂದು ಆರೋಪಿಸಿ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಕಾರ್ಯಕರ್ತರು ನಗರದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತದಲ್ಲಿ ಬೀದರ ಬೆಂಗಳೂರು ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ,ಕನ್ನಡ ರಾಜ್ಯೋತ್ಸವ ದಿನ ಕನ್ನಡ ಧ್ವಜಾಸ್ತಂಬ ತೆರವುಗೊಳಿಸುವ ಮೂಲಕ ನಾಡದ್ರೋಹದ ಕೆಲಸ ಮಾಡಲಾಗಿದೆ,ಧ್ವಜಾಸ್ತಂಬ ಹಾಕಿದಲ್ಲಿ ಯಾವುದೇ ಜನರ ವಿರೋಧವಿಲ್ಲ,ಯಾರಿಗೂ ತೊಂದರೆಯೂ ಆಗದಂತೆ ಹಾಕಲಾಗಿದೆ,ಆದರೂ ಅಧಿಕಾರಿಗಳು ಧ್ವಜಾಸ್ತಂಬವನ್ನು ತೆರವುಗೊಳಿಸಿದ್ದಾರೆ,ಇಡೀ ನಗರದಲ್ಲಿ ಇರುವ ಎಲ್ಲಾ ಧ್ವಜಾಸ್ತಂಬ ನಾಮಫಲಕಗಳಿಗೆ ಪರವಾನಿಗೆ ಕೊಟ್ಟಿರುವುದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕು,ಇಲ್ಲವಾದಲ್ಲಿ ಎಲ್ಲ ಸಂಘಟನೆಗಳು ಇನ್ನಷ್ಟು ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

Contact Your\'s Advertisement; 9902492681

ರಸ್ತೆಯಲ್ಲಿ ಟೈರಗೆ ಬೆಂಕಿ ಹಚ್ಚಿ ಒಂದು ಗಂಟೆಗೂ ಹೆಚ್ಚುಕಾಲ ರಸ್ತೆ ಬಂದ್ ಮಾಡಿದ್ದರಿಂದ ಕಿಲೋ ಮೀಟರ್‍ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತು ವಾಹನ ಸವಾರರು ಪರದಾಡುವಂತಾಯಿತು.ನಂತರ ಸ್ಥಳಕ್ಕೆ ಸುರಪುರ ಠಾಣೆ ಪೊಲೀಸ್ ಇನ್ಸ್ಪೇಕ್ಟರ್ ಆನಂದ ವಾಘಮೊಡೆ ಆಗಮಿಸಿ ಧ್ವಜಾಸ್ತಂಬದ ಸ್ಥಳಕ್ಕೆ ಹೋಗೊಣ ಅಲ್ಲಿಗೆ ಅಧಿಕಾರಿಗಳನ್ನು ಕರೆಯಿಸೋಣ ಎಂದು ಸಮಾಧಾನ ಪಡಿಸಿ ಕರೆದುಕೊಂಡ ಹೋದ ನಂತರ ಪ್ರತಿಭಟನೆ ನಿಲ್ಲಿಸಲಾಯಿತು.

ನಂತರ ರಂಗಂಪೇಟೆಯ ದೊಡ್ಡ ಬಜಾರದಲ್ಲಿ ಆಗಮಿಸಿ ಧ್ವಜಾಸ್ತಂಬ ಹಾಕಲು ಅವಕಾಶ ಮಾಡಿಕೊಡುವಂತೆ ಪಟ್ಟು ಹಿಡಿದರು,ನಂತರ ಸ್ಥಳಕ್ಕೆ ಡಿವೈಎಸ್ಪಿ ಜಾವಿದ್ ಇನಾಂದಾರ್ ಆಗಮಿಸಿ ತಾವು ಅಧಿಕಾರಿಗಳಿಂದ ಪರವಾನಿಗೆ ಪಡೆದುಕೊಂಡು ಧ್ವಜಾಸ್ತಂಬ ಹಾಕುವಂತೆ ತಿಳಿಸಿದರು,ನಂತರ ಎಲ್ಲಾ ಪ್ರತಿಭಟನಾಕಾರರು ನಾಳೆ ನಗರಸಭೆಯಿಂದ ಪರವಾನಿಗೆ ಪಡೆಯೋಣ ಕೊಡದಿದ್ದಲ್ಲಿ ಎಲ್ಲಾ ಧ್ವಜಾಸ್ತಂಬ ಮತ್ತು ನಾಮಫಲಕಗಳಿಗೆ ಪರವಾನಿಗೆ ಕೊಟ್ಟಿರುವುದರ ಮಾಹಿತಿ ಕೇಳಿ ಪ್ರತಿಭಟನೆ ನಡೆಸೋಣ ಎಂದು ತಿಳಿಸಿ ತೆರಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮಡ್ಡಿ,ಕರವೇ ಪ್ರವೀಣಶೆಟ್ಟಿ ಬಣದ ಅಧ್ಯಕ್ಷ ನಿಂಗಪ್ಪ ನಾಯಕ ಬಿಜಾಸಪುರ,ಜಯಕರ್ನಾಟಕ ಅಧ್ಯಕ್ಷ ಯಲ್ಲಪ್ಪ ನಾಯಕ,ಜಯ ಕರ್ನಾಟಕ ರಕ್ಷಣಾ ಸೇನೆ ಅಧ್ಯಕ್ಷ ಮಲ್ಲಪ್ಪ ನಾಯಕ ಕಬಾಅಡಗೇರ,ಕನ್ನಡ ಸೇನೆ ಕರ್ನಾಟಕ ಅಧ್ಯಕ್ಷ ಮಲ್ಲು ಹೊಸಮನಿ,ಕರುನಾಡ ವಿಜಯ ಸೇನೆ ಜಿಲ್ಲಾಧ್ಯಕ್ಷ ದೇವಿಂದ್ರ ಸಾಹುಕಾರ ಮುದನೂರ,ತಾಲೂಕು ಅಧ್ಯಕ್ಷ ಮಲ್ಲು ವಿಷ್ಣು ಸೇನಾ,ನಮ್ಮ ಕರ್ನಾಟಕ ಸೇನೆ ಅಧ್ಯಕ್ಷ ವೆಂಕಟೇಶ ಪ್ಯಾಪ್ಲಿ ಸೇರಿದಂತೆ ಭಾಗನಾಥ ಗುತ್ತೇದಾರ,ಸಚಿನಕುಮಾರ ನಾಯಕ,ಶರಣು ಬೈರಿಮಡ್ಡಿ,ಚಂದ್ರಶೇಖರ ನಾಯಕ,ಆನಂದ ಮಾಚಗುಂಡಾಳ,ಅಯ್ಯಪ್ಪ ವಗ್ಗಾಲಿ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here