ಅನನ್ಯ ಪದವಿ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯೋತ್ಸವ 

0
15

ಕಲಬುರಗಿ; ನಗರದ ಹಂಶಿಕಾ ಎಜ್ಯುಕೇಷನಲ್ ವೇಲಫೇರ ಟ್ರಸ್ಟ್ (ರಿ) ಅಡಿಯಲ್ಲಿ ನಡೆಯುತ್ತಿರುವ ಅನನ್ಯ ಪದವಿ ಮತ್ತು ಎಂ.ಎಸ್.ಡಬ್ಲೂ. ಸ್ನಾತಕೋತ್ತರ ಮಹಾವಿದ್ಯಾಲಯ ಕಾಲೇಜಿನಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಕಾಲೇಜಿನ ಅಧ್ಯಕ್ಷರಾದ ಸುಷ್ಮಾವತಿ ಎಸ್. ಹೊನ್ನಗಜ್ಜಿ ಅವರ ದ್ವಜಾರೋಹಣ ಮತ್ತು ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಕನ್ನಡದ ಮಹತ್ವ ಕನ್ನಡದ ಬೆಳವಣಿಗೆಯ ಬಗ್ಗೆ ವಿದ್ಯಾರ್ಥಿಗಳಿಗೆ ಕಿವಿ ಮಾತುಗಳನ್ನು ಹೇಳಿದರು.

ಅದೇ ರೀತಿ ಕಾಲೇಜಿನ ಪ್ರಾಂಶುಪಾಲರಾದ ಡಾ|| ಶರಣು ಹೊನ್ನಗಜ್ಜಿ ಅವರು ಹರಸು ತಾಯಿ ಶಾರದಮ್ಮ ನಿನ್ನ ಕನ್ನಡದ ಕುಡಿಗಳ ಅಳಿಯದಂತೆ ಎಳಿಸಮ್ಮ ಈ ಕನ್ನಡದ ನುಡಿಗಳ ಧರೆಯಲಿ ಮತ್ತೆ ಬೆಳಗುತಿಹುದು ಪುಣ್ಯ ಭೂಮಿ ಕರ್ನಾಟಕ ಸಾಧುಸಂತ ಮಹಾತ್ಮರ ತಪೆÇೀಭೂಮಿ ಕರ್ನಾಟಕ ಸಾಂಧಕರಿಗೆ ದಾರಿ ತೋರೆ ಪ್ರೇರಣೆಯ ಕರ್ನಾಟಕ ಅನುದಿನಮಾ ನಮಿಸುವೆನು ನನ್ನ ತಾಯಿ ಭುವನೇಶ್ವರಿಗೆ ಎಂಬ ಸಾಲುಗಳ ಮೂಲಕ ಕನ್ನಡ ಮಹತ್ವ ಸಾದಕರ ಬಗ್ಗೆ ಮಕ್ಕಳಿಗೆ ತಿಳಿ ಹೇಳಿದರು.

Contact Your\'s Advertisement; 9902492681

ಈ ಕಾರ್ಯಕ್ರಮದಲ್ಲಿ ಕಾಲೇಜಿನ ವಿಧ್ಯಾರ್ಥಿನಿಯಾದ ಸಿದ್ದಮ್ಮಾ ಅವರು ಕನ್ನಡದ ಮಹತ್ವದ ಬಗ್ಗೆ ಸ್ವಾಮಿ ವಿವೇಕಾನಂದರು ಹೇಳಿದ ಮಾತ್ತುಗಳು ವಿವರವಾಗಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಉಪನ್ಯಾಸಕಿಯವರಾದ ಆಶಾರಾಣಿ ಕಲಕೋರೆ, ಶಿಲ್ಪಾ ಲಿಂಗದೆ, ಸುಜಾತಾ ದೇವನೂರಕರ, ಅಕ್ಷತಾ ಪಾಟೀಲ ಹಾಗೂ ವಿಧ್ಯಾರ್ಥಿಗಳು, ಪ್ರಶಾಂತ ನಿರೂಪಣೆ ಮಾಡಿದರು ಹಾಗೂ ಪ್ರೀಯಂಕಾ, ಹಸನ ಸಾಬ, ಭಗವತ, ಶರಣು, ಲಿಂಗಣ್ಣ, ಸಿದ್ದಮ್ಮ, ವಿಜಯ ಲಕ್ಷ್ಮಿ, ರಾಮು ಹಾಗೂ ಇನ್ನಿತರ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here