ಡಿಜಿಟಲ್ ಮಾಧ್ಯಮಗಳು ನೈತಿಕತೆ ಕಾಪಾಡಿಕೊಳ್ಳುವುದು ಅಗತ್ಯ: ಸೂರ್ಯಕಾಂತ ಜಮಾದಾರ

0
64

ಕಲಬುರಗಿ: ಪತ್ರಿಕೋದ್ಯಮ ಉದ್ಯಮವಾಗಿದರೇ ಮತ್ತು ವಿದ್ಯುದ್ಮಾನ (ಎಲೆಕ್ಟ್ರಾನಿಕ್ ) ಮಾಧ್ಯಮಗಳು ಟಿಆರ್ಪಿಗಾಗಿ ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತೀವೆ. ಇದರ ನಡುವೆ ಇದೀಗ ಡಿಜಿಟಲ್ ಮಾಧ್ಯಮಗಳು ಪದಾರ್ಪಣೆ ಮಾಡಿದ್ದು, ಅತಿವೇಗವಾಗಿ ಜನರಿಗೆ ತಲುಪುವ ಮತ್ತು ವಸ್ತುಸ್ಥಿತಿ ಹೊಂದಿರುವ ವರದಿಗಳನ್ನು ಜನರಿಗೆ ತಲುಪಿಸಿ ಅತಿ ವೇಗವಾಗಿ ಬೇಳೆಯುತ್ತಿವೆ ಎಂದು ಹಿರಿಯ ಪತ್ರಕರ್ತರಾದ ಸೂರ್ಯಕಾಂತ ಜಮಾದಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಕನ್ನಡ ಭವನದಲ್ಲಿ ಈ ಸುದ್ದಿ ಡಾಟ್ ಕಾಮ್ ಡಿಜಿಟಲ್ ಸುದ್ದಿ ಮಾಧ್ಯಮದ ಮೊದಲ ವರ್ಷದ ಸಂಭ್ರಮ ಕುರಿತಾಗಿ ನಡೆದ ವಿಚಾರ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. ಡಿಜಿಟಲ್ ಮಾಧ್ಯಮಗಳು ಪತ್ರಿಕೋದ್ಯಮ ಮತ್ತು ವಿದ್ಯುನ್ಮಾನಗಳಿಗೆ ಹಿಂದಿಕ್ಕುವ ನಿಟ್ಟಿನಲ್ಲಿ ಭರದಲ್ಲಿ ಸುದ್ದಿ ನೀಡುಲು ಹಪಹಪಿಸುತ್ತಿವೆ.

Contact Your\'s Advertisement; 9902492681

ಪತ್ರಕರ್ತರು ಜನರ ಸಮಸ್ಯೆಗಳಿಗೆ ಮಿಡಿಯಬೇಕಾದ ಕರ್ತವ್ಯವಾಗಿ ಡಿಜಿಟಲ್ ಮಾಧ್ಯಮಗಳಿಗೆ ಉದ್ಯಮ ಅಥವಾ ಟಿಆರ್ಪಿಗಾಗಿ ಅಗತ್ಯವಿಲ್ಲ. ಪತ್ರಕರ್ತರ ಘನತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜನರ ಸಮಸ್ಯೆಗಳಿಗೆ ಮಿಡಿಯುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ ಎಂದರು.

ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಯುವ ಕವಿತ್ರಿ ಪ್ರಿಯಾಂಕಾ ಮಾವಿನಕರ್ ಮಾತನಾಡಿ, ಪ್ರತಿಷ್ಠಿತ ಮಾಧ್ಯಮಗಳು ಬಡ ಜನರ ಸಮಸ್ಯೆಗಳನ್ನು ಬಿಟ್ಟು ವೈಭವೀಕರಣದ ಹಿಂದೆ ಬಿದ್ದಿವೆ ಜನರ ಸಮಸ್ಯೆಗಳು ಕಣ್ಮಂದೆ ಇದ್ದರೂ ಕೂಡ ಕಾಣದ ರೀತಿಯಲ್ಲಿ ಇಂದಿನ ಮಾಧ್ಯಮಗಳು ವರ್ತಿಸುತ್ತಿವ ಎಂದು ಕಳವಳ ವ್ಯಕ್ತಪಡಿಸಿದರು.

ಜನರಿಗೆ ಬೇಡಾವಾದ ಸುದ್ದಿಗಳನ್ನೆ ಮತ್ತೆ ಮತ್ತೆ ತೋರಿಸಿ ಜನರ ಗಮನ ಸೆಳೆಯುವ ಕೆಲಸ ಮಾಡುತ್ತಿವೆ. ಡಿಜಿಟಲ್ ಮಾಧ್ಯಮಗಳು ಸತ್ಯಾಂಶವದ ಹುಡುಕಾಟ ಮಾಡಿ ಜನರ ದ್ವನಿಯಾಗಬೇಕು. ಕೆಲ ಜನರಪ ಮೀಡಿಯಾಗಳು ವೈಭವೀಕರಣದ ಸುದ್ದಿ ಚಾನೆಲ್ ಗಳ ವಿರುದ್ಧ ಕಾರ್ಯ ನಿರ್ವಹಿಸುತ್ತಿರುವುದರಿಂದ ಸಾಮಾನ್ಯ ಜನರಿಗೆ ಸತ್ಯ ತಲುಪುತ್ತಿದೆ, ಡಿಜಿಟಲ್ ಮಾಧ್ಯಮಗಳ ಮೇಲೆ ಜನರು ಹೆಚ್ಚು ಒಲವು ತೋರುತ್ತಿದ್ದಾರೆಂದು ಅನಿಸಿಕೆ ಹಂಚಿಕೊಂಡರು.

ಕಾರ್ಯನಿರತ ಪತ್ರಕರ್ತರ ದ್ವನಿ ಸಂಘದ ಜಿಲ್ಲಾ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಪಗಡೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಡಿಜಿಟಲ್ ಮಾಧ್ಯಮಗಳ ಸ್ಥಿತಿಗತಿ ಹಾಗೂ ಸಮಾಜಿಕ ಜಾಲಾತಾಣಗಳ ಕುರಿತು ವಿಶೇಷ ವಿಸ್ತಾರವಾಗಿ ಉಪನ್ಯಾಸ ನೀಡಿದರು.

ಸಂವಾದ ಯುವ ಕೇಂದ್ರದ ನಾಗೇಶ್ ಹರಳಯ್ಯಾ ಅವರು ಯುವ ಜನರು ಮತ್ತು ಮಾಧ್ಯಮಗಳ ನಡುವಿನ ಸಂಬಂಧ ಮತ್ತು ಸಮಸ್ಯೆಗಳ ಕುರಿತು ಮಾಧ್ಯಮಗಳ ಪಾತ್ರಗಳ ಕುರಿತು ಕಳವಳ ವ್ಯಕ್ತಪಡಿಸಿದರು. ಸಿಯುಕೆಯ ಸಂಶೋಧನ ವಿದ್ಯಾರ್ಥಿನಿ ವಿಯಲಕ್ಷ್ಮೀ ಈ ಸುದ್ದಿ ಸಂಪಾದಕರಾದ ರಾಜೇಂದ್ರ ರಾಜ್ವಾಳ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಲಕ್ಷ್ಮಣ್ ಮಂಡಲಗೇರಾ, ಚಾಮರಾಜ ದೊಡ್ಡಮನಿ ಸೇರಿದಂತೆ ಇನ್ನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here