ಕಾರ್ಖಾನೆಗಳ ತಿದ್ದುಪಡಿ ಕಾಯ್ದೆ ವಾಪಾಸು ಪಡೆಯುವಂತೆ ಸಿಪಿಐಎಂ ಮುಖಂಡರ ಆಗ್ರಹ

0
23

ಕಲಬುರಗಿ: ದೇಶದ ಅಭಿವೃದ್ಧಿಗಾಗಿ ವಾರಕ್ಕೆ 70 ಗಂಟೆಗಳ ಕೆಲಸ ಮಾಡುವಂತೆ ಕಾರ್ಮಿಕರಿಗೆ ಕರೆ ನೀಡಿದ ಕಾರ್ಪೋರೇಟ್ ವಲಯ ಹಾಗೂ ಬಂಡವಾಳಶಾಹಿ ವಲಯದ  ಪ್ರಸ್ಥಾಪವನ್ನು ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸವಾದಿ ) ಕರ್ನಾಟಕ ರಾಜ್ಯ ಸಮಿತಿ ತಿರಸ್ಕರಿಸಿ, ತಕ್ಷಣವೇ ಕಾರ್ಖಾನೆಗಳ ತಿದ್ದುಪಡಿ ಕಾಯ್ದೆಯನ್ನು ವಾಪಾಸು ಪಡೆಯುವಂತೆ ಸಿಪಿಐಎಂ ಕಾರ್ಯದರ್ಶಿ ಯು.ಬಸವರಾಜ ಮತ್ತು ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯೆ ಮತ್ತು ಕಲಬುರಗಿ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ ಅಸಮಧಾನ ವ್ಯಕ್ತಪಡಿಸಿದ್ದಾರೆ. ಆಗ್ರಹಿಸಿದ್ದಾರೆ.

ಈ ಕುರಿತು ಜಂಟಿಯಾಗಿ ಪತ್ರಿಕಾ ಪ್ರಕಟಣೆ ನೀಡಿದ ಅವರು ಈ ಪ್ರಸ್ತಾಪಗಳು, ಸುಮಾರು ಎರಡು ನೂರು ವರ್ಷಗಳ ಹಿಂದೆಯೇ ಸಮರ ಶೀಲ ಹೋರಾಟದ ಮೂಲಕ ಜಗತ್ತಿನ ಕಾರ್ಮಿಕ ವರ್ಗ  ಗಳಿಸಿದ ವಾರಕ್ಕೆ 48 ತಾಸುಗಳ ದುಡಿಮೆಯ ಅವಧಿಯ ಹಕ್ಕನ್ನು ಕಸಿದುಕೊಳ್ಳುವ ಸಂಚಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಕಳೆದ ಎರಡು ಶತಮಾನಗಳಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನವು  ವಾಯು ವೇಗದಲ್ಲಿ ಅಭಿವೃದ್ಧಿಯಾಗುತ್ತಿರುವಾಗ, ಅದನ್ನು ಬಳಸಿಕೊಂಡು, ಕೆಲಸದ ಅವದಿಯನ್ನು ಮತ್ತಷ್ಠು ಕಡಿತ ಗೊಳಿಸಬಹುದಾದ ಮತ್ತು ಆ ಮೂಲಕ ಕಾರ್ಮಿಕರು ಹಾಗೂ ನಾಗರೀಕರಿಗೆ ಹೆಚ್ಚಿನ ವಿಶ್ರಾಂತಿಗೆ ಅನುವು ಮಾಡಿ ಕೊಡಬಹುದಾದ ಸಂದರ್ಭವಿದಾಗಿದೆ. ಈ ರೀತಿಯಲ್ಲಿ  ಕ್ರಮವಹಿಸುವ ಮೂಲಕ ಹೆಚ್ಚುವರಿ ಅವಧಿಯ ದುಡಿಮೆಗೆ ನಿರುದ್ಯೋಗಿ ಯುವಜನರನ್ನು ನೇಮಿಸಿಕೊಂಡು ನಿರುದ್ಯೋಗ ನಿವಾರಣೆಗೆ ಕ್ರಮವಹಿಸಬಹುದಾಗಿದೆ ಎಂದು ಸಲಹೆ ನೀಡಿದ್ದಾರೆ.

ಈ ರೀತಿಯ ಪ್ರಸ್ತಾಪ ಬರಬೇಕಾದ ಸಂದರ್ಭದಲ್ಲಿ, ಕಾರ್ಮಿಕರನ್ನು ಮತ್ತು ಅವರ ಬದುಕನ್ನು ಮತ್ತಷ್ಠು ಸಂಕಷ್ಟಕ್ಕೀಡು ಮಾಡುವಂತಹ ಮತ್ತು ಅವರ ಶ್ರಮವವನ್ನು ಎಥೇಚ್ಛವಾಗಿ ದೋಚಲು ಅನುವಾಗುವಂತಹ ಪ್ರಸ್ಥಾಪಗಳು ಲೂಟಿಕೋರತನದ ಪ್ರಸ್ಥಾಪಗಳಾಗಿವೆ ಎಂದು ದುರಿದ್ದಾರೆ.

ಈಗಾಗಲೇ ಕಾರ್ಮಿಕರು, ನೌಕರರ ವಾಸದ ಪ್ರದೇಶವು ಕೆಲಸದ ಸ್ಥಳದಿಂದ ಬಹಳ ದೂರದಲ್ಲಿರುವುದರಿಂದ ಈಗಾಗಲೇ ದುಡಿಮೆಗಾಗಿ ಕನಿಷ್ಠ ಹತ್ತರಿಂದ ಹನ್ನೆರಡು ತಾಸುಗಳ ಅವಧಿ ನೀಡುತ್ತಿದ್ದಾರೆ. ಇದು ಈಗಾಗಲೇ ಕಾರ್ಮಿಕರು ಹಾಗೂ ನೌಕರರ ವಿಶ್ರಾಂತಿ ಹಾಗೂ ಕುಟುಂಬಕ್ಕಾಗಿ ಬಳಸುತ್ತಿದ್ದ ಸಮಯವನ್ನು ಕಡಿತ ಗೊಳಿಸಿದೆ. ಇನ್ನು, ವಾರಕ್ಕೆ 70 ತಾಸುಗಳ ದುಡಿಮೆಯೆಂದರೆ, ಪ್ರತಿ ದಿನ ಕನಿಷ್ಢ 11 ವರೆಯಿಂದ  12 ತಾಸುಗಳ ದುಡಿಮೆಯಾಗುತ್ತದೆ. ಪ್ರಯಾಣವೂ ಸೇರಿದರೆ ಅದು  ಸುಮಾರು 14 ತಾಸುಗಳಷ್ಠಾಗುತ್ತದೆ.

ಇದು ಕಾರ್ಮಿಕರ ಹಾಗೂ ನೌಕರರ ಕುಟುಂಬದ ಹಾಗೂ ವಿಶ್ರಾಂತಿಯ ಸಮಯವನ್ನು ಮತ್ತಷ್ಠು ಮೊಟಕುಗೊಳಿಸಲಿದೆ. ಇದರಿಂದ ಕೇವಲ ಮಾಲೀಕರಿಗೆ ಈ ಹೆ ಚ್ಚುವರಿ ದುಡಿಮೆಯ ಮೂಲಕ ಭಾರೀ ಲಾಭ ಸಿಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದು, ಒಕ್ಕೂಟ ಹಾಗೂ ರಾಜ್ಯ ಸರಕಾರಗಳು ಈ ನೆಲೆಯಲ್ಲಿ ಕಾರ್ಖಾನೆ ಕಾಯ್ದೆಗೆ ತಿದ್ದುಪಡಿ ಮಾಡಿ 12 ತಾಸುಗಳದುಡಿಮೆಯ ಅವಧಿಯನ್ನು ಹೇರಲು ಹೊರಟಿವೆ. ತಕ್ಷಣವೇ ಕಾರ್ಖಾನೆಗಳ ತಿದ್ದುಪಡಿ ಕಾಯ್ದೆಯನ್ನು ವಾಪಾಸು ಪಡೆಯುವಂತೆ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here