ರೈತರ ಕೃಷಿ ಜಮೀನುಗಳಿಗೆ ನೀರು ಹರಿಸಲು ಆಗ್ರಹಿಸಿ ಪ್ರತಿಭಟನೆ

0
39

ಕಲಬುರಗಿ: ಮಹಾರಾಷ್ಟ್ರ ರಾಜ್ಯದ ಪುಣೆಯ ಉಜನಿ ಡ್ಯಾಮ್ ನಿಂದ ಭೀಮ ನದಿಗೆ ನೀರು ಬೀಡುವಂತೆ ಮತ್ತು  ಬೆಣ್ಣೆ ತೊರಾ ಜಲಾಶಯದಿಂದ ಹಾಗೂ ಗಂಡೊರಿ ನಾಲಾ ಡ್ಯಾಮ್. ಮುಲ್ಲಾ ಮಾರಿ ಎತ್ ನೀರಾವರಿ ಡ್ಯಾಮ್ ದಿಂದ ರೈತರ ಜಮೀನುಗಳಿಗೆ ನೀರು ಬೀಡುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿ ರಾಜ್ಯ ಸರಕಾರಕ್ಕೆ ಆಗ್ರಹಿಸಿದ್ದಾರೆ.

ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ಶರಣಬಸಪ್ಪ ಮಮಶೇಟಿ ಮಾತನಾಡಿ ತೊಗರಿಯ ನಾಡಿನಲ್ಲಿ ಮಳೆ ಕೊರತೆಯಿಂದ ರೈತರ ತೊಗರಿ, ಕಬ್ಬು ಹತ್ತಿ, ಸೆಂಗಾ, ಕಡಲೆ, ಜೊಳಾ, ಕುಸುಬಿ ಸೇರಿ ರೈತರು ಬೇಳೆದ ಇತರೆ ಬೆಳೆಗಳು ಒಣಗುತ್ತಿವೆ. ಮಳೆ ನೀರು ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

Contact Your\'s Advertisement; 9902492681

ಹಸಿ ಇಲ್ಲದೆ ಭೂಮಿ ತೆಂವಾಂಶ ಕಡಿಮೆ ಆಗಿ ಬೇಳೆಗಳು ಒಣಗುತ್ತಿವೆ ರೈತರು ಮಾಡಿದ ಸಾಲ ಹೇಗೆ ತಿರಸಬೇಕೆಂದು ಚಿಂತೆ ಕಾಡುತ್ತಿದೆ. ಅನ್ನದಾತರು ಜಿಗುಪ್ಸೆ ಗೊಂಡು ಸಾಲದ ಭಾದೆ ತಾಳಲಾರದೆ ಸರಣಿ ರೈತರ ಆತ್ಮಹತ್ಯೆಯ ಪ್ರಕರಣಗಳು ದಿನೆ ದಿನೆ ಹೆಚ್ಚಾಗುತ್ತಿವೆ. ಜಿಲ್ಲೆಯ ಜನರು ಅನ್ನದಾತರು ಭಿಮಾ ನದಿ ನೀರಿನ ಮೇಲೆ ನಂಬಿ ಅವಲಂಬಿತರಾಗಿರುವ ಜನರಿಗೆ ನಿರಡಿಕೆಯಾದ ಸಮಯದಲ್ಲಿ ಮಹಾರಾಷ್ಟ್ರ ರಾಜ್ಯದ ಪುಣೆ ಉಜನಿ ಡ್ಯಾಮ್ ನಿಂದ ನೀರು ಬಿಡಲಾರದೆ ನೆನೆಗುದಿಗೆ ಹಾಕಿರುವುದು ಖಂಡನೀಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳು ಮತ್ತು ಕರ್ನಾಟಕ ರಾಜ್ಯದ ನಿರಾವಾರಿ ಸಚಿವರ ತಕ್ಷಣವೇ ಉಜನಿ ಡ್ಯಾಮ್ ನಿಂದ ನೀರು ಹರಿಸಲು ರಾಜ್ಯ ಸರ್ಕಾರ ಮತ್ತು ಮಹಾರಾಷ್ಟ್ರ ರಾಜ್ಯ ಸರ್ಕಾರ ಜಂಟಿ ಸಭೆ ಕರೆದು ಉಜನಿ ಡ್ಯಾಮ್ ನಿಂದ  ಕಲಬುರಗಿ ಜಿಲ್ಲೆಯ ಅಫಜಲಪುರ ಭೀಮಾ ನದಿಗೆ ನೀರು ಹರಿಸಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.

ಬೆಣ್ಣೆ ತೊರಾ ಡ್ಯಾಮ್ ಮತ್ತು ಗಂಡೊರಿ ನಾಲಾ ಪ್ರಾಜೆಕ್ಟ್, ನಾಲಾ ಹಾಗೂ ಮುಲ್ಲಾ ಮಾರಿ ಎತ ನಿರಾವಾರಿ ಡ್ಯಾಮ್ ನಿಂದ ರೈತರ ಜಮೀನುಗಳಿಗೆ ನೀರು ಹರಿಸಬೇಕು ಆದರೆ ನೀರು ಬಿಡದೇ ಮೆನ್ ಕ್ಯಾನಲ್ ಮರಿ ಕ್ಯಾನಲ್ ಹುಳು ತುಂಬಿ ಆಪ್ ಬೇಳೆದಿದೆ ನೀರು ಮುಂದಕ್ಕೆ ಹೋಗಲು ಸಾದ್ಯವಾಗುತ್ತಿಲ್ಲ. ರೈತರ ಬೇಳೆಗಳಿಗೆ ಕನಿಷ್ಟ ನವೆಂಬರ್ ಮತ್ತು ಡಿಸೆಂಬರ್ ತಿಂಗಳ ವರೆಗೆ ಅನ್ನದಾತರ ಹಿತ ಕಾಪಾಡಲು ರೈತರ ಬೇಳೆಗಳಿಗೆ ನೀರು ಹರಿಸಲು ನೀರಾವರಿ ಅಧಿಕಾರಿಗಳು ರಾಜ್ಯದ ನಿರಾವಾರಿ ಸಚಿವರು ಹಾಗೂ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ರೆವಣಸಿದ್ದಪ್ಪಾ ಸಾತನುರು, ಬಸವರಾಜ್ ಸಿಲವಂತ ಅರಣಕಲ್, ದಿಲೀಪ್ ನಾಗೂರೆ, ಅನಿಲಕುಮಾರ ಗುತ್ತೆದಾರ, ವಿಜಯಕುಮಾರ್ ಸರಡಗಿ, ಸೊಮಣ್ಣಾ ಡೊಣ್ಣುರು, ಜಗನ್ನಾಥ ಪೂಜಾರಿ , ದತ್ತು ಮಹಾರಾಜ, ಅಂಬ್ರಿಶ ತಡಕಲ್ ಇನ್ನಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here