ಕನ್ನಡ ಧ್ವಜಾಸ್ತಂಬ ತೆರವು ಘಟನೆ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಹೊರಾಟಗಾರರ ಸಭೆ

0
18

ಸುರಪುರ: ನಗರದ ರಂಗಂಪೇಟೆಯ ದೊಡ್ಡ ಬಜಾರದಲ್ಲಿ ರಾಜ್ಯೋತ್ಸವದ ಅಂಗವಾಗಿ ಹಾಕಲಾಗಿದ್ದ ಕನ್ನಡ ಧ್ವಜಾಸ್ತಂಬವನ್ನು ತಾಲೂಕು ಆಡಳಿತ ನಗರಸಭೆ ಹಾಗೂ ಪೊಲೀಸ್ ಇಲಾಖೆಯಿಂದ ತೆರವುಗೊಳಿಸಿದ್ದ ಘಟನೆ ಖಂಡಿಸಿ ರಾಜ್ಯೋತ್ಸವ ದಿನದಂದೆ ನಗರದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳಿಂದ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗಿತ್ತು.

ಇದೇ ಘಟನೆಗೆ ಸಂಬಂಧಿಸಿ ನಗರದ ತಹಸೀಲ್ದಾರ್ ಕಚೇರಿಯಲ್ಲಿ ತಹಸೀಲ್ದಾರ್ ಕೆ.ವಿಜಯಕುಮಾರ ಅಧ್ಯಕ್ಷತೆಯಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರ ಸಭೆ ನಡೆಸಲಾಯಿತು.ಈ ಸಂದರ್ಭದಲ್ಲಿ ಅನೇಕ ಹೊರಾಟಗಾರರು ಮಾತನಾಡಿ,ಕನ್ನಡ ರಾಜ್ಯೋತ್ಸವ ದಿನದಂದೆ ಕನ್ನಡ ಧ್ವಜಾಸ್ತಂಬ ತೆರವುಗೊಳಿಸುವ ಮೂಲಕ ಸ್ವಾಭಿಮಾನಕ್ಕೆ ಅವಮಾನಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Contact Your\'s Advertisement; 9902492681

ನಂತರ ತಹಸೀಲ್ದಾರ ಕೆ.ವಿಜಯಕುಮಾರ ಮಾತನಾಡಿ,ತಾವು ಧ್ವಜಾಸ್ತಂಬ ಹಾಕಲು ಪರವಾನಿಗೆ ಪಡೆದಿಲ್ಲದ್ದರಿಂದ ತೆರವುಗೊಳಿಸಲಾಗಿದೆ,ಈಗ ನಗರಸಭೆಯ ಪೌರಾಯುಕ್ತರು ವರ್ಗಾವಣೆಯಾಗಿದ್ದು ಹೊಸಬರು ಬಂದನಂತೆ ಅವರೊಂದಿಗೆ ಮಾತನಾಡಿ ಧ್ವಜಾಸ್ತಂಬ ಹಾಕಲು ಅನುವು ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದ ನಂತರ ಕನ್ನಡಪರ ಸಾಮೂಹಿಕ ಸಂಘಟನೆಗಳ ಒಕ್ಕೂಟ ದಿಂದ ಮನವಿ ಸಲ್ಲಿಸಿ ಸಭೆ ಸಮಾಪ್ತಿಗೊಳಿಸಲಾಯಿತು.

ಸಭೆಯಲ್ಲಿ ಪಿ.ಐ ಆನಂದ ವಾಘಮೊಡೆ,ಹೋರಾಟಗಾರರಾದ ವೆಂಕಟೇಶ ನಾಯಕ ಬೈರಿಮಡ್ಡಿ,ನಿಂಗಣ್ಣ ನಾಯಕ ಬಿಜಾಸಪುರ,ಯಲ್ಲಪ್ಪ ನಾಯಕ,ಮಲ್ಲಪ್ಪ ನಾಯಕ ಕಬಾಡಗೇರ,ಮಲ್ಲು ಹೊಸಮನಿ,ಸಚಿನ ಕುಮಾರ ನಾಯಕ,ಮಲ್ಲು ವಿಷ್ಣುಸೇನಾ,ಚಂದ್ರಶೇಖರ ನಾಯಕ,,ಭೀಮು ನಾಯಕ ಮಲ್ಲಿಬಾವಿ,ಮಹೇಶ ಯಾದವ್,ನಿಂಗಣ್ಣ ಯಾದವ್,ರಾಮಕೃಷ್ಣ ನಾಯಕ ಡೊಣ್ಣಿಗೇರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here