ನಗರ ಅರಣ್ಯೀಕರಣ ವೀಕ್ಷಣೆ ಮಾಡಿದ ಜಿಲ್ಲಾಧಿಕಾರಿ ಫೌಜಿಯ್ ತರನ್ನುಮ್

0
22

ಕಲಬುರಗಿ: ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಜಿಯ್ ತರನ್ನುಮ್ ಅವರು ಗುರುವಾರದಂದು ನಗರದ ಕಾಯಕ ಸ್ಕೂಲ್ ಹತ್ತಿರ ಇರುವ ನಗರ ಅರಣ್ಯೀಕರಣ ಯೋಜನೆಯಯ ಅಭಿವೃದ್ಧಿ ಕೆಲಸವನ್ನು ವೀಕ್ಷಣೆ ಮಾಡಿದರು.

ಯೋಜನೆಯ ಅಡಿಯಲ್ಲಿ 554 ಗಿಡಗಳನ್ನು ನೆಟ್ಟಿರುವುದು ಹಾಗೂ ಪಕ್ಷಿಗಳಿಗೆ ಆಹಾರವಾಗುವಂತಹ ಹಣ್ಣಿನ ಗಿಡಗಳನ್ನು ನೋಡಿ ಇದು ಉತ್ತಮವಾಗಿದೆ ಇನ್ನಷ್ಟು ವಿಶೇಷ ಗಿಡಗಳನ್ನು ಬೆಳಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

Contact Your\'s Advertisement; 9902492681

ನಂತರ ಚಿಮ್ಮಲಗಿ ಲೇಔಟ್‌ನಲ್ಲಿ 571 ಮೀಟರ ಉದ್ದ 4 ಮೀಟರ ಅಗಲ ಇರುವ ಚರಂಡಿಯಲ್ಲಿ ಇರುವ ಮಳೆ ನೀರು ಹರಿದುಹೋಗುತ್ತಿರುವ ನೀರನ್ನು ನೋಡಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಇದಕ್ಕೆ ಇನ್ನೂ ಹೆಚ್ಚಿನ ಬೇಡಿಕೆಗಳಿದ್ದರೆ ಅಧಿಕಾರಿಗಳಿಗೆ ನನಗೆ ತಿಳಿಸಲು ಸಲಹೆ ಸೂಚನೆ ನೀಡಿದರು.

400 ಮೀಟರ ಸಿ.ಸಿ. ರಸ್ತೆಯನ್ನು ನೋಡಿ ಅಲ್ಲಿಂದ ಪೌರಕಾರ್ಮಿಕರಿಗಾಗಿ ನಿರ್ಮಿಸುತ್ತಿರುವ ಕಟ್ಟಡವನ್ನು ವೀಕ್ಷಣೆ ಮಾಡಿ ಅಲ್ಲಿನ ಸಮಸ್ಯೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ನಂತರ ನಿರ್ಮಾಣವಾಗುತ್ತಿರುವ ಅಂಗನವಾಡಿ ಕೇಂದ್ರ ಭೇಟಿ ನೀಡಿ ಅಲ್ಲಿನ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಿದರು.

ಇದೇ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಪಾಟೀಲ ಭುವನೇಶ್ವರ ದೇವಿದಾಸ, ಮಹಾನಗರ ಪಾಲಿಕೆ ಅಧೀಕ್ಷಕ ಅಭಿಯಂತರಾದ ಆರ್.ಪಿ.ಜಾಧವ, ಎ.ಇ.ಇ. ಎಂ.ಎ. ಆರೀಫ್, ಶಿವಾನಂದ ಗೌಡ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here