ಓದು ಇಲ್ಲದೆ ಬರೆಯುವ ಸಾಹಿತಿಗಳ ಸಂಖ್ಯೆ ಹೆಚ್ಚಾಗುತ್ತಿದೆ

0
12

ಸುರಪುರ: ಇಂದು ಹೆಚ್ಚಿನ ಓದು ಇಲ್ಲದೆ ತಾವು ಸಾಹಿತಿಗಳು ಎಂದು ಬರೆಯುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಇಂತಹ ಸಾಹಿತಿಗಳ ಸಾಹಿತ್ಯದಲ್ಲಿ ಚಿಂತನೆ ಸತ್ವ ಕಾಣಿಸುವುದಿಲ್ಲ ಎಂದು ಸಾಹಿತ್ಯ ಕಾಡೆಮಿ ಸಲಹಾ ಸಮಿತಿ ಸದಸ್ಯ ಸಾಹಿತಿ ಚಿದಾನಂದ ಸಾಲಿ ಮಾತನಾಡಿದರು.

ನಗರದ ಕನ್ನಡ ಸಾಹಿತ್ಯ ಸಂಘ ಸುರಪುರ ವತಿಯಿಂದ ರಾಜಾ ಮದನಗೋಪಾಲ ನಾಯಕ ಸ್ಮಾರಕ ಭವನದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಯಾವುದೇ ಸಾಹಿತಿ ಕಾಟಾಚಾರಕ್ಕೆ ಎನ್ನುವಂತೆ ಬರೆಯುವುದು ಮುಖ್ಯವಲ್ಲ,ಬೇರೆಯವರಿಂದ ಓದಿಸಿಕೊಳ್ಳುವಂತ ಸಾಹಿತ್ಯ ರಚನೆಯಾಗಬೇಕಾದರೆ,ಬರೆಯುವವರಿಗೆ ಓದು ಮುಖ್ಯವಾಗಿದೆ,ಸಾಹಿತ್ಯದಲ್ಲಿ ಬ್ರಾಹ್ಮಣ್ಯವಿರಬಾರದು ಸಮಾಜದ ಏಳಿಗೆಗಾಗಿ ರಚಿಸುವ ಸಾಹಿತ್ಯ ಅಗತ್ಯವಾಗಿದೆ ಎಂದರು.

Contact Your\'s Advertisement; 9902492681

ಆಶಯನುಡಿದ ಕಸಾಪ ನಿಕಟಪೂರ್ವ ಅಧ್ಯಕ್ಷ ಹಾಗೂ ಸಾಹಿತ್ಯ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಜಾಲವಾದಿ ಮಾತನಾಡಿ,ನಮ್ಮಲ್ಲಿಯ ಸಾಹಿತಿಗಳಾಗಿದ್ದ ಎ.ಕೃಷ್ಣ ಸುರಪುರ,ಅಂತರಾಷ್ಟ್ರೀಯ ಮಟ್ಟದ ಉರ್ದು ಸಾಹಿತಿ ತನಹಾ ತಿಮ್ಮಾಪುರ,ಗುರುಬಸವಯ್ಯ ಅಮ್ಮಾಪುರ ಅಂತವರಿಗೆ ಎಂದೋ ರಾಜ್ಯೋತ್ಸವ ಪ್ರಶಸ್ತಿ ಲಭಿಸಬೇಕಿತ್ತು,ಆದರೆ ಇಂದು ಇವರ ಪಾದದ ಧೂಳಿಗೂ ಸಮವಲ್ಲದಂತವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗುಲಬರ್ಗಾ ವಿಶ್ವವಿದ್ಯಾಲಯದ ಉರ್ದು ಮತ್ತು ಪರ್ಷಿಯನ್ ವಿಭಾಗದ ಮುಖ್ಯಸ್ಥರಾದ ಡಾ:ಅಬ್ದುಲ್ ರಬ್ ಉಸ್ತಾದ್,ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ನಬಿಲಾಲ ಮಕಾಂದಾರ ಹಾಗೂ ಸಾಹಿತಿ ಚಿದಾನಂದ ಸಾಲಿಯವರ ಕುರಿತು ಸಾಹಿತಿ ಮಹಾಂತೇಶ ಗೋನಾಲ ಮಾತನಾಡಿದರು.

ಇದೇ ಸಂದರ್ಭದಲ್ಲಿ ಸಾಹಿತಿಗಳಾದ ಡಾ:ನಿಂಗನಗೌಡ ದೇಸಾಯಿ,ಶರಣಗೌಡ ಪಾಟೀಲ್ ಜೈನಾಪುರ,ಸಿದ್ದಯ್ಯ ಪಾಟೀಲ್,ದೊಡ್ಡ ಮಲ್ಲಿಕಾರ್ಜುನ ಹುದ್ದಾರ್,ವೆಂಕಣ್ಣ ಯಾದವ್,ಕನಕಪ್ಪ ವಾಗಣಗೇರ,ಶಿವಲಿಲಾ ಮುರಾಳ,ಪಾರ್ವತಿ ದೇಸಾಯಿ,ಜ್ಯೋತಿ ದೇವಣಗಾಂವ್,ಎಚ್.ರಾಠೋಡ,ವಿಠ್ಠಲ್ ಚವ್ಹಾಣ,ವೆಂಕಟೇಶಗೌಡ ಪಾಟೀಲ್,ಎ.ಕಮಲಾಕರ ಸುರಪುರ,ರಾಜು ಕುಂಬಾರ,ನೀಲಮ್ಮ ಮಲ್ಲೆ,ವಿದ್ಯಾಕುಮಾರ ಬಡಿಗೇರ,ಪ್ರಕಾಶ ಅಲಬನೂರ,ಹನುಮಂತಪ್ಪ ಐಹೊಳೆ,ಅನ್ವರ ಜಮಾದಾರ,ಸಾಹೇಬರಡ್ಡಿ ಇಟಗಿ,ಬಿ.ಎನ್.ದೊಡ್ಮನಿ ತಮ್ಮ ಸ್ವರಚಿತ ಕವನ ವಾಚಿಸಿದರು.

ಕಾರ್ಯಕ್ರಮದ ವೇದಿಕೆ ಮೇಲೆ ಕಸಾಪ ತಾಲೂಕು ಅಧ್ಯಕ್ಷ ಶರಣಬಸಪ್ಪ ಯಾಳವಾರ,ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ ಇದ್ದರು.ಕಾರ್ಯಕ್ರಮದಲ್ಲಿ ಯಲ್ಲಪ್ಪ ಹುಲಿಕಲ್,ಜಯಲಲಿತ ಪಾಟೀಲ್,ರಾಜಶೇಖರ ದೇಸಾಯಿ,ಜೆ.ಅಗಷ್ಟಿನ್,ಲಕ್ಷ್ಮಣ ಗುತ್ತೇದಾರ,ಶ್ರೀಶೈಲ ಯಂಕಂಚಿ,ಸೋಮರಡ್ಡಿ ಮಂಗಿಹಾಳ,ಶಕುಂತಲಾ ಜಾಲವಾದಿ,ಅರುಣಾ ಚಿನ್ನಾಕಾರ,ಪ್ರಕಾಶ ಬಣಗಾರ,ರಾಘವೇಂದ್ರ ಭಕ್ರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here