ಕಲಬುರಗಿ; ಸೇಡಂ ತಾಲ್ಲೂಕಿನ ಉಡಗಿ ಗ್ರಾಮದಲ್ಲಿ ನಡೆದ ರೈತರ ತರಭೇತಿ ಕಾರ್ಯಕ್ರಮದಲ್ಲಿ ಕೆ.ವಿ. ಕೆ ಕಲಬುರಗಿ ಸಸ್ಯ ರೋಗ ತಜ್ಞ ವಿಜ್ಞಾನಿ ಡಾ.ಜಹಿರ್ ಅಹ್ಮದ್ ಹಾಗೂ ಪ್ರಕಾಶ ಕೃಷಿ ಅಧಿಕಾರಿಗಳು ಅವರು ಭಾಗವಹಿಸಿ ರೈತರನ್ನೂದ್ದೇಶಿಸಿ ಮಾತನಾಡಿದರು.
ತೊಗರಿ ಬೆಳೆ ಹೂವ ಆಡುವ ಹಂತದಲ್ಲಿ ಹಾಗೂ ಕಾಯಿ ಕಟ್ಟುವ ಸಮಯದಲ್ಲಿ ಪಲ್ಸ್ ಮ್ಯಾಜಿಕ್ 10 ಗ್ರಾ ಹಾಗೂ ಕಾರ್ಬನ್ಡೈಜಿಜಿಂ 2 ಗ್ರಾಂ ಮತ್ತು ಹುಳ, ಹಸಿರು ಕೀಡೆಗಳು ಕಂಡು ಬಂದರೆ ಇಮೇಬೆನ್ಜತೆ Emamectin Benzoate 0.5 ಗ್ರಾಂ ಒಂದು ಲೀಟರ್ ನೀರಿಗೆ ಬೆರಿಸಿ ಸಿಂಪರಣೆ ಮಾಡಬೇಕು. ಇದರಿಂದ ರೋಗ ಮತ್ತು ಕೀಟಗಳನ್ನು ಹತೋಟಿಗೆ ತಂದು ತೊಗರಿ ಬೆಳೆ ಉತ್ತಮ ಬೆಳವಣಿಗೆ ಸಹಕಾರಿಯಾಗುತ್ತದೆ.ತೊಗರಿ ನೆಟೆ ರೋಗ ಕಂಡು ಬಂದ ಜಮೀನುಗಳಲ್ಲಿಟ್ರೈಕೋಡೆರ್ಮ 5 ಗ್ರಾಂ ಒಂದು ಲೀಟರ್ ನೀರಿಗೆ ಬೆರೆಸಿ ಕಾಂಡಕ್ಕೆ ಸಿಂಪರಣೆ ಮಾಡಬೇಕು.
ರೈತರು ಮಾರುಕಟ್ಟೆಯಲ್ಲಿ ಸರಿಯಾದ ಕಿಟನಾಶಕಗಳನ್ನು ಖರೀದಿಸಿ ಸೂಕ್ತ ಮಾಹಿತಿ ಪಡೆದುಕೊಂಡು, ಸಿಂಪರಣೆ ಮಾಡುವಾಗ ಕೈ, ಬಾಯಿಗೆ, ರಕ್ಷಾಕವಚ, ಮುಖ ವಸ್ತ್ರ ಬಳಸಬೇಕು.ರೈತರು *ಕೃಷಿ ಇಲಾಖೆಯ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳ ಸಲಹೆ ಪಡೆದುಕೊಂಡು ಹೊಸ ಕೃಷಿ ತಂತ್ರಜ್ಞಾನಗಳನ್ನು ಅಳವಡಿಸಿ ತಮ್ಮ ಆಧಾಯವನ್ನು ಹೆಚ್ಚಿಸಿಕೊಳ್ಳಬೇಕು. ಬಂಗಾಳ ಕೊಲ್ಲಿ ವಾಯು ಬಾರ ಹಿಂಗಾರು ಮಳೆ ಎರಡು ದಿನಗಳ ಕಾಲ ಪ್ರಭಾವ ಬೀರಲಿದೆ.
ತೊಗರಿ ಬೆಳೆ ಹೂ ಮೊಗ್ಗಿ ಹುಳ ರೋಗ ನಿಯಂತ್ರಣಕ್ಕೆ ಸಲಹೆ ನೀಡಲಾಯಿತು. ಮೈರಾಡ, ಕೆವಿಕೆ, ನಬಾರ್ಡ್, ಕೃಷಿ ಇಲಾಖೆ, ಆಲ್ಟ್ರತೆಕ ಸಿಮೆಂಟ್, ಗ್ರಾಮ ಪಂಚಾಯಿತಿ ಅಧಿಕಾರಿಗಳು , ರೈತ ರೈತ ಮಹಿಳೆಯರು ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.